ETV Bharat / state

ರಮಡ ರೆಸಾರ್ಟ್​​ಗೆ ಬಿಗಿ ಪೊಲೀಸ್ ಭದ್ರತೆ... ಯಾರೇ ಬಂದರೂ ನೋ ಎಂಟ್ರಿ

ಮಧ್ಯಪ್ರದೇಶದ ಬಂಡಾಯ ಶಾಸಕರನ್ನು ಭೇಟಿ‌ ಮಾಡಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಸದ್ಯ ವಶಕ್ಕೆ ಪಡೆದಿದ್ದಾರೆ. ಇನ್ನೂ ಶಾಸಕರನ್ನು ಯಾರೂ ಭೇಟಿಯಾಗದಂತೆ ರಮಡಾ ರೆಸಾರ್ಟ್​ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಪೊಲೀಸ್ ಭದ್ರತೆ
ಪೊಲೀಸ್ ಭದ್ರತೆ
author img

By

Published : Mar 18, 2020, 10:09 AM IST

ಬೆಂಗಳೂರು: ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರಿಗೆ ಹೆಚ್ಚಿನ ಭದ್ರತೆ ನೀಡುವ ಹಿನ್ನೆಲೆ, ಶಾಸಕರು ವಾಸ್ತವ್ಯ ಹೂಡಿರುವ ರಮಡಾ ರೆಸಾರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬೆಳ್ಳಂ ಬೆಳಗ್ಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ , ಶಾಸಕ ಆರೀಫ್ ಮಸೂದ್ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರಾದ ಕೃಷ್ಣಭೈರೇಗೌಡ, ಹ್ಯಾರೀಸ್,ರಿಜ್ವಾನ್ ಅರ್ಷದ್ ಸೇರಿದಂತೆ ಇನ್ನಿತರ ಮುಖಂಡರು ಬಂಡಾಯ ಶಾಸಕರನ್ನು ಭೇಟಿ‌ ಮಾಡಲು ಮುಂದಾಗಿದ್ದರು. ಈ ವೇಳೆ ನಾಗೇನಹಳ್ಳಿ ಗೇಟ್ ಬಳಿ ಪೊಲೀಸರು ತಡೆದಿದ್ದರಿಂದ ಸ್ಥಳದಲ್ಲಿ ಹೈಡ್ರಾಮ ನಡೆದಿತ್ತು.

ರಮಡ ರೆಸಾರ್ಟ್​​ಗೆ ಬಿಗಿ ಪೊಲೀಸ್ ಭದ್ರತೆ

ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 4 ಡಿವೈಎಸ್ಪಿ, 2ಡಿಸಿಪಿ, 10 ಇನ್ಸ್‌ಪೆಕ್ಟರ್, 10ಕೆ.ಎಸ್.ಆರ್.ಪಿ ತುಕಡಿ ಸೇರಿದಂತೆ 300ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರೆಸಾರ್ಟ್ ಸುತ್ತ ಮುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿ ನಾಕಾಬಂದಿ ಹಾಕಲಾಗಿದೆ. ಇನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಭದ್ರತೆ ನೀಡಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೆ ಬೀಡುಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.