ETV Bharat / state

ಟ್ರಾಫಿಕ್ ಪೊಲೀಸರೊಂದಿಗೆ ಕೈಜೋಡಿಸಿದ ಪೀಪಲ್ ಟ್ರೀ ಆಸ್ಪತ್ರೆ.. - ಟ್ರಾಫಿಕ್ ಪೊಲೀಸರೊಂದಿಗೆ ಕೈ ಜೋಡಿಸಿದ ಪೀಪಲ್ ಟ್ರೀ ಆಸ್ಪತ್ರೆ

ಇಂದು ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆ ಹಾಗೂ ನಗರ ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಯಿತು.

ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ
awareness programe in Bangalore
author img

By

Published : Jan 20, 2020, 11:09 PM IST

ಬೆಂಗಳೂರು: ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ನಗರ ಟ್ರಾಫಿಕ್ ಪೊಲೀಸರೊಂದಿಗೆ ಪೀಪಲ್ ಟ್ರೀ ಆಸ್ಪತ್ರೆ ಕೈಜೋಡಿಸಿದ್ದು, ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಸಲಾಯಿತು.

ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಆಸ್ಪತ್ರೆಯ ಸಿಇಒ ಜ್ಯೋತಿ, ಅಪಘಾತಗಳು ಸಂಭವಿಸಿದಾಗ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ.

ಅದಕ್ಕೆ ಬೇಕಾದ ಎಲ್ಲಾ ಆಧುನಿಕ ಸೌಲಭ್ಯಗಳೂ ನಮ್ಮ ಆಸ್ಪತ್ರೆಯಲ್ಲಿವೆ. ಆದರೆ, ಅಪಘಾತಗಳು ಸಂಭವಿಸದಂತೆ ತಡೆಯುವುದು ಕೂಡ ನಮ್ಮ ಸಾಮಾಜಿಕ ಬದ್ದತೆ. ಇದಕ್ಕೆ ಪೀಪಲ್ ಟ್ರೀ ಆಸ್ಪತ್ರೆ ನಿಮ್ಮೊಂದಿಗೆ ಕೈಜೋಡಿಸಲಿದೆ ಎಂದು ಹೇಳಿದರು. ಅಪಘಾತದಲ್ಲಿ ಗಾಯಗೊಂಡ ರೋಗಿಗಳ ವೇದನೆ ನೋಡುತ್ತೇವೆ. ರಸ್ತೆ ಸುರಕ್ಷತೆ ಎಲ್ಲರೂ ಪಾಲಿಸಿದರೆ ಮಾತ್ರ ಅಪಘಾತಗಳನ್ನು ತಡೆಯಲು ಸಾಧ್ಯ. ಅಪಘಾತಕ್ಕೀಡಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತಂದವರಿಗೆ ಸನ್ಮಾನಿಸುತ್ತಿದ್ದೇವೆ. ಈ ಕುರಿತು ಜಾಗೃತಿ ಅಭಿಯಾನ, ಆ್ಯಂಬುಲೆನ್ಸ್ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಸಿಒಒ ಡಾ.ಸಂದೀಪ್ ಡಿಸೋಜ ಮಾತನಾಡಿ, ಭಾರತದಲ್ಲಿ ವರ್ಷಕ್ಕೆ 1.50ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. 6 ಲಕ್ಷ ಜನರು ಅಪಘಾತಕ್ಕೀಡಾಗುತ್ತಿದ್ದಾರೆ. ಗಾಯಗೊಂಡವರ ಸಂಖ್ಯೆ ದೊಡ್ಡದಿದೆ. ಇದು ದಿನೇದಿನೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಬ್ಇನ್ಸ್​​ಪೆಕ್ಟರ್​ ಹನುಮಂತರಾಜು ಮಾತನಾಡಿ, ವಾಹನಸವಾರರು ಸರಿಯಾಗಿ ಚಲಿಸಿದರೆ ಅಪಘಾತಗಳನ್ನು ತಡೆಯಬಹುದು. ಹೆಲ್ಮೇಟ್ ಧರಿಸಬೇಕು. ಮೊಬೈಲ್ ಬಳಕೆ ಮಾಡಬಾರದು. ಆದರೆ, ಯಾರೂ ಸರಿಯಾಗಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದರು. ಬಳಿಕ ಸಬ್ಇನ್ಸ್​​ಪೆಕ್ಟರ್​ ನರಸಿಂಹ ಮೂರ್ತಿ ಮಾತನಾಡಿ, ತಂದೆ-ತಾಯಿ ಗಾಡಿ ಕೊಡಿಸುತ್ತಾರೆ. ಮಕ್ಕಳು ನಿಯಮಗಳನ್ನು ಪಾಲಿಸದೆ ರಸ್ತೆಗೆ ಇಳಿಯುತ್ತಾರೆ. ಯುವಕ, ಯುವತಿಯರು ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದರು.

Intro:Body:
ಬೆಂಗಳೂರು: ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಪೀಪಲ್ ಟ್ರೀ ಆಸ್ಪತ್ರೆ ಕೈಜೋಡಿಸಿದೆ.
ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಆಸ್ಪತ್ರೆಯ ಸಿಇಒ ಜ್ಯೋತಿ,
“ಅಪಘಾತಗಳು ಸಂಭವಿಸಿದಾಗ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ. ಅದಕ್ಕೆ ಬೇಕಾದ ಎಲ್ಲಾ ಆಧುನಿಕ ಸೌಲಭ್ಯಗಳೂ ನಮ್ಮ ಆಸ್ಪತ್ರೆಯಲ್ಲಿವೆ. ಆದರೆ ಅಪಘಾತಗಳು ಸಂಭವಿಸದಂತೆ ತಡೆಯುವುದು ಕೂಡ ನಮ್ಮ ಸಾಮಾಜಿಕ ಬದ್ದತೆಯಾಗಿದೆ. ಇದಕ್ಕೆ ಪೀಪಲ್ ಟ್ರೀ ಆಸ್ಪತ್ರೆ ನಿಮ್ಮೊಂದಿಗೆ ಕೈಜೋಡಿಸಲಿದ್ದೇವೆ ಎಂದು ಹೇಳಿದರು.

"ಅಪಘಾತದಲ್ಲಿ ಗಾಯಗೊಂಡ ರೋಗಿಗಳ ವೇದನೆಯನ್ನು ಪ್ರತಿದಿನ ನಾವು ತುಂಬಾ ಹತ್ತಿರದಿಂದ ನೋಡುತ್ತೇವೆ. ರಸ್ತೆ ಸುರಕ್ಷತೆಯನ್ನು ಎಲ್ಲರೂ ಪಾಲಿಸಿದರೆ ಮಾತ್ರ ಅಪಘಾತಗಳನ್ನು ತಡೆಯಲು ಸಾಧ್ಯ. ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತಂದವರಿಗೆ ಸನ್ಮಾನಿಸುತ್ತಿದ್ದೇವೆ. ಅಪಘಾತಗಳ ಬಗ್ಗೆ ಜಾಗೃತಿ ಅಭಿಯಾನ, ಅಂಬ್ಯುಲೆನ್ಸ್ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ' ಎಂದು ಅವರು ಹೇಳಿದರು.
ಸಿಒಒ ಡಾ.ಸಂದೀಪ್ ಡಿಸೋಜ ಮಾತನಾಡಿ, "ಭಾರತದಲ್ಲಿ ವರ್ಷಕ್ಕೆ 1.50ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. 6 ಲಕ್ಷ ಜನರು ಅಪಘಾತಕ್ಕೀಡಾಗುತ್ತಿದ್ದಾರೆ. ಗಾಯಗೊಂಡವರ ಸಂಖ್ಯೆ ದೊಡ್ಡದಿದೆ. ಇದು ದಿನೇ ದಿನೇ ಹೆಚ್ಚುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದರು.
ಸಬ್ಇನ್ಸ್ಪೆಕ್ಟರ್ (ಟ್ರಾಫಿಕ್) ಹನುಮಂತರಾಜು ಮಾತನಾಡಿ, "ವಾಹನಸವಾರರು ಸರಿಯಾಗಿ ಚಲಿಸಿದರೆ ಅಪಘಾತಗಳನ್ನು ತಡೆಯಬಹುದು. ಹೆಲ್ಮೆಟ್ ಧರಿಸಬೇಕು, ಮೊಬೈಲ್ ಬಳಕೆ ಮಾಡಬಾರದು. ಆದರೆ ಯಾರೂ ಸರಿಯಾಗಿ ನಿಯಮಗಳನ್ನು ಪಾಲಿಸುತ್ತಿಲ್ಲ' ಎಂದರು.
ಸಬ್ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಮಾತನಾಡಿ, "ತಂದೆ, ತಾಯಿ ಗಾಡಿ ಕೊಡಿಸುತ್ತಾರೆ. ಮಕ್ಕಳು ನಿಯಮಗಳನ್ನು ಪಾಲಿಸದೆ ರಸ್ತೆಗೆ ಇಳಿಯುತ್ತಾರೆ. ಯುವಕ, ಯುವತಿಯರು ನಿಯಮಗಳನ್ನು ಸರಿಯಾಗಿ ಪಾಲಿಸಬೇಕು' ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತೆ ಕುರಿತ ವಸ್ತುಪ್ರದರ್ಶನ ಎಲ್ಲರ ಗಮನಸೆಳೆಯಿತು. ಚಿಕ್ಕಮಕ್ಕಳಿಂದ ಹಿಡಿದು ಎಲ್ಲರೂ ರಸ್ತೆನಿಯಮಗಳಿಗೆ ಬದ್ಧರಾಗಿರಬೇಕು ಎಂಬ ಮಾಹಿತಿಯನ್ನು ಈ ಪ್ರದರ್ಶನ ಒಳಗೊಂಡಿತ್ತು. ಹೆಲ್ಮೆಟ್ ಧರಿಸುವುದರಿಂದ ಹಿಡಿದು, ರಸ್ತೆಯನ್ನು ದಾಟುವ ವಿಧಾನಗಳನ್ನು ಕೂಡ ಇಲ್ಲಿ ವಿವರಿಸಲಾಗಿತ್ತು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.