ಬೆಂಗಳೂರು: ಥೈಮೋಸಿನ್ ಆಲ್ಫಾ 1 ಎಂಬ ವಿನೂತನ ಚಿಕಿತ್ಸಾ ವಿಧಾನ ಇದೀಗ ಕೋವಿಡ್-19 ರೋಗಿಗಳಿಗೆ ವರದಾನವಾಗಿ ಪರಿಣಮಿಸಿದೆ. ಇಮ್ಯುನೋಸಿನ್ ಆಲ್ಫಾ 1 ಎಂಬ ಔಷಧೀಯ ಕಣ ನಮ್ಮ ಪ್ರತಿರೋಧ ವ್ಯವಸ್ಥೆಯನ್ನು ಹೆಚ್ಚಿಸಲು ಶಕ್ತವಾಗಿದ್ದು, ಭಾರತದಾದ್ಯಂತ ತೀವ್ರ ನಿಗಾ ಚಿಕಿತ್ಸಾ ತಜ್ಞರು ಈ ಔಷಧೀಯ ಕಣವನ್ನು ತೀವ್ರತರ ಕೋವಿಡ್-19 ರೋಗಿಗಳಿಗೆ ನೀಡಲು ಶಿಫಾರಸು ಮಾಡಿದ್ದಾರೆ.
![ravi kumar](https://etvbharatimages.akamaized.net/etvbharat/prod-images/kn-bng-3-thymosin-alpha1-covid-script-7201801_24112020165144_2411f_1606216904_214.jpg)
ಇಮ್ಯುನೋಸಿನ್ ಆಲ್ಫಾ 1, ಸೈಟೊಕಿನ್ ಹೊಡೆತವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ತೀವ್ರತರ ಕೋವಿಡ್-19 ರೋಗಿಗಳಲ್ಲಿ ಲಿಂಫೋಸೈಟೋಪೆನಿಯಾ ಪುನಶ್ಚೇತನ ಮತ್ತು ಬಳಲಿದ ಟಿ ಕೋಶಗಳ ಪುನಶ್ಚೇತನ ಮೂಲಕ ಮರಣ ಪ್ರಮಾಣವನ್ನು ಸಹಜವಾಗಿಯೇ ಕಡಿಮೆ ಮಾಡುತ್ತದೆ.
ಮಧುಮೇಹ, ಹೈಪರ್ ಟೆನ್ಷನ್, ತೀವ್ರತರ ಮೂತ್ರಪಿಂಡ ಕಾಯಿಲೆಯಂಥ ರೋಗ ಹೊಂದಿರುವ ಮತ್ತು ಹಿರಿಯ ವಯಸ್ಸಿನ ರೋಗಿಗಳಿಗೆ ಇಮ್ಯುನೊಸಿನ್ ಆಲ್ಫಾ 1, ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಎಂದು ದೃಢಪಟ್ಟಿದೆ.
ಇಮ್ಯುನೋಸಿನ್ ಆಲ್ಫಾ 1, ಸೈಟೊಕಿನ್ ಹೊಡೆತವನ್ನು ಕಡಿಮೆ ಮಾಡುತ್ತದೆ ಹಾಗೂ ತೀವ್ರತರ ಕೋವಿಡ್-19 ರೋಗಿಗಳಲ್ಲಿ ಲಿಂಫೋಸೈಟೋಪೆನಿಯಾ ಪುನಶ್ಚೇತನ ಮತ್ತು ಬಳಲಿದ ಟಿ ಕೋಶಗಳ ಪುನಶ್ಚೇತನ ಮೂಲಕ ಮರಣ ಪ್ರಮಾಣವನ್ನು ಸಹಜವಾಗಿಯೇ ಕಡಿಮೆ ಮಾಡುತ್ತದೆ ಎಂದು ಬೆಂಗಳೂರಿನ ಸಾಗರ್ ಗ್ರೂಪ್ ಆಫ್ ಹಾಸ್ಪಿಟಲ್ನ ಐಸಿಯು & ತೀವ್ರತರ ಆರೈಕೆ ವಿಭಾಗದ ಮುಖ್ಯಸ್ಥ, ಸಲಹಾ ತಜ್ಞ ಡಾ.ಆರ್.ರವಿ ಕುಮಾರ್ ಮಾಹಿತಿ ನೀಡಿದ್ದಾರೆ.
ಇದುವರೆಗೆ ಈ ಔಷಧ ಕಣವನ್ನು ಸುಮಾರು 200 ರೋಗಿಗಳಿಗೆ ಬಳಸಿದ್ದು,ಇದು ಪ್ರಯೋಜನಕಾರಿ ಆಗಿರುವುದನ್ನು ನಾನು ವೈಯಕ್ತಿಕವಾಗಿ ಗಮನಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.