ETV Bharat / state

ಹಾಡಹಗಲೇ ಪಿಜಿಗಳಿಗೆ ನುಗ್ಗಿ ಲ್ಯಾಪ್​ಟಾಪ್ ಕದಿಯುತ್ತಿದ್ದ ಮೂವರ ಬಂಧನ: 50ಕ್ಕೂ ಹೆಚ್ಚು ಲ್ಯಾಪ್​ಟಾಪ್ ವಶ

author img

By ETV Bharat Karnataka Team

Published : Dec 19, 2023, 4:54 PM IST

Updated : Dec 19, 2023, 5:34 PM IST

Three laptop thieves arrested: ಕಾಲೇಜು ವಿದ್ಯಾರ್ಥಿಗಳು ವಾಸವಾಗಿದ್ದ ಪಿಜಿ ಹಾಸ್ಟೆಲ್​ಗಳನ್ನೇ ಗುರುತಿಸಿಕೊಂಡು ಆರೋಪಿಗಳು ಬೆಳಗ್ಗೆ ವಾಯುವಿಹಾರ ಸಮಯದಲ್ಲಿ ನುಗ್ಗಿ, ಲ್ಯಾಪ್​ಟಾಪ್​, ಮೊಬೈಲ್​ಗಳನ್ನು ಕದಿಯುತ್ತಿದ್ದರು.

seized Laptops
ವಶಪಡಿಸಿಕೊಂಡ ಲ್ಯಾಪ್​ಟಾಪ್​ಗಳು

ವಶಪಡಿಸಿಕೊಂಡ ಲ್ಯಾಪ್​ಟಾಪ್​ಗಳು

ಬೆಂಗಳೂರು: ಹಾಡಹಗಲೇ ಪಿ.ಜಿ.ಗಳಿಗೆ‌ ನುಗ್ಗಿ ಲ್ಯಾಪ್​ಟಾಪ್ ಹಾಗೂ ಮೊಬೈಲ್​ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 16 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುವ 50ಕ್ಕೂ ಹೆಚ್ಚು ಲ್ಯಾಪ್​ಟಾಪ್ ಹಾಗೂ 7 ಮೊಬೈಲ್ ಪೋನ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನ ವಿ. ಕೋಟಾದ ಯುವರಾಜ್, ಪ್ರಭು‌ ಹಾಗೂ ತಮಿಳುನಾಡಿನ ಸೆಲ್ವರಾಜ್ ಬಂಧಿತ ಆರೋಪಿಗಳು. ಈ ಕಳ್ಳತನದಲ್ಲಿ ಭಾಗಿಯಾಗಿರುವ ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.

ಯಶವಂತಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪಿ.ಜಿ.ಗಳಲ್ಲಿ ಲ್ಯಾಪ್​ಟಾಪ್ ಹಾಗೂ ಮೊಬೈಲ್​ಗಳು ಕಳ್ಳತನ ಆಗುತ್ತಿದ್ದ ದೂರುಗಳು ಹೆಚ್ಚು ದಾಖಲಾದ ಹಿನ್ನೆಲೆಯಲ್ಲಿ ಖದೀಮರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಾಗ ಕಳೆದ ತಿಂಗಳು 29ರಂದು ಮತ್ತಿಕೆರೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರದ ಚಿತ್ತೂರಿನ ವಿ. ಕೋಟಾದ ಯುವರಾಜ್, ಪ್ರಭು‌ ಎಂಬ ಇಬ್ಬರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದ ಏಳು ಮೊಬೈಲ್​ಗಳು ಪತ್ತೆಯಾಗಿತ್ತು. ಈ ಬಗ್ಗೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆಂಧ್ರದಿಂದ ಬೆಂಗಳೂರಿಗೆ ಬಂದು ಲ್ಯಾಪ್​ಟಾಪ್ ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದರು.‌ ಇಬ್ಬರು ನೀಡಿದ ಮಾಹಿತಿ ಮೇರೆಗೆ ಚಿತ್ತೂರಿನಲ್ಲಿ‌ ಆರೋಪಿಗಳಿಂದ ಕದ್ದ ಲ್ಯಾಪ್​ಟಾಪ್​ಗಳನ್ನು ಸ್ವೀಕರಿಸುತ್ತಿದ್ದ ಸೆಲ್ವರಾಜ್ ಎನ್ನುವವನನ್ನು ಬಂಧಿಸಲಾಗಿದೆ.

Arrested Accused
ಬಂಧಿತ ಆರೋಪಿಗಳು

ಈ ಆರೋಪಿಗಳು ಕಳೆದ ಎರಡು ವರ್ಷಗಳಿಂದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ವಾಸವಾಗಿರುವ ಪಿ.ಜಿ ಹಾಗೂ ಹಾಸ್ಟೆಲ್​ಗಳನ್ನು ಆರೋಪಿಗಳು ಟಾರ್ಗೆಟ್​ ಮಾಡಿಕೊಂಡು, ಅವುಗಳನ್ನೇ ಗುರುತು ಮಾಡಿಕೊಂಡು ಬೆಳಗಿನ ವಾಯುವಿಹಾರ ಸಮಯದಲ್ಲಿ ಪಿ.ಜಿ.ಗಳಿಗೆ ನುಗ್ಗಿ ಲ್ಯಾಪ್​ಟಾಪ್ ಹಾಗೂ ಮೊಬೈಲ್​ಗಳನ್ನು ಕಳ್ಳತನ ಮಾಡುತ್ತಿದ್ದರು.‌ ಕದ್ದ ಬಳಿಕ ಬಸ್ ಮೂಲಕ ಚಿತ್ತೂರಿನಲ್ಲಿದ್ದ ಸೆಲ್ವರಾಜ್​ಗೆ ಮಾರಾಟ ಮಾಡುತ್ತಿದ್ದರು.‌ ಒಂದು‌ ಲ್ಯಾಪ್​ಟಾಪ್​ ಅನ್ನು ಸುಮಾರು 15 ರಿಂದ 20 ಸಾವಿರ ರೂಪಾಯಿಗೆ ಮಾರಾಟ ಮಾಡಿ, ಅದರಿಂದ ಹಣ ಸಂಪಾದಿಸುತ್ತಿದ್ದರು‌ ಎನ್ನುವುದು ತನಿಖೆ ವೇಳೆ ಬಯಲಾಗಿದೆ. ಆರೋಪಿಗಳ ಬಂಧನದಿಂದ, ಯಶವಂತಪುರ, ಸೋಲದೇವನಹಳ್ಳಿ ಹಾಗೂ ಗಂಗಮ್ಮನಗುಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 20ಕ್ಕೂ ಹೆಚ್ಚು ಲ್ಯಾಪ್​ಟಾಪ್ ಕಳ್ಳತನ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹಾವೇರಿ: ಹಗಲು ಹೊತ್ತಿನಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ

Last Updated : Dec 19, 2023, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.