ETV Bharat / state

ಸಂಘ ಪರಿವಾರ ಯಾವತ್ತೂ ಅಂಬೇಡ್ಕರರ ಸಂವಿಧಾನ ಒಪ್ಪಿಕೊಂಡಿಲ್ಲ: ಸಿದ್ದರಾಮಯ್ಯ - ಈಟಿವಿ ಭಾರತ ಕನ್ನಡ

ಸಂಘ ಪರಿವಾರ ಯಾವತ್ತೂ ಕೂಡ ಅಂಬೇಡ್ಕರರ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ದೇಶದಲ್ಲಿ ಸಮಾನತೆ ಬರಬಾರದು ಎಂಬುದು ಸಂಘ ಪರಿವಾರದವರ ಉದ್ದೇಶ. ಸಮಾನತೆ ಬಂದಾಗ ಶೋಷಣೆ ಮಾಡಲು ಸಾಧ್ಯವಿಲ್ಲ ಎಂದು ಅವರಿಗೂ ಗೊತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

today-constitution-is-in-the-hands-of-anti-democrats-says-siddaramaiah
ಸಂಘ ಪರಿವಾರ ಯಾವತ್ತೂ ಅಂಬೇಡ್ಕರರ ಸಂವಿಧಾನ ಒಪ್ಪಿಕೊಂಡಿಲ್ಲ: ಸಿದ್ದರಾಮಯ್ಯ
author img

By

Published : Nov 17, 2022, 8:31 PM IST

ಬೆಂಗಳೂರು: ಸಂವಿಧಾನ ಒಳ್ಳೆಯವರ ಕೈಲಿದ್ದರೆ ಒಳ್ಳೆಯದಾಗಲಿದೆ, ಕೆಟ್ಟವರ ಕೈಲಿದ್ದರೆ ಕೆಟ್ಟದ್ದಾಗಲಿದೆ. ಹಾಗಾಗಿ ಸಂವಿಧಾನ ಬದ್ಧತೆ ಇರುವವರ ಕೈಯಲ್ಲಿ ಸಂವಿಧಾನ ಇದ್ದಾಗ ಮಾತ್ರ ಜನರಿಗೆ ಒಳ್ಳೆಯದಾಗಲಿದೆ. ಇಂದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವವರ ಕೈಯಲ್ಲಿ ಸಂವಿಧಾನವಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಡಾ. ಬಿ.ಆರ್.‌ ಅಂಬೇಡ್ಕರ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಶಿವಮಲ್ಲು ರಚಿಸಿರುವ ಪ್ರಜಾಪ್ರಭುತ್ವದ ಬಲವರ್ಧನೆ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು

ಬಾಬಾ ಸಾಹೇಬ್‌ ಅಂಬೇಡ್ಕರರು ಸಂವಿಧಾನ ಸಭೆಯಲ್ಲಿ ಭಾಷಣ ಮಾಡುವಾಗ, ನಾವೇನೋ ಇಂದು ಸಂವಿಧಾನ ರಚನೆ ಮಾಡಿಕೊಂಡಿದ್ದೇವೆ. ನಮಗೆ ಸಂವಿಧಾನದ ಮೂಲಕ ರಾಜಕೀಯ ಸಮಾನತೆ ಸಿಕ್ಕಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಮಾನತೆಯನ್ನು ನಿರಾಕರಿಸಲಾಗಿದೆ. ನಮಗೆ ಕೇವಲ ಮತದಾನದ ಹಕ್ಕು ಇದ್ದರೆ ಸಾಲದು, ಇದರಿಂದ ಸ್ವಾತಂತ್ರ್ಯ ಸಾರ್ಥಕವಾಗಲ್ಲ. ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗಲಿದೆ ಎಂಬುದಾಗಿ ಹೇಳಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು.

ಎಸ್.ಶಿವಮಲ್ಲು ರಚಿಸಿದ ಪ್ರಜಾಪ್ರಭುತ್ವದ ಬಲವರ್ಧನೆ ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಸಂವಿಧಾನ ರಕ್ಷಣೆ ಮಾಡುತ್ತಾರಾ?: ಇಂದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವವರ ಕೈಯಲ್ಲಿ ಸಂವಿಧಾನವಿದೆ. ಸಂಘ ಪರಿವಾರ ಯಾವತ್ತೂ ಕೂಡ ಅಂಬೇಡ್ಕರರ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ದೇಶದಲ್ಲಿ ಸಮಾನತೆ ಬರಬಾರದು ಎಂಬುದು ಸಂಘ ಪರಿವಾರದವರ ಉದ್ದೇಶ. ಸಮಾನತೆ ಬಂದಾಗ ಶೋಷಣೆ ಮಾಡಲು ಸಾಧ್ಯವಿಲ್ಲ ಎಂದು ಅವರಿಗೂ ಗೊತ್ತಿದೆ ಎಂದು ಹೇಳಿದರು.

ಬಾಬಾ ಸಾಹೇಬರು ರಚನೆ ಮಾಡಿರುವ ಸಂವಿಧಾನವನ್ನು ಬದಲಾವಣೆ ಮಾಡಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅನಂತ ಕುಮಾರ್‌ ಹೆಗ್ಡೆ ಹೇಳಿದ್ದರು, ಅವರನ್ನು ನರೇಂದ್ರ ಮೋದಿ, ಅಮಿತ್‌ ಶಾ ಅವರಾಗಲೀ ಸಚಿವ ಸಂಪುಟದಿಂದ ವಜಾ ಮಾಡಿದ್ರಾ?. ಕನಿಷ್ಠ ಅವರ ವಿರುದ್ಧ ಶಿಸ್ತುಕ್ರಮವನ್ನೂ ಕೈಗೊಂಡಿಲ್ಲ. ಇಂಥವರು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಣೆ ಮಾಡುತ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅಸಮಾನತೆ ನಿರ್ಮಾಣವಾಗಿರುವ ಕಡೆ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯವಿಲ್ಲ. ಒಬ್ಬ ಅಂಬೇಡ್ಕರ್‌ ನಮ್ಮೆಲ್ಲರಿಗೂ ಸಮಾನತೆ ತಂದುಕೊಡುವುದಾದರೆ ಅವರ ಚಿಂತನೆಗಳಿಗೆ ನಾವು ಬಲ ತುಂಬಬೇಕು ಅಲ್ವಾ?. ಅಂಬೇಡ್ಕರ್‌ ಆಶಯಗಳ ಹಾದಿಯಲ್ಲಿ ನಾವು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಅದು ಸಂವಿಧಾನದ ರೀತಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಜನರೇ ಅದನ್ನು ಕಿತ್ತುಬಿಸಾಕುವಷ್ಟು ಜಾಗೃತರಾಗಬೇಕು. ಆಗ ಮಾತ್ರ ಸಂವಿಧಾನ ಉಳಿಯಲು ಸಾಧ್ಯ, ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ ಎಂದು ಹೇಳಿದರು.

ಶೇ.3ರಷ್ಟಿರುವ ಜನರಿಗೆ ಶೇ.10ರಷ್ಟು ಮೀಸಲು ಬೇಕಾ?: ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದು ಸರಿಯಾ?. ಈ ಮೀಸಲಾತಿ ಅಡಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮಾತ್ರ ಅವಕಾಶ ಇದೆ. ಹಿಂದುಳಿದ, ದಲಿತ ಸಮುದಾಯದ ಬಡವರಿಗೆ ಇದರಲ್ಲಿ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ. ಈಗ ರಾಜ್ಯದಲ್ಲಿ ಶೇ.3ರಷ್ಟು ಸಾಮಾನ್ಯ ವರ್ಗದ ಜನರಿದ್ದಾರೆ. ಅವರಿಗೆ ಶೇ.10ರಷ್ಟು ಮೀಸಲು ಬೇಕಾ ಎಂದು ಸಿದ್ದರಾಮಯ್ಯ ಕೇಳಿದರು.

ಆದರೂ ನಾವೆಲ್ಲ ಸುಮ್ಮನೆ ಇದ್ದೇವೆ. ಹೀಗಾದರೆ ಸಮಾನತೆ ಬಂದು ಬಿಡುತ್ತಾ?. ಯಾವ ವರ್ಗದ ಜನರಿಗೆ ಶತಶತಮಾನಗಳ ಕಾಲ ಓದಲು, ಸಂಪತ್ತು ಅನುಭವಿಸಲು ಅವಕಾಶ ಇತ್ತು. ಅಂಥವರಿಗೆ ಮೀಸಲಾತಿ ನೀಡುವುದು ಸರಿನಾ?. ಅಂಬೇಡ್ಕರ್‌ ರಚನೆ ಮಾಡಿರುವ ಸಂವಿಧಾನದ ಆಶಯ ಇದರಿಂದ ಈಡೇರುತ್ತದಾ?. ಸಂವಿಧಾನದ 15 ಮತ್ತು 16ನೇ ಪರಿಚ್ಛೇದದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಮಾತ್ರ ಅವಕಾಶ ನೀಡಿದೆ. ಶೇ.3ರಷ್ಟು ಇರುವ ಜನರಿಗೆ ಶೇ.10ರಷ್ಟು ಮೀಸಲಾತಿ, ಶೇ.52ರಷ್ಟು ಇರುವ ಜನರಿಗೆ ಶೇ.27ರಷ್ಟು ಮೀಸಲಾತಿ ನೀಡಿದರೆ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯವೇ ಎಂದೂ ಪ್ರಶ್ನಿಸಿದರು.

ಬಹಳಷ್ಟು ಅಧ್ಯಯನ ನಡೆಸಿ, ಪುಸ್ತಕ ರಚನೆ: ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ, ಅದರ ಹುಟ್ಟು ಮತ್ತು ಬೆಳವಣಿಗೆ, ಈಗಿನ ಸವಾಲುಗಳು ಮತ್ತು ಮುಂದೇನು ಮಾಡಬೇಕು ಎಂಬ ಬಗ್ಗೆ ಶಿವಮಲ್ಲು ಬಹಳಷ್ಟು ಅಧ್ಯಯನ ನಡೆಸಿ, ಪುಸ್ತಕ ರಚನೆ ಮಾಡಿದ್ದಾರೆ. ಇಂಜಿನಿಯರಿಂಗ್‌ ಪದವೀಧರರಾದ ಅವರು ರಾಜಕಾರಣದಲ್ಲಿ ಭಾಗವಹಿಸದೆ ಇದ್ದರೂ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಹಿರಿಯ ಪತ್ರಕರ್ತ ಸಿ.ಎಸ್. ದ್ವಾರಕಾನಾಥ್ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ: ಈ ಹಿಂದೆ ಕಾಂಗ್ರೆಸ್​ ಮಾಡಿದ್ದನ್ನೇ ಈಗ ಬಿಜೆಪಿ ಮಾಡುತ್ತಿದೆ.. ಸಚಿವರ ಬೇನಾಮಿ ಹೆಸರಿನಲ್ಲಿ ಆ ಕಂಪನಿ ಇದೆ: ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.