ಬೆಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟಗೊಂಡು ಮೂವರು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜುಲೈ 6ರಂದು ರಾತ್ರಿ 11:30ರ ಸುಮಾರಿಗೆ ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಗಾಯಾಳು ಕಾರ್ಮಿಕರನ್ನು ಶ್ರೀನಿವಾಸ್, ಮಣಿಕಂಠ ಹಾಗೂ ಶಶಿಕುಮಾರ್ ಎಂದು ಗುರುತಿಸಲಾಗಿದೆ. ವೈಟ್ಫೀಲ್ಡ್ನ ವೈದೇಹಿ ಆಸ್ಪತ್ರೆ ಸಮೀಪದ ಖಾಸಗಿ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸಂಪೂರ್ಣ ವಿವರ: ವೈದೇಹಿ ಆಸ್ಪತ್ರೆ ಬಳಿ ಖಾಸಗಿ ಕಂಪನಿಯ ಕಡೆಯಿಂದ ಕಾಮಗಾರಿ ನಡೆಯುತ್ತಿತ್ತು. ಜೂನ್ 6ರಂದು ರಾತ್ರಿ ಕೆಲಸ ನಿರ್ವಹಿಸುತ್ತಿದ್ದಾಗ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ಪರಿಣಾಮ ಸ್ಥಳದಲ್ಲಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: Watch Video: ಹಣ ಕದಿಯಲು ವಿಫಲ.. ಎಟಿಎಂ ಯಂತ್ರವನ್ನೇ ಎಗರಿಸಿದ ಖದೀಮರು!
ಘಟನೆ ಸಂಭವಿಸುತ್ತಿದ್ದಂತೆ ಮೂವರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಘಟನೆಯ ಕುರಿತು ಅವರ ಕುಟುಂಬಸ್ಥರಿಗೂ ಯಾವುದೇ ಮಾಹಿತಿ ನೀಡದೇ ಮಾರನೇ ದಿನ ರಸ್ತೆ ಅಪಘಾತವಾಗಿ ಗಾಯಗೊಂಡಿದ್ದಾರೆ ಎಂದು ಬಿಂಬಿಸಿರುವ ಆರೋಪ ಕೇಳಿ ಬಂದಿದೆ. ಇನ್ನೊಂದೆಡೆ, ಪರವಾನಗಿ ಪಡೆಯದೇ ಅಕ್ರಮವಾಗಿ ಬಂಡೆಗಳನ್ನು ಒಡೆಯಲು ಸ್ಫೋಟಕ ಬಳಸಿರುವ ಆರೋಪವೂ ಇದೆ. ಗಾಯಾಳು ಶ್ರೀನಿವಾಸ್ ಅವರ ಪತ್ನಿ ನೀಡಿದ ದೂರಿನನ್ವಯ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿರುವ ಆರೋಪಿಗಳು ನಂತರ ಪರಾರಿಯಾಗಿದ್ದು ಸಾಕಷ್ಟು, ಅನುಮಾನಕ್ಕೆ ಕಾರಣವಾಗಿದೆ.
"ಕುಶಾಲ್ ಅರ್ಥ್ ಮೂವರ್ಸ್ ಕಂಪನಿಯ ಮಾಲೀಕ ಮಂಜುನಾಥ್ ರೆಡ್ಡಿ, ಕುಶಾಲ್ ರೆಡ್ಡಿ, ಪ್ರಭು, ಪ್ರಾಜೆಕ್ಟ್ ಇನ್‌ಚಾರ್ಜ್ ಲೋಕೇಶ್, ಇನ್ಫೋ ಪ್ರೋ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕ ವಿಕ್ರಂ ಮಾರ್ಲಾ, ಕಂಪನಿಯ ಸಿಇಒ ಅಶೋಕ್ ಶೆಟ್ಟಿ, ಕುಶ್ಮ್ಯಾನ್ ಆ್ಯಂಡ್ ವೇಕ್ ಫೀಲ್ಡ್ ಕಂಪನಿಯ ಎಕ್ಸಿಕ್ಯೂಟಿವ್ ಆಪರೇಟರ್ ಸಾಕೇತ್ ಮತ್ತು ಸ್ಫೋಟಕಗಳನ್ನು ಪೂರೈಕೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ವೈಟ್ ಫೀಲ್ಡ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಎರಡು ಗುಂಪುಗಳ ನಡುವೆ ಗಲಾಟೆ: ಯುವಕನ ಹತ್ಯೆ, ಟಿ.ನರಸೀಪುರ ಬಂದ್ಗೆ ಕರೆ
ಬೆಂಗಳೂರು: ಮಸೀದಿಗೆ ಚಂದಾ ಕೇಳಲು ಬಂದು ಹುಸಿ ಬಾಂಬ್ ಕರೆ ಮಾಡಿದ ಆರೋಪಿ ಸೆರೆ