ETV Bharat / state

ಸಂಚಾರ ನಿಯಮ ಉಲ್ಲಂಘನೆ: ಯಾವೆಲ್ಲ ಪ್ರಕರಣಗಳು ಏರಿಕೆ, ಇಳಿಕೆ? - ​ ETV Bharat Karnataka

ಬೆಂಗಳೂರು ನಗರದಲ್ಲಿ ಅಜಾಗರೂಕ, ಪಾನಮತ್ತ ಚಾಲನೆಯಂಥ ಪ್ರಕರಣಗಳು ಇಳಿಮುಖವಾಗಿವೆ. ಸಿಗ್ನಲ್ ಜಂಪ್, ಸೀಟ್ ಬೆಲ್ಟ್‌ರಹಿತ ಪ್ರಕರಣಗಳು ಏರಿಕೆಯಾಗಿವೆ.

ಬೆಂಗಳೂರು ಸಂಚಾರಿ ಪೊಲೀಸರು
ಬೆಂಗಳೂರು ಸಂಚಾರಿ ಪೊಲೀಸರು
author img

By ETV Bharat Karnataka Team

Published : Dec 21, 2023, 10:00 PM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಂಚಾರ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆ‌ ಕಂಡಿದೆ. 2022ರಲ್ಲಿ 1,04,55,677 ಪ್ರಕರಣಗಳನ್ನು ದಾಖಲಿಸಿದ್ದ ಸಂಚಾರಿ ಪೊಲೀಸರು, 2023ನೇ ಸಾಲಿನ ನವೆಂಬರ್ ಅಂತ್ಯದವರೆಗಿನ ಮಾಹಿತಿಯನ್ವಯ‌ 83,97,572 ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಅಜಾಗರೂಕ ಚಾಲನೆ, ಅತಿವೇಗದ ಚಾಲನೆ, ಪರವಾನಗಿರಹಿತ ವಾಹನ ಚಾಲನೆ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖವಾದರೆ, ಸಿಗ್ನಲ್ ಜಂಪ್‌ನಂಥ ಪ್ರಕರಣಗಳು ದುಪ್ಪಟ್ಟಾಗಿವೆ.

2022ರಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಇಂಡಿಯನ್ ಮೋಟಾರ್ ವಾಹನ ಕಾಯ್ದೆಯಡಿ 8,28,976 ಪ್ರಕರಣ, ಕರ್ನಾಟಕ ಪೊಲೀಸ್ ಕಾಯ್ದೆಯಡಿ 2772 ಪ್ರಕರಣ, ಟೋಯಿಂಗ್ ಸಂಬಂಧಿಸಿದಂತೆ 3,334 ಪ್ರಕರಣ ಹಾಗೂ 96,20,595 ಆಟೋಮೇಷನ್ ಪ್ರಕರಣಸಹಿತ ಒಟ್ಟು 1,04,55,677 ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ 2023ರಲ್ಲಿ (ನವೆಂಬರ್ ಅಂತ್ಯದವರೆಗೆ) ಇಂಡಿಯನ್ ಮೋಟಾರ್ ವಾಹನ ಕಾಯ್ದೆಯಡಿ 2,34,513 ಪ್ರಕರಣ, ಕರ್ನಾಟಕ ಪೊಲೀಸ್ ಕಾಯ್ದೆಯಡಿ 868 ಪ್ರಕರಣ ಹಾಗೂ ಆಟೋಮೇಷನ್ ತಂತ್ರಜ್ಞಾನದನ್ವಯ 81,62,191 ಪ್ರಕರಣಗಳ ಸಹಿತ ಒಟ್ಟು 83,97,572 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಪ್ರಕರಣವಾರು ಅಂಕಿಅಂಶ-ಇಳಿಕೆಯಾದ ಪ್ರಕರಣಗಳು: 2022ರಲ್ಲಿ 11,042 ಅಜಾಗರೂಕ ವಾಹನ ಚಾಲನೆ ಪ್ರಕರಣಗಳು ಹಾಗೂ 50,095 ಅತಿವೇಗದ ವಾಹನ ಚಾಲನೆಯ ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ಕ್ರಮವಾಗಿ 2675 ಹಾಗೂ 2182 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ಚಾಲಕ ಹೆಲ್ಮೆಟ್‌ರಹಿತ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಆರೋಪದಡಿ 43,92,381 ಪ್ರಕರಣಗಳು ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಧರಿಸದ ಆರೋಪದಡಿ 26,08,122 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ಕ್ರಮವಾಗಿ ಅಂಥ 37,71,103 ಹಾಗೂ 11,76,832 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 2022ರಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದಡಿ 26,371 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ‌5384 ಪ್ರಕರಣಗಳು ದಾಖಲಾಗಿವೆ. ಇನ್ನು 12,07,651 ನೋ ಪಾರ್ಕಿಂಗ್ ಪ್ರಕರಣಗಳು 2022ರಲ್ಲಿ ದಾಖಲಾಗಿದ್ದರೆ ಈ ವರ್ಷ 10,78,461 ಪ್ರಕರಣಗಳು ದಾಖಲಾಗಿವೆ.

ಏರಿಕೆಯಾದ ಪ್ರಕರಣಗಳು: ಸಿಗ್ನಲ್ ಜಂಪ್, ವಾಹನ ಚಲಾಯಿಸುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸದಿರುವ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. 2022ರಲ್ಲಿ 4,20,541 ಸಿಗ್ನಲ್ ಜಂಪ್ ಪ್ರಕರಣಗಳು ದಾಖಲಾಗಿದ್ದವು, ಆದರೆ 2023ರಲ್ಲಿ 10,74,595 ಸಿಗ್ನಲ್ ಜಂಪ್ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ವಾಹನ ಚಾಲನೆ ಸಂದರ್ಭದಲ್ಲಿ ಸೇಫ್ಟಿ ಬೆಲ್ಟ್ ಧರಿಸದ 1,22,929 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ಅಂತಹ 7,65,296 ಪ್ರಕರಣಗಳು ದಾಖಲಾಗಿವೆ.

''ಸಂಚಾರಿ‌ ಪೊಲೀಸ್ ಸಿಬ್ಬಂದಿಗಳನ್ನು ಅಗತ್ಯವಿರುವ ಬೇರೆಡೆಗಳಲ್ಲಿ ಅಂದರೆ ಸಂಚಾರ ದಟ್ಟಣೆ ನಿರ್ವಹಣೆಯಂಥ ಕಡೆಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚು ತಂತ್ರಜ್ಞಾನಾಧಾರಿತವಾದ ಡಿಜಿಟಲ್‌ ಪ್ರಕರಣಗಳನ್ನು ದಾಖಲಿಸಲಾಗುತ್ತಿರುವುದರಿಂದ ಕೆಲವೊಂದು ಉಲ್ಲಂಘನೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿರುವುದನ್ನು ಕಾಣಬಹುದು. ಮುಖ್ಯವಾಗಿ ಸಂಚಾರಿ ನಿಯಮಗಳನ್ನು ಸಾರ್ವಜನಿಕರು‌ ಪಾಲಿಸಬೇಕು'' ಎಂದು ಬೆಂಗಳೂರು ಸಂಚಾರ ನಿಯಂತ್ರಣ ಕೇಂದ್ರದ ಅಧಿಕಾರಿ ಹೇಳಿದರು.

ಇದನ್ನೂ ಓದಿ: ಒಂದೇ ಸ್ಕೂಟಿಯಿಂದ 643 ಬಾರಿ ಸಂಚಾರ ನಿಯಮ ಉಲ್ಲಂಘನೆ: ಬಿತ್ತು 3.22 ಲಕ್ಷ ರೂ. ದಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.