ETV Bharat / state

ಕೊರಿಯರ್ ಕೊಡುವ ನೆಪದಲ್ಲಿ ಸರಗಳ್ಳತನ : ಬೆಂಗಳೂರಿನ 11 ಠಾಣೆಗಳ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಅರೆಸ್ಟ್​ ​ - ಬೆಂಗಳೂರಲ್ಲಿ ಸರಗಳ್ಳತನ ಆರೋಪಿ ಬಂಧನ

ಬೆಂಗಳೂರಿನಲ್ಲಿ ಕೊರಿಯರ್​​ ಕೊಡುವ ನೆಪದಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ತಿಲಕ್​ ನಗರ ಪೊಲೀಸರು ಬಂಧಿಸಿದ್ದಾರೆ.

chinese snatcher arrest
ಸರಗಳ್ಳತನ ಆರೋಪಿ ಬಂಧನ
author img

By

Published : Nov 8, 2021, 10:22 AM IST

ಬೆಂಗಳೂರು: ಕೊರಿಯರ್ ಕೊಡುವ ನೆಪದಲ್ಲಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲ ನಿವಾಸಿ ಪರ್ವಿದ್(26) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತನಿಂದ 8.5 ಲಕ್ಷ ರೂ ಮೌಲ್ಯದ ಎರಡು ಚಿನ್ನದ ಸರ, ಐದು ಮೊಬೈಲ್ ಫೋನ್, 4 ದ್ವಿಚಕ್ರವಾಹನ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

More than 11 cases registered against accused
ಆರೋಪಿ ವಿರುದ್ಧ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ

ಬಂಧಿತನ ವಿರುದ್ಧ ತಿಲಕ್‌ನಗರ, ಮೈಕೋ ಲೇಔಟ್, ಯಶವಂತಪುರ, ಸಿದ್ದಾಪುರ, ಬಸವನಗುಡಿ, ಜಯನಗರ, ಸುದ್ದಗುಂಟೆಪಾಳ್ಯ ಸೇರಿ ವಿವಿಧ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ಆರೋಪಿ ಪರ್ವಿದ್ ವಿರುದ್ಧ ಈ ಹಿಂದೆ ವಿವಿಧ ಠಾಣೆಗಳಲ್ಲಿ 21 ಪ್ರಕರಣಗಳು ದಾಖಲಾಗಿದ್ದು, ಹಲವು ಬಾರಿ ಜೈಲು ಸೇರಿದ್ದ ಮತ್ತೆ ಜಾಮೀನಿನ ಮೇಲೆ ಹೊರಬಂದು ಸರಗಳ್ಳತನಕ್ಕೆ ಇಳಿಯುತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಕೊರಿಯರ್ ಕೊಡುವ ನೆಪದಲ್ಲಿ ಕಳ್ಳತನ:

ಆರೋಪಿ ಪರ್ವಿದ್ ಕೊರಿಯರ್ ಕೊಡುವ ನೆಪದಲ್ಲಿ ಮನೆಗಳಿಗೆ ತೆರಳುತ್ತಿದ್ದನು. ಮನೆಯಲ್ಲಿ ಮಹಿಳೆಯರು ಒಂಟಿಯಾಗಿರುವುದು ಕಂಡು ಬಂದರೆ ಬಾಗಿಲು ತೆಗೆದ ತಕ್ಷಣ ಕತ್ತಿಗೆ ಕೈ ಹಾಕಿ ಸರ ಕಿತ್ತುಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾಗುತ್ತಿದ್ದ. ಈತ ಸರಗಳ್ಳತನಕ್ಕೆಂದೆ ದ್ವಿಚಕ್ರವಾಹನ ಹಾಗೂ ಕಾರುಗಳನ್ನು ಕದಿಯುತ್ತಿದ್ದನು. ಕಳವು ಮಾಡಿದ ಬಳಿಕ ಆ ವಾಹನಗಳನ್ನು ರಸ್ತೆ ಬದಿ ನಿಲುಗಡೆ ಮಾಡಿ ಪರಾರಿಯಾಗುತ್ತಿದ್ದ. ರಾತ್ರಿ ವೇಳೆ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಹಣ, ಮೊಬೈಲ್, ಆಭರಣ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಲಬುರಗಿ ಬಸ್​ ನಿಲ್ದಾಣದಲ್ಲಿ ನಡೆದ ಯುವಕನ ಕೊಲೆ ಪ್ರಕರಣ: ಆರು ಜನರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.