ETV Bharat / state

ಮದನಪಲ್ಲಿ ರೌಡಿಶೀಟರ್​ ಮೇಲೆ ಗುಂಡಿನ ದಾಳಿ ಪ್ರಕರಣ : ಮೂವರ ಬಂಧನ - ಈಟಿವಿ ಭಾರತ ಕನ್ನಡ

ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯ ರೌಡಿ ಶೀಟರ್​ ಶಿವಶಂಕರ್​ ರೆಡ್ಡಿ ಸೇರಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ ಮೂವರು ಆರೋಪಿಗಳನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

three-arrested-in-madanapalli-rowday-sheeter-shootout-case
ಮದನಪಲ್ಲಿ ರೌಡಿಶೀಟರ್​ ಮೇಲೆ ಗುಂಡಿನ ದಾಳಿ ಪ್ರಕರಣ : ಮೂವರ ಬಂಧನ
author img

By

Published : Dec 10, 2022, 9:10 PM IST

Updated : Dec 10, 2022, 10:14 PM IST

ಮದನಪಲ್ಲಿ ರೌಡಿಶೀಟರ್​ ಮೇಲೆ ಗುಂಡಿನ ದಾಳಿ ಪ್ರಕರಣ : ಮೂವರ ಬಂಧನ

ಬೆಂಗಳೂರು : ಆಂಧ್ರಪ್ರದೇಶ ಮೂಲದ ಕುಖ್ಯಾತ ರೌಡಿ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕ ಆಶೋಕ್‌ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಗಳ ಒಳಗಾಗಿ ವೈಟ್ ಫೀಲ್ಡ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕ ಅಶೋಕ್‌ ರೆಡ್ಡಿ ಮೇಲೆ ಎಂಟು ಸುತ್ತು ಗುಂಡು ಹಾರಿಸಲಾಗಿದೆ. ಈ ಸಂಬಂಧ ಬಯ್ಯಾರೆಡ್ಡಿ ಗುಂಪಿನ ಸದಸ್ಯರಾದ ಮನೋಜ್ ಕುಮಾರ್ (24), ಜಯಪ್ರಕಾಶ್ (22), ಪ್ರವೀಣ್ (23) ಎಂಬವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.

ಪ್ರಕರಣ ಹಿನ್ನೆಲೆ : ಕೆ.ಆರ್.ಪುರ ಸಮೀಪದ ಕುರುಸೊನ್ನೇನಹಳ್ಳಿಗೆ ಕಳೆದ ಡಿ.8ರ ಮಧ್ಯಾಹ್ನ 3 ಗಂಟೆಗೆ ತನ್ನ ಅಪಾರ್ಟ್​ಮೆಂಟ್​ ವೀಕ್ಷಣೆಗೆ ಬಂದಿದ್ದ ಶಿವಶಂಕರ್ ರೆಡ್ಡಿ ಹಾಗೂ ಅವರ ಕಾರು ಚಾಲಕನ ಮೇಲೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ರಚಿಸಿದ್ದರು. ಡಿಸಿಪಿ ಗಿರೀಶ್‌ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು, ಶಿವಶಂಕರ್ ರೆಡ್ಡಿ ಹಾಗೂ ಅವರ ಕಾರು ಚಾಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರೂ ಪ್ರಾಣಾಪಾಯದಿ೦ದ ಪಾರಾಗಿದ್ದಾರೆ.

17ನೇ ವಯಸ್ಸಿನಲ್ಲಿ ಕೊಲೆ ಮಾಡಿದ್ದ ಶಿವಶಂಕರ್ ರೆಡ್ಡಿ: ರೌಡಿ ಶಿವಶಂಕ‌ರ್​ ರೆಡ್ಡಿ ಹಾಗೂ ಬಯ್ಯಾರೆಡ್ಡಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಹಲವು ವರ್ಷಗಳಿಂದ ವೈಷಮ್ಯ ಇತ್ತು ಎಂದು ತಿಳಿದುಬಂದಿದೆ. ಇನ್ನು ಶಿವಶಂಕರ್​ ರೆಡ್ಡಿ ತಮ್ಮ 17ನೇ ವಯಸ್ಸಿನಲ್ಲಿಯೇ ಮೊದಲ ಕೊಲೆ ಮಾಡಿದ್ದರು. ಬಳಿಕ 18ನೇ ವಯಸ್ಸಿನಲ್ಲಿ ಎರಡನೇ ಕೊಲೆ ಮಾಡಿದ್ದರು ಎಂದು ತಿಳಿದುಬಂದಿದೆ. ಬಳಿಕ 23ನೇ ವರ್ಷದಲ್ಲಿ ಮೂರನೇ ಕೊಲೆ ಮಾಡಿದ್ದ ಶಿವಶಂಕರ್​ ವಿರುದ್ಧ 2021ರಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತಂತೆ.

ಜೀವ ಬೆದರಿಕೆ ಪ್ರಕರಣದಲ್ಲಿ ಜೈಲು : ಕೊಲೆ, ಕೊಲೆ ಯತ್ನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿಶೀಟರ್​ ಪಟ್ಟಿಗೆ ಸೇರಿದ್ದ ಶಿವಶಂಕರ್ ರೆಡ್ಡಿ, ಎರಡು ತಿ೦ಗಳ ಹಿಂದೆಯಷ್ಟೇ ರಿಯಲ್ ಎಸ್ಟೇಟ್ ಉದ್ಯಮಿ ಬಾಬು ಎಂಬವರಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನಿಸಿದ್ದರು. ಈ ಪ್ರಕರಣದಲ್ಲಿ ವೈಟ್‌ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬ೦ದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮದನಪಲ್ಲಿ ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆಸಿ‌ ದುಷ್ಕರ್ಮಿಗಳು ಪರಾರಿ

Last Updated : Dec 10, 2022, 10:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.