ಬೆಂಗಳೂರು: ಕಳೆದ ಒಂದು ತಿಂಗಳಿಂದ ಇದ್ದ ಲಾಕ್ಡೌನ್ನಲ್ಲಿ ಕೆಲ ಸಡಿಲಿಕೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಿದ್ದಾರೆ. ಆದರೆ ಇದು ಯೆಡವಟ್ಟಿನ ನಿರ್ಧಾರ ಎಂಬಂತೆ ಬಾಸವಾಗುತ್ತಿದೆ.
ಹೌದು ಇದಕ್ಕೆಲ್ಲ ಕಾರಣ ರಾಜಧಾನಿಯ ಕೆಲವೆಡೆ ಕಂಡು ಬಂದ ಟ್ರಾಫಿಕ್ ಜಾಮ್. ಲಾಕ್ಡೌನ್ ಸಡಿಲಿಕೆ ಆದೇಶ ಹೊರ ಬೀಳುತ್ತಿದ್ದಂತೆ ರಸ್ತೆಗೆ ವಾಹನಗಳ ಎಂಟ್ರಿ ಕೊಟ್ಟಿದ್ದು, ಸಂಚಾರ ದಟ್ಟಣೆ ಶುರುವಾಗಿದೆ. ಸದಾ ಪ್ಯಾಲೇಸ್ ರೋಡ್ನಲ್ಲಿ ಪೊಲೀಸರು ಪ್ರತಿಯೊಂದು ವಾಹನ ತಪಾಸಣೆ ಮಾಡ್ತಿರೋದ್ರಿಂದ ವಾಹನ ದಟ್ಟಣೆ ಹೆಚ್ಚಾಗಿದೆ.ಕಾವೇರಿ ಜಂಕ್ಷನ್ ಬಳಿ ವಾಹನಗಳು ರೋಡ್ನಲ್ಲಿ ಸಾಲಾಗಿ ನಿಂತಿದ್ದವು. ಇದಲ್ಲದೇ ಇಂದಿನಿಂದ ಲಾಕ್ಡೌನ್ನಿಂದ ಐ.ಟಿ.ಬಿ.ಟಿ.ಗೆ ನಿರ್ಬಂಧ ಸಡಿಲ ಹಿನ್ನೆಲೆ ಟ್ರಾಫಿಕ್ ಜಾಮ್ ಆಗಿದೆ.
ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ರಸ್ತೆಗಳಲ್ಲಿವ ವಾಹನ ದಟ್ಟಣೆ ಹೆಚ್ಚಾಗಿದೆ. ಕಿಲೋ ಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದು,ಟೆಕ್ಕಿಗಳಿಲ್ಲದೇ ಬಣಗುಡುತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು ಇಂದು ಫುಲ್ ಬ್ಲಾಕ್ ಆಗಿದ್ದವು. ಇನ್ನು ಪಾಸ್ ಇಲ್ಲದೇ ಟೆಕ್ಕಿಗಳು ಕಚೇರಿಗೆ ಬರುತ್ತಿರುವುದರಿಂದ ಪಾಸಿಲ್ಲದ ಟೆಕ್ಕಿಗಳ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರ್ಕಾರದ ಆದೇಶದ ಬಗ್ಗೆ ತಿಳಿಯದೇ ಗೊಂದಲದಲ್ಲಿರೋ ಟೆಕ್ಕಿಗಳು ಐ.ಡಿ ಕಾರ್ಡ್ ತೋರಿಸಿ ಕೆಲಸಕ್ಕೆ ಬರುತ್ತಿದ್ದಾರೆ. ಆದ್ರೆ ಪೊಲೀಸರು ಪಾಸ್ ಇದ್ದವರಿಗೆ ಮಾತ್ರ ಕೆಲಸಕ್ಕೆ ಹೋಗಲು ಬಿಡುತ್ತಿದ್ದು, ಪಾಸ್ ಇಲ್ಲದ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.