ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದೇ ವಿಶ್ವಾಸಮತ ಯಾಚಿಸುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.
ಕೆಐಎಎಲ್ ನಲ್ಲಿ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಇಂದು ಬಹುಮತ ಸಾಬೀತುಮಾಡುತ್ತೇವೆ ಕಾಲಾವಕಾಶ ನೀಡಿ ಎಂದಿದ್ದರು. ಅದೇ ರೀತಿ ಸಿಎಂ ಕುಮಾರಸ್ವಾಮಿ ಕೂಡ ಇಂದು ಸದನಕ್ಕೆ ಬಂದಿದ್ದಾರೆ. ಇದರಿಂದಾಗಿ ಇಂದು ಸದನ ಮುಗಿಯುವುದರೊಳಗೆ ವಿಶ್ವಾಸಮತ ಯಾಚಿಸುವ ನಂಬಿಕೆ ಇದೆ ಎಂದರು.
ಅಲ್ಲದೆ, ಇಂದು ಮತಯಾಚನೆಗೆ ಸ್ಪೀಕರ್ ಅವಕಾಶ ಮಾಡಿಕೊಡುತ್ತಾರೆ. ಬಹುಮತ ಕಳೆದುಕೊಂಡ ಮೇಲೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಬಹುಮತ ಇಲ್ಲದಿದ್ದರೂ ಯಾಕೆ ಕುರ್ಚಿಗೆ ಆಂಟಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಸಿಎಂ ಹೇಳಿದ ಹಾಗೆ ಇಂದು ನಡೆದುಕೊಳ್ತಾರೆ ಎಂಬ ವಿಶ್ವಾಸ ನಮ್ಮದು ಎಂದು ಸಂಸದೆ ಶೋಭಾ ಹೇಳಿದರು.
ರಾಜ್ಯದ ಜನ ಸಹ ಇದನ್ನೆಲ್ಲಾ ನೋಡುತ್ತಿದ್ದಾರೆ. ಸರ್ಕಾರದಿಂದ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ಎರಡು ತಿಂಗಳಿಂದ ಜನರು ಏನಾಗುತ್ತದೆ ಅಂತ ಕಾದು ಕಾದು ರೋಸಿಹೋಗಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.