ETV Bharat / state

ಕೆಂಪೇಗೌಡ ಏರ್​ಪೋರ್ಟ್​ಗೆ ರೈಲು ಸಂಚಾರ: ವಾರದಲ್ಲಿ 6 ದಿನ ಸೇವೆ ಲಭ್ಯ - Train service available

ಇನ್ನು ಮುಂದೆ ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ ನೀವು ಕಡಿಮೆ ಸಮಯದಲ್ಲಿ, ಅತಿ ಕಡಿಮೆ ವೆಚ್ಚದಲ್ಲಿ ಆರಾಮವಾಗಿ ಪ್ರಯಾಣ ಮಾಡಬಹುದು.

Train Aervice Available To Airport From Bengalluru
ವಿಮಾನ ನಿಲ್ದಾಣ
author img

By

Published : Jan 2, 2021, 10:46 PM IST

ಬೆಂಗಳೂರು: ‌ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕು ಅಂದರೆ ಟ್ರಾಫಿಕ್​ನಲ್ಲೇ ಅರ್ಧ ದಿನ ಕಳೆದು ಹೋಗುತ್ತೆ.‌ ಇನ್ನು ಏರ್​ಪೋರ್ಟ್ ಹೋಗುವವರ ಗೋಳು ಕೇಳೋದೇ ಬೇಡ.‌ ಆದರೆ ಇನ್ನು ಮುಂದೆ ಈ‌‌ ಜಂಜಾಟ ಇರೋದಿಲ್ಲ.‌ ಏರ್​​ಪೋರ್ಟ್​ಗೆ ಹೋಗಬೇಕೆಂದರೆ ಕಡಿಮೆ ಸಮಯದಲ್ಲಿ, ಕಡಿಮೆ ವೆಚ್ಚದಲ್ಲಿ ಆರಾಮವಾಗಿ ಪ್ರಯಾಣ ಮಾಡಬಹುದು.‌

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುವ 28 ಸಾವಿರ ಸಿಬ್ಬಂದಿಗೆ ಅನುಕೂಲವಾಗಲು ಜನವರಿ 4ರಿಂದ ಏರ್​​ಪೋರ್ಟ್​ಗೆ ಹೆಚ್ಚು ರೈಲು ಸೇವೆಯನ್ನು ರೈಲ್ವೆ ಇಲಾಖೆ ಒದಗಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ 12 ಡೀಸೆಲ್ ಇಂಜಿನ್ ರೈಲು (ಡೆಮೊ), 30 ಎಲೆಕ್ಟ್ರಿಕಲ್ ಇಂಜಿನ್ ರೈಲು(ಮೆಮೊ)ಗಳು ಏರ್​​ಪೋರ್ಟ್ ಮಾರ್ಗವಾಗಿ ಸಂಚರಿಸಲಿವೆ. ಇದರ ಜತೆಗೆ ಇನ್ನೂ ಎರಡು ರೈಲುಗಳು ಸಂಚಾರ ನಡೆಸಲಿವೆ. ಯಶವಂತಪುರ ರೈಲು ನಿಲ್ದಾಣದಿಂದ ಬಂಗಾರಪೇಟೆಗೆ ಡೆಮೊ ರೈಲು ಸಂಚರಿಸಲಿದೆ.

ಇದನ್ನೂ ಓದಿ : ಅವತಾರ್ ತಂತ್ರಾಂಶದ ಮೂಲಕ ಏರ್​ಪೋರ್ಟ್​ಗೆ ಬಿಎಂಟಿಸಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ

ಈ ರೈಲು ಯಶವಂತಪುರದಿಂದ ಬೆಳಗ್ಗೆ 8.30 ಹೊರಟು ಏರ್​​ಪೋರ್ಟ್ ರೈಲು ನಿಲ್ದಾಣಕ್ಕೆ 9.16ಕ್ಕೆ ತಲುಪಲಿದೆ. ಮರಳಿ ಬಂಗಾರಪೇಟೆಯಿಂದ ಸಂಜೆ 4ಕ್ಕೆ ಹೊರಟು ಏರ್​​ಪೋರ್ಟ್ ರೈಲು ನಿಲ್ದಾಣಕ್ಕೆ 6.42ಕ್ಕೆ ಬರಲಿದೆ. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಮತ್ತೊಂದು ಡೆಮೊ ರೈಲು ಸಂಚರಿಸಲಿದ್ದು, ಇದು ಸಂಜೆ 5.55ಕ್ಕೆ ಹೊರಟು 6.50ಕ್ಕೆ ಏರ್​​ಪೋರ್ಟ್ ತಲುಪಲಿದೆ. ಬಂಗಾರಪೇಟೆಯಿಂದ ಯಶವಂತಪುರಕ್ಕೆ ಬರುವ ಡೆಮೊ ರೈಲು ಬಂಗಾರಪೇಟೆಯಲ್ಲಿ 5.30ಕ್ಕೆ ಹೊರಟು ಏರ್​​ಪೋರ್ಟ್​ಗೆ 8.25ಕ್ಕೆ ಬರಲಿದೆ. ಅಲ್ಲಿಂದ 9.25ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ತಲುಪಲಿದೆ. ಸಾಮಾನ್ಯ ರೈಲು ದರ 10 ರೂ. ಆಗಿದ್ದು, ಎಕ್ಸ್​ಪ್ರೆಸ್​ ರೈಲು ದರ 30 ರೂ. ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.