ಬೆಂಗಳೂರು: ಎರಡನೇ ದಿನವೂ ರಾಜ್ಯ ರಾಜಧಾನಿಯಲ್ಲಿ ಧಾರಾಕಾರ ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಗರದಾದ್ಯಂತ ಇಂದು ಮತ್ತು ನಾಳೆಯೂ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಓದಿ: ಕಡಿಮೆ ಹಣಕ್ಕೆ ಸೇಲ್.. ಐಪಿಎಲ್ನಿಂದ ಹೊರಬರಲಿದ್ದಾರಾ ಸ್ಮಿತ್..!
ಶನಿವಾರ-ಭಾನುವಾರದ ವೀಕೆಂಡ್ ಸಂಭ್ರಮಕ್ಕೆ ಮಳೆ ಅಡ್ಡಿಪಡಿಸಿದ್ದು, ಮನೆಯಿಂದ ಹೊರಬರಲು ಜನ ಹಿಂದೇಟು ಹಾಕಿದ್ದಾರೆ. ವಾಹನ ಸವಾರರು ಮಳೆಯಲ್ಲಿ ಸಿಲುಕುವಂತಾಗಿದೆ. ನಗರದ ಎಂಜಿ ರಸ್ತೆ, ಜಯನಗರ, ಮೆಜೆಸ್ಟಿಕ್, ಗಾಂಧಿನಗರ, ರಾಜಾಜಿನಗರ, ಇಂದಿರಾನಗರ, ಯಶವಂತಪುರದಲ್ಲಿ ಗಾಳಿ ಮಳೆಯಾಗಿದೆ.
ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿಯಲ್ಲಿ ನಾಳೆಯೂ ಕೆಲವೆಡೆ ಮಳೆಯಾಗಲಿದ್ದು, ಸೋಮವಾರದಿಂದ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.