ETV Bharat / state

ಕೊರೊನಾ ನಿಯಂತ್ರಣಕ್ಕೆ ಜೂನ್ ಅಂತ್ಯದವರೆಗೆ ಕಠಿಣ ನಿರ್ಬಂಧ ಅನಿವಾರ್ಯ: ತಾಂತ್ರಿಕ ಸಲಹಾ ಸಮಿತಿ ಸಲಹೆ ಏನಿರಬಹುದು??

author img

By

Published : Jun 1, 2021, 4:47 PM IST

ರಾಜ್ಯದಲ್ಲಿ ಅನ್​ಲಾಕ್​ ಆಗಬೇಕು ಅಂದರೆ ಪಾಸಿಟಿವಿಟಿ ರೇಟ್​ ಶೇ.5ಕ್ಕಿಂತ ಕೆಳಗೆ ಅಂದರೆ ನಿತ್ಯ ಕೇಸ್​ನಲ್ಲಿ 5000 ಕ್ಕಿಂತ ಕಡಿಮೆ ಹಾಗೂ ಮರಣ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರಬೇಕು. ಕಳೆದ ವರ್ಷದ ಜೂನ್- ನವೆಂಬರ್ ತಿಂಗಳಲ್ಲಿ ಹೇಗೆ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಆಯ್ತೋ, ಹಾಗೆಯೇ ಈ ಬಾರಿಯೂ ಎಚ್ಚರಿಕೆಯಿಂದ ಅನ್​ಲಾಕ್​ ಮುಂದುವರಿಸುವಂತೆ ಸೂಚನೆ ನೀಡಲಾಗಿದೆ.

lockdown
ಲಾಕ್​ಡೌನ್​

ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಜೂನ್ 7ಕ್ಕೆ ಈ ನಿರ್ಬಂಧ ಮುಗಿಯಲಿದ್ದು, ಇದೀಗ ಮತ್ತೆ ವಿಸ್ತರಣೆ ಆಗುತ್ತಾ ಎಂಬ ಪ್ರಶ್ನೆ ಉದ್ಬವಿಸಿದೆ. ಲಾಕ್​ಡೌನ್​ ಮುಂದುವರಿಕೆ ಅಗತ್ಯವಿದ್ಯಾ? ಒಂದು ವೇಳೆ ಮುಂದುವರಿದರೆ ಯಾವ ರೀತಿಯಲ್ಲಿ ನಿರ್ಬಂಧ ಮುಂದುವರೆಯಲಿದೆ ಎಂಬ ಚರ್ಚೆಗಳು ನಡೆಯುತ್ತಿದೆ.

ಸದ್ಯ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ದೀರ್ಘ ಕಾಲದ ಸಭೆಯನ್ನ ನಡೆಸಿದ್ದಾರೆ. 107ನೇ ಸಭೆಯಲ್ಲಿ ಚರ್ಚೆಯ ವರದಿಯನ್ನ ಸಲ್ಲಿಸಿದ್ದು, ಜೂನ್ 5 ರಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.

ತಜ್ಞರ ವರದಿಯಲ್ಲಿ ಏನಿದೆ?

ಕೊರೊನಾ ನಿಯಂತ್ರಣಕ್ಕೆ ಜೂನ್ ಅಂತ್ಯದವರೆಗೆ ಕಠಿಣ ನಿರ್ಬಂಧ ಅನಿವಾರ್ಯವಾಗಿದ್ದು, ಮುಂದುವರಿಸುವಂತೆ ಶಿಫಾರಸು ಮಾಡಲಾಗಿದೆ. ಅದರಲ್ಲೂ ರಾಜ್ಯದ ಯಾವ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್​ ಶೇ.10 ಕ್ಕಿಂತ ಹೆಚ್ಚಿದ್ದರೆ ಹಾಗೂ ಐಸಿಯು( ಆಕ್ಸಿಜನ್) ನಲ್ಲಿ ಇರುವವರ ಪ್ರಮಾಣ ಶೇ. 60 ರಷ್ಟು ಇದ್ದರೆ, ಆಯಾ ಜಿಲ್ಲೆಗಳಲ್ಲಿ ಲಾಕ್​ಡೌನ್​ ಅನಿವಾರ್ಯವಾಗಿ ವಿಸ್ತರಣೆ ಮಾಡಬೇಕು ಎನ್ನಲಾಗಿದೆ.‌

ಇನ್ನು ರಾಜ್ಯದಲ್ಲಿ ಅನ್​ಲಾಕ್​ ಆಗಬೇಕು ಅಂದರೆ ಪಾಸಿಟಿವಿಟಿ ರೇಟ್​ ಶೇ.5ಕ್ಕಿಂತ ಕೆಳಗೆ ಅಂದರೆ ನಿತ್ಯ ಕೇಸ್​ನಲ್ಲಿ 5000 ಕ್ಕಿಂತ ಕಡಿಮೆ ಹಾಗೂ ಮರಣ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರಬೇಕು. ಕಳೆದ ವರ್ಷದ ಜೂನ್- ನವೆಂಬರ್ ತಿಂಗಳಲ್ಲಿ ಹೇಗೆ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಆಯ್ತೋ, ಹಾಗೆಯೇ ಈ ಬಾರಿಯೂ ಎಚ್ಚರಿಕೆಯಿಂದ ಅನ್​ಲಾಕ್​ ಮುಂದುವರೆಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಮೂರನೇ ಅಲೆ ತಡೆಗಟ್ಟಲು ತಯಾರಿ

ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಮೂರನೇ ಅಲೆ ಎದುರಿಸಲು ಯಾವ ರೀತಿಯ ತಯಾರಿ ಅಗತ್ಯ ಎಂಬುದನ್ನೂ ಸಹ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈಗ ಜಾರಿ ಇರುವ ಲಾಕ್​ಡೌನ್​ನ ಪರಿಣಾಮದ ಕುರಿತು ಹಾಗೂ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಬೀರುವ ಪ್ರಭಾವ, ಶಾಲಾ ಪುನಾರಂಭ ಹಾಗೂ ಪರೀಕ್ಷೆ ನಡೆಸುವ ಕುರಿತು ಚರ್ಚಿಸಲಾಗಿದೆ.

ಎಸ್​ಎಸ್​ಎಲ್​ಸಿ - ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಕಷ್ಟ ಸಾಧ್ಯ

ದೇಶಾದ್ಯಂತ ಭವಿಷ್ಯದ ಪರೀಕ್ಷೆ ನಡೆಸಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿದೆ. ಹಲವು ಶಾಲೆಗಳಿಂದ ಪರೀಕ್ಷೆ ನಡೆಸುವಂತೆ ಹಾಗೂ ದಿನಾಂಕ ನಿಗದಿ ಮಾಡುವಂತೆ ಒತ್ತಾಯ ಕೇಳಿ ಬರ್ತಿದೆ. ಹೀಗಾಗಿ ಈ ಬಗ್ಗೆಯು ತಾಂತ್ರಿಕ ಸಲಹಾ ಸಮಿತಿ ಚರ್ಚೆ ಮಾಡಿದ್ದು, ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಕಷ್ಟ ಸಾಧ್ಯ ಅಂತ ತಿಳಿಸಿದೆ.

ಒಂದು ವೇಳೆ, ಪರೀಕ್ಷೆ ನಡೆಸಲೇಬೇಕು ಅಂದರೆ 'ವಿಶೇಷ ಎಸ್ಒಪಿ' ಜಾರಿ ಮಾಡಬೇಕು. ಅದರಲ್ಲಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಬೇಕು. ಪರೀಕ್ಷೆ ನಡೆಸಲು ಎಲ್ಲ ರೀತಿ ಸೌಕರ್ಯ ಇರಬೇಕು. ಪರೀಕ್ಷಾ ಕಾರ್ಯದಲ್ಲಿ ತೊಡಗುವವರಿಗೆ ಕನಿಷ್ಠ ಮೊದಲ ಡೋಸ್ ಲಸಿಕೆ ಆಗಿರಬೇಕು. ಲಸಿಕೆ ಪಡೆದವರನ್ನ ಪರೀಕ್ಷಾ ಕೆಲಸಕ್ಕೆ ನಿಯೋಜಿಸಬೇಕೆಂದು ಶಿಫಾರಸು ನೀಡಿದೆ.‌

ಕೋವಿಡ್ 2ನೇ ಅಲೆ ತೀವ್ರತೆ ಜೂನ್ ಅಂತ್ಯದಲ್ಲಿ ತಗ್ಗುವ ಸಾಧ್ಯತೆ

  • ಇನ್ನು 2ನೇ ಅಲೆಯ ಆರ್ಭಟವೂ ಜೂನ್ ಅಂತ್ಯದಲ್ಲಿ ತಗ್ಗುವ ಸಾಧ್ಯತೆ ಇದೆ.‌ ಹೀಗಾಗಿ, ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಮೊದಲ ಹಾಗೂ ಎರಡನೇ ಅಲೆಯಲ್ಲಿ ಮಕ್ಕಳು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, 0-9 ವರ್ಷದ ಮಕ್ಕಳಲ್ಲಿ ಶೇ.4 ರಷ್ಟು ಸಾವಿನ ಸಂಖ್ಯೆ ಜಾಸ್ತಿಯಾಗಿದ್ದು, ಹಾಗೇ ಶೇ. 43 ರಷ್ಟು ಸೋಂಕಿನ ಪ್ರಕರಣಗಳು ಹೆಚ್ಚಿದೆ. ಅಲ್ಲದೇ, 10-19 ವರ್ಷದ ಮಕ್ಕಳಲ್ಲಿ ಸಾವಿನ ಪ್ರಮಾಣ ಶೇ.6 ರಷ್ಟು ಹಾಗೂ ಶೇ. 60 ಕೇಸ್ ಹೆಚ್ಚಾಗಿದೆಯಂತೆ.
  • ಸದ್ಯದ ಪರಿಸ್ಥಿತಿ ಅವಲೋಕನ ಮಾಡಿರುವ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಕೋವಿಡ್ ಟೆಸ್ಟಿಂಗ್, ವ್ಯಾಕ್ಸಿನೇಷನ್‌, ಆ್ಯಂಟಿ ಬಾಡಿಸ್ ಡೆವಲಪ್ ಆಗಿದ್ಯಾ, ರೀ ಇನ್ಫೆಕ್ಷನ್ ಆಗಿದ್ಯಾ ಎಂಬುದೆಲ್ಲದರ ಆಧಾರವನ್ನ ಇಟ್ಟಕೊಂಡು ಮುಂದಿನ ಅಲೆಗೂ ತಯಾರಿ ಹೇಗೆ ಇರಬೇಕು ಎಂಬುದರ ಕುರಿತು ತಿಳಿಸಿದ್ದಾರೆ.
  • 3ನೇ ಅಲೆ ಅಕ್ಟೋಬರ್- ನವೆಂಬರ್ ನಲ್ಲಿ ಬರುವ ಸಾಧ್ಯತೆ ಇದೆ.
  • ವೈದ್ಯಕೀಯ ಸೌಲಭ್ಯ ಒದಗಿಸಲು ನಾಲ್ಕು ತಿಂಗಳ ತಯಾರಿ ಅಗತ್ಯ. ಅಂದರೆ ಮಾನವ ಸಂಪನ್ಮೂಲ, ವೈದ್ಯಕೀಯ ಸಲಕರಣೆ ಅಗತ್ಯತೆ ತಯಾರಿ.
    3ನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವ ಕಾರಣಕ್ಕೆ ಮಕ್ಕಳ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ಮೇಲೆ ನಿಗಾ ಅಗತ್ಯ( ತಾಲ್ಲೂಕು, ಜಿಲ್ಲಾಮಟ್ಟದಲ್ಲಿ)
  • ಆಸ್ಪತ್ರೆಯಲ್ಲಿ ಪೋಷಕರು ಮಕ್ಕಳ ಆರೈಕೆ ಮಾಡುವ ಸಂದರ್ಭದಲ್ಲಿ N-95 ಮಾಸ್ಕ್ , ಪಿಪಿಇ ಕಿಟ್, ವಿಶ್ರಾಂತಿ ಕೊಠಡಿ ಸೌಲಭ್ಯಗಳು ಇತ್ಯಾದಿ‌ ಅಗತ್ಯ. ಹೀಗಾಗಿ ಇದನ್ನ ಒದಗಿಸಿ ಕೊಡುವುದರ ಬಗ್ಗೆ ತಯಾರಿ ಇರಬೇಕು.
  • ಈ ಕೂಡಲೇ ಮಕ್ಕಳಲ್ಲಿ ಜೀನೋಮಿಕ್ ಸೀಕ್ವೆನ್ಸಿಂಗ್, ಆಂಟಿಬಾಡಿ ಮಾದರಿಗಳನ್ನು ತಕ್ಷಣ ಪ್ರಾರಂಭಿಸುವಂತೆ ಶಿಫಾರಸು.
  • ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಆದ್ಯತೆ ಮೇರೆಗೆ ಮಕ್ಕಳಿಗೆ ಲಸಿಕೆ ನೀಡುವ ಪ್ರಯತ್ನ ಮಾಡಬೇಕು.
  • ಲಾಕ್​​ಡೌನ್ ತೆರವುಗೊಳಿಸಿದರೆ ಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚು ಮಾಡಬೇಕು.
  • 18 - 44 ವರ್ಷ ವಯೋಮಾನದವರಿಗೆ ಹಾಗೂ ಶಾಲಾ ಮಕ್ಕಳಿರುವ ಪೋಷಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು.
  • ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆ ಆಗುತ್ತಿರುವ ಕಾರಣಕ್ಕೆ ಗೈಡ್​ಲೈನ್​ ತರಬೇಕು ಹಾಗೂ ಆಡಿಟ್ ಮಾಡುವಂತೆ ಸೂಚನೆ ನೀಡಲಾಗಿದೆ.‌

ಓದಿ: ಕೊರೊನಾ ಗೆದ್ದ 35 ದಿನಗಳ ಮುದ್ದು ಕಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.