ಬೆಂಗಳೂರು : ರಾಯಚೂರಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬಹುತೇಕ ತನಿಖೆಯನ್ನ ಪೂರ್ಣಗೊಳಿಸಿದ್ದಾರೆ. ಸದ್ಯದಲ್ಲೇ ನ್ಯಾಯಾಲಯಕ್ಕೆ ಈ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ಸಿಐಡಿ ಉನ್ನತ ಮೂಲಗಳು ತಿಳಿಸಿವೆ
ವಿದ್ಯಾರ್ಥಿನಿ ಆತ್ಮಹತ್ಯೆ ಘಟನೆ ನಡೆದಾಗದಿಂದ ಸುಮಾರು 15 ದಿನಗಳ ಕಾಲ ರಾಯಚೂರಿನಲ್ಲಿ ಮೊಕ್ಕಾಂ ಹೂಡಿದ್ದ ಸಿಐಡಿ ತಂಡಕ್ಕೆ ತನಿಖೆ ವೇಳೆ ಮಹತ್ವದ ಅಂಶಗಳು ಕಂಡು ಬಂದಿವೆ. ಯುವತಿಯನ್ನ ಸುದರ್ಶನ್ ಪ್ರೀತಿಸುತ್ತಿದ್ದ ಅನ್ನೋ ವಿಚಾರವೂ ಬಹಿರಂಗವಾಗಿದೆ. ಕೆಲ ವರ್ಷಗಳಿಂದ ಯುವತಿಯನ್ನ ಪ್ರೀತಿಸುತ್ತಿದ್ದ ಸುದರ್ಶನ, ಇತ್ತೀಚೆಗಷ್ಟೇ ವಿದ್ಯಾರ್ಥಿನಿ ಮೇಲೆ ಅನುಮಾನ ಇಟ್ಟುಕೊಂಡು ಜಗಳವಾಡಿದ್ದ ಎನ್ನಲಾಗಿದೆ.
ಮೃತ ಯುವತಿ ಯಾರ ಜೊತೆ ಮಾತನಾಡಿದ್ರೂ ಸುದರ್ಶನ್ ಅನುಮಾನ ಪಡುತ್ತಿದ್ದ ಎಂಬ ಸ್ಪೋಟಕ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ. ಇನ್ನು ಆ ಯುವತಿ ಕಾಲ್ ಡಿಟೇಲ್ಸ್ ಗಳನ್ನ ಎಫ್ ಎಸ್ ಎಲ್ ತನಿಖೆಗೆ ಕಳುಹಿಸಲಾಗಿದೆ. ಎಫ್ಎಸ್ಎಲ್ ರಿಪೋರ್ಟ್ ತನಿಖಾ ತಂಡಕ್ಕೆ ಸಿಕ್ಕ ತಕ್ಷಣವೇ ನ್ಯಾಯಾಲಯಕ್ಕೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.