ಬೆಂಗಳೂರು: ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಹಿನ್ನೆಲೆ ನಗರದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಲಿಕಾನ್ ಸಿಟಿಯ ಎಲ್ಲೆಡೆ ಆಯಾ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದಾರೆ.
ಕೆ.ಆರ್.ಮಾರುಕಟ್ಟೆ ಹಾಗೂ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಈದ್ ಮಿಲಾದ್ ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸುವ ಹಿನ್ನೆಲೆ ಪಶ್ಚಿಮ ವಿಭಾಗ ಪೊಲೀಸರು ಸ್ಥಳದಲ್ಲಿ ಒಂದು ಕೆಎಸ್ಆರ್‌ಪಿ ತುಕಡಿ, ಒಂದು ಹೊಯ್ಸಳ ಗಸ್ತು ವಾಹನ ನಿಯೋಜನೆ ಮಾಡಿದ್ದಾರೆ. ಇಂದು ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ಮದ್ಯ ನಿಷೇಧ ಮಾಡಲಾಗಿದೆ.