ETV Bharat / state

ದಸರಾ ಹಿನ್ನೆಲೆ ತಮ್ಮೂರಿಗೆ ಹೊರಟ ಜನ: ನೆಲಮಂಗಲ ಬಳಿ ಟ್ರಾಫಿಕ್​ ಜಾಮ್

ವಿಜಯದಶಮಿ ಹಿನ್ನೆಲೆ ಬೆಂಗಳೂರಿನಲ್ಲಿ ನೆಲೆಸಿರುವ ಜನ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ನೆಲಮಂಗಲ ಬಳಿ ಟ್ರಾಫಿಕ್​ ಜಾಮ್​ ಆಗಿದೆ.

das
ನೆಲಮಂಗಲ ಬಳಿ ಟ್ರಾಫಿಕ್​ ಜಾಮ್
author img

By

Published : Oct 24, 2020, 3:46 PM IST

ನೆಲಮಂಗಲ : ದಸರಾ ಹಬ್ಬದ ಸಾಲು ಸಾಲು ರಜೆ ಹಿನ್ನೆಲೆ ರಾಜ್ಯ ರಾಜಧಾನಿಯಿಂದ ತಮ್ಮೂರುಗಳತ್ತ ಜನ ತೆರಳುತ್ತಿದ್ದಾರೆ. ಇದರಿಂದ 8ನೇ ಮೈಲಿ ನವಯುಗ ಟೋಲ್ ಬಳಿ ಸಂಚಾರ ದಟ್ಟಣೆ ಉಂಟಾಗಿದೆ.

ನೆಲಮಂಗಲ ಬಳಿ ಟ್ರಾಫಿಕ್​ ಜಾಮ್

ವಿಜಯದಶಮಿ ಹಿನ್ನೆಲೆ ಕುಟುಂಬ ಸಮೇತರಾಗಿ ಜನ ಬೆಂಗಳೂರು ಬಿಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ರಾಜ್ಯದ 23ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದ್ದು, ನವಯುಗ ಟೋಲ್ ಮುಖಾಂತರವೇ ಎಲ್ಲ ವಾಹನಗಳು ಸಂಚರಿಸಬೇಕಿದೆ.

ಇದರಿಂದ ಸಂಚಾರ ದಟ್ಟಣೆ ಅಧಿಕವಾಗಿದ್ದು, ಟ್ರಾಫಿಕ್‌ ಜಾಮ್​ನಲ್ಲಿ ಆ್ಯಂಬುಲೆನ್ಸ್ ಸಹ ಸಿಲುಕಿ‌ ಪರದಾಡುವ ಸ್ಥಿತಿ ಎದುರಾಗಿದೆ. ಇಷ್ಟೆಲ್ಲ ಸಂಚಾರ ದಟ್ಟಣೆಯಾದರೂ ಸಹ ಪೀಣ್ಯ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.