ಬೆಂಗಳೂರು: ಮಾಸ್ಕ್ ಹಾಕದೆ ಬೇಕಾಬಿಟ್ಟಿ ಸುತ್ತಾಡುವ ಸಾರ್ವಜನಿಕರಿಗೆ ಇಂದಿನಿಂದ ಪೊಲೀಸರು ಬಿಸಿ ಮುಟ್ಟಿಸಲಿದ್ದು, ದಂಡ ವಸೂಲಿಗಿಳಿಯಲಿದ್ದಾರೆ.
ಕೆಲ ಮಂದಿ ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಇಲ್ಲದೆ ಓಡಾಡಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈಗಾಗಲೇ ಮಾರ್ಷಲ್ಗಳು ಎಲ್ಲೆಡೆ ಮಾಸ್ಕ್ ಹಾಕದವರಿಗೆ ಫೈನ್ ಹಾಕುತ್ತಿದ್ದು, ಇಂದಿನಿಂದ ಟ್ರಾಫಿಕ್ ಪೊಲೀಸರು ಸಹ ಮಾಸ್ಕ್ ಹಾಕದವರಿಗೆ ಫೈನ್ ಹಾಕಲಿದ್ದಾರೆ.
ಇದುವರೆಗೂ ಬಿಬಿಎಂಪಿ ಮಾರ್ಷಲ್ಗಳು ಮಾತ್ರ ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದರು. ಇದೀಗ ನಗರದ ಎಲ್ಲಾ ವಿಭಾಗದ ಪೊಲೀಸ್ ಠಾಣೆಗಳಿಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುತ್ತೋಲೆ ಹಿನ್ನೆಲೆ ಇಂದಿನಿಂದ ಪೊಲೀಸರು ಅಲರ್ಟ್ ಆಗಲಿದ್ದಾರೆ. ನಿಯಮ ಮೀರಿದವರಿಗೆ ದಂಡ ವಿಧಿಸಿದಾಗ ಕಿರಿಕಿರಿ ಮಾಡಿದರೆ ಎನ್ಡಿಪಿಎಸ್ ಕಾಯ್ದೆಯಡಿ ಕೇಸ್ ಬುಕ್ ಮಾಡಲಿದ್ದಾರೆ. ಈ ಕೇಸ್ ಬುಕ್ ಆದ್ರೆ ಕೋರ್ಟ್ ಅಲೆಯುವುದು ಅನಿವಾರ್ಯವಾಗಿದೆ.