ETV Bharat / state

ಡಿಕೆಶಿ-ಸಿದ್ದು ಮಧ್ಯೆ ಇವರಿಗೇನು ಕೆಲಸ?.. ಸಿಎಂ ಅಭ್ಯರ್ಥಿ ಚರ್ಚೆಗೆ ಡಿಕೆ ಸುರೇಶ್ ಗರಂ - Congress discipline

ಮಲಗಿದ್ದವರೆಲ್ಲ ಈಗ ಎದ್ದಿದ್ದಾರೆ. ಈಗಿರುವ ಶಾಸಕರೆಲ್ಲ ಮುಂದಿನ ಶಾಸಕಾಂಗ ಪಕ್ಷದ ಸದಸ್ಯರಲ್ಲ. ಚುನಾವಣೆ ಎದುರಿಸಿ ಇವರು ಶಾಸಕರಾಗಬೇಕು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಕೆಲಸ ಮಾಡುತ್ತಿದ್ದಾರೆ. ಸಿಎಲ್‌ಪಿ ನಾಯಕರಾಗಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಮಧ್ಯೆ ಇವರಿಗೆ ಏನು ಕೆಲಸ? ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟುವ ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಡಿಕೆ ಸುರೇಶ್
ಡಿಕೆ ಸುರೇಶ್
author img

By

Published : Jun 23, 2021, 7:07 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಉದ್ಭವಿಸಿರುವುದನ್ನು ಸಂಸದ ಡಿ.ಕೆ. ಸುರೇಶ್ ತೀವ್ರವಾಗಿ ಖಂಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಮೊದಲು ಚುನಾವಣೆ ಎದುರಿಸಲಿ. ಮಾತನಾಡಿದ ಶಾಸಕರೆಲ್ಲ ಅಧಿಕಾರಕ್ಕಾಗಿ ಬಂದವರು. ಕಾಂಗ್ರೆಸ್ ಶಿಸ್ತು ಗೊತ್ತಿದ್ದವರು ಹೀಗೆ ಮಾತನಾಡಲ್ಲ ಎಂದು ಸಿದ್ದರಾಮಯ್ಯ ಮುಂದಿನ ಸಿಎಂ ಎಂದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಲಗಿದ್ದವರೆಲ್ಲ ಈಗ ಎದ್ದಿದ್ದಾರೆ. ಈಗಿರುವ ಶಾಸಕರೆಲ್ಲ ಮುಂದಿನ ಶಾಸಕಾಂಗ ಪಕ್ಷದ ಸದಸ್ಯರಲ್ಲ. ಚುನಾವಣೆ ಎದುರಿಸಿ ಇವರು ಶಾಸಕರಾಗಬೇಕು. ಕೆಪಿಸಿಸಿ ಅಧ್ಯಕ್ಷರು ಪಕ್ಷದ ಕೆಲಸ ಮಾಡುತ್ತಿದ್ದಾರೆ. ಸಿಎಲ್‌ಪಿ ನಾಯಕರಾಗಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಮಧ್ಯೆ ಇವರಿಗೆ ಏನು ಕೆಲಸ? ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟುವ ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಸುರೇಶ್

ಮುಂದಿನ ಚುನಾವಣೆ ಬಳಿಕ ಶಾಸಕಾಂಗ ಪಕ್ಷ ಸಭೆ ನಡೆಯಲಿ. ಈಗ ಮಾತನಾಡುವವರೆಲ್ಲ, ಆ ಸಭೆಗೆ ಬರಲಿ. ನಾವು ಅವರಿಗೆ ಸವಾಲು ಹಾಕುತ್ತೇವೆ. ಶಾಸಕರ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಬಾರದು. ಒಳಗೊಳಗೆ ಇವರು ಉರ್ಕೊಂಡರೆ ನಾವೇನು ಮಾಡಲು ಸಾಧ್ಯ ಎಂದರು.

ಓದಿ.. ದೂರವಾಣಿ ಮೂಲಕ ಜಮೀರ್ ಅಹ್ಮದ್​​​ಗೆ ಸುರ್ಜೇವಾಲಾ ಕ್ಲಾಸ್.. ಅಷ್ಟೇ ಖಡಕ್ ಪ್ರತ್ಯುತ್ತರ ಕೊಟ್ಟ ಮಾಜಿ ಸಚಿವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.