ETV Bharat / state

ಬೆಂಗಳೂರಿನಲ್ಲಿ ಓರ್ವನಿಂದ 23 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 115ಕ್ಕೆ ಏರಿಕೆ - 115 corona positive in Bangalore

ಬೊಮ್ಮನಹಳ್ಳಿ ವಲಯದ ಹೊಂಗಸಂದ್ರ ವಾರ್ಡ್​ನಲ್ಲಿ ಒಬ್ಬ ವ್ಯಕ್ತಿಯಿಂದಲೇ 23 ಮಂದಿಗೆ ಕೊರೊನಾ ಸೋಂಕು ಹರಡಿದೆ.

24 ಕೊರೊನಾ ಪಾಸಿಟಿವ್
24 ಕೊರೊನಾ ಪಾಸಿಟಿವ್
author img

By

Published : Apr 24, 2020, 11:06 PM IST

ಬೆಂಗಳೂರು: ನಗರದ ಕೊರೊನಾ ಸೋಂಕಿತರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ ವಲಯದ ಹೊಂಗಸಂದ್ರ ವಾರ್ಡ್​ನಲ್ಲಿ ಒಬ್ಬ ವ್ಯಕ್ತಿಯಿಂದಲೇ 23 ಮಂದಿಗೆ ಕೊರೊನಾ ಹರಡಿದೆ. 174 ಮಂದಿಯನ್ನ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಇದರಲ್ಲಿ ಒಟ್ಟು 24 ಮಂದಿಗೆ ಕೊರೊನಾ ಸೋಂಕು‌ ಕಾಣಿಸಿಕೊಂಡಿದೆ.

ಇನ್ನು ಪಾದರಾಯನಪುರದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಟಿಪ್ಪುನಗರದಲ್ಲಿ ಆರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 35 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಸೋಂಕಿತರ ಸಂಖ್ಯೆ 115 ಕ್ಕೆ ಏರಿಕೆ
ಸೋಂಕಿತರ ಸಂಖ್ಯೆ 115ಕ್ಕೆ ಏರಿಕೆ

ಹೊಂಗಸಂದ್ರದ ಹೆಚ್ಚಿನ ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳಿರಲಿಲ್ಲ. ಗಂಟಲು ದ್ರವ ಪರೀಕ್ಷಿಸಿದಾಗಷ್ಟೇ ಸೋಂಕು ದೃಢವಾಗಿದೆ. ಇದು ಸವಾಲಿನ ವಿಷಯವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 115 ಪ್ರಕರಣಗಳಲ್ಲಿ ಈವರೆಗೆ 49 ಮಂದಿ ಗುಣಮುಖರಾಗಿದ್ದಾರೆ. ನಗರದ ಒಟ್ಟು 36 ವಾರ್ಡ್​ಗಳಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.