ಬೆಂಗಳೂರು : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ ಇಬ್ಬರು ಅಂತಾರಾಜ್ಯ ಪೆಡ್ಲರ್ಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಓರ್ವ ಮಹಿಳೆ ಮಣಿಪುರ ಮೂಲದಾಕೆ ಎನ್ನಲಾಗಿದೆ.
ಈಕೆ ಹೆರಾಯಿನ್ ಮಾದಕ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಳು. ಗ್ರೂಮಿಂಗ್ ಕೆಲಸಕ್ಕೆಂದು ಬಂದು ಸುಲಭವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ಡ್ರಗ್ಸ್ ದಂಧೆಗೆ ಇಳಿದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತ ಮಹಿಳೆ ನಗರದ ಕಮ್ಮನಹಳ್ಳಿಯ ಬ್ಯೂಟಿ ಎಂಡ್ ಸ್ಪಾ ಎನ್ನುವಲ್ಲಿ ಕೆಲಸ ಮಾಡುತ್ತಿದ್ದಳು. ಸ್ನೇಹಿತನ ಜೊತೆ ಸೇರಿ ಹೆರಾಯಿನ್ ಮಾರಾಟ ಕೂಡ ಮಾಡುತ್ತಿದ್ದಳು.
ಸದ್ಯ ಆರೋಪಿಗಳನ್ನು ಬಂಧಿಸಿ 1.5 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿರುವ ಬಾಣಸವಾಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ₹6 ಕೋಟಿ ಮೌಲ್ಯದ ಮೊಬೈಲ್ ತುಂಬಿದ್ದ ಕಂಟೇನರ್ ದರೋಡೆ ಮಾಡಿದ್ದ ಗ್ಯಾಂಗ್ : ಓರ್ವ ಆರೋಪಿ ಬಂಧನ