ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನಾಲ್ಕು ನಿಗಮದ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಮುಷ್ಕರ ನಿರತ ನೌಕರರ ಮೇಲೆ ಸರ್ಕಾರ ಸಮರ ಮುಂದುವರೆಸಿದೆ.
ಬಿಎಂಟಿಸಿ ತನ್ನ ನೌಕರರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದು, ಸುಮಾರು 118 ನೌಕರರನ್ನು ವಜಾ ಮಾಡಿ ಆದೇಶಿಸಿದೆ. ತರಬೇತಿ ಹಾಗೂ ಪ್ರೊಬೇಷನರಿ ನೌಕರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿದ್ದು, ಕರ್ತವ್ಯಕ್ಕೆ ಬಾರದ ಹಿನ್ನೆಲೆಯಲ್ಲಿ 60 ಟ್ರೈನಿ ನೌಕರರು ಹಾಗೂ 58 ಪ್ರೊಬೇಷನರಿ ನೌಕರರನ್ನು ವಜಾ ಮಾಡಲಾಗಿದೆ.
ಓದಿ: ಬೆಳಗಾವಿಯಲ್ಲಿ 30ಕ್ಕೂ ಅಧಿಕ ಸಾರಿಗೆ ನೌಕರರು ಪೊಲೀಸರ ವಶಕ್ಕೆ
ಕಳೆದ ಮೂರು ದಿನದಿಂದ ನೌಕರರನ್ನು ವಜಾ ಮಾಡುತ್ತಿರುವ ಬಿಎಂಟಿಸಿ, ಮೊದಲು 96 ನೌಕರರು, ನಿನ್ನೆ 120, ಇಂದು 118 ನೌಕರರನ್ನು ವಜಾ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ 334 ನೌಕರರನ್ನು ವಜಾ ಮಾಡಲಾಗಿದೆ.