ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪಕ್ಷದ ಕಾರ್ಯಕರ್ತರ ಜೊತೆ ನಾಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಡಿಯೋ ಸಂವಾದ ನಡೆಸಲಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದಿಂದಲೇ ನಾಳೆ ಬೆಳಗ್ಗೆ 11.30ಕ್ಕೆ ಕುಮಾರಸ್ವಾಮಿ ಜೂಮ್ ಆ್ಯಪ್ ಮೂಲಕ ಮಾತನಾಡಲಿದ್ದಾರೆ. ಕೋವಿಡ್ ಸ್ಥಿತಿಗತಿ ಹಾಗೂ ಪಕ್ಷ ಸಂಘಟನೆಯ ಕುರಿತು ಪಕ್ಷದ ಕಾರ್ಯಕರ್ತರ ಜೊತೆ ಹೆಚ್ಡಿಕೆ ಚರ್ಚಿಸಲಿದ್ದಾರೆ.
![Tomorrow Kumaraswamy Video Conference](https://etvbharatimages.akamaized.net/etvbharat/prod-images/kn-bng-01-hd-kumaraswamy-video-conference-script-7208083_21072020093828_2107f_1595304508_6.jpg)
ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳ ಕಾರ್ಯಕರ್ತರೊಂದಿಗೆ ಕುಮಾರಸ್ವಾಮಿ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.