ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಆರ್.ಟಿ. ನಗರದ ಮನೆ ಮುಂದೆ ಬುಧವಾರ ತಡರಾತ್ರಿ ಪುಂಡರು ಸ್ಕೂಟರ್ ವೀಲ್ಹಿಂಗ್ ಮಾಡಿ ಕಿರಿ ಕಿರಿ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ.
ಸಿಎಂ ನಿವಾಸದ ಮುಂದೆ ಬಿಗಿ ಪೊಲೀಸ್ ಬಂದೋ ಬಸ್ತ್ ಇದ್ದರೂ, ಕ್ಯಾರೆ ಅನ್ನದ ಪುಂಡರ ಗುಂಪು ವೇಗವಾಗಿ ಸ್ಕೂಟರ್ ಓಡಿಸಿ, ವೀಲ್ಹಿಂಗ್ ಮಾಡಿ ಸಮಸ್ಯೆ ಉಂಟು ಮಾಡಿದ್ದಾರೆ. ಈ ವೇಳೆ ಡಿಯೋ, ಆ್ಯಕ್ಟಿವಾ ಸ್ಕೂಟರ್ಗಳಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ, ಪೊಲೀಸರ ಮೇಲೆಯೇ ಗಾಡಿ ಹತ್ತಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಓದಿ : ನಾಳೆ ದೆಹಲಿಗೆ ಹೋದ್ರೂ ಸಂಪುಟ ಚರ್ಚೆ ಇಲ್ಲ: ಸಂಪುಟ ವಿಸ್ತರಣೆ ವಿಳಂಬದ ಸುಳಿವು ನೀಡಿದ ಬೊಮ್ಮಾಯಿ
ಕೊನೆಗೂ ವೀಲ್ಹಿಂಗ್ ಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ಆರ್.ಟಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಕೃತ್ಯಕ್ಕೆ ಬಳಸಿದ ಸ್ಕೂಟರ್ಗಳನ್ನು ಜಪ್ತಿ ಮಾಡಲಾಗಿದೆ.