ETV Bharat / state

ಈ ವಿಮಾನ, ರೈಲು, ಬಸ್​ನಲ್ಲಿ ಪ್ರಯಾಣಿಸಿದವರು ಕೂಡಲೇ ಸಹಾಯವಾಣಿಗೆ ಸಂಪರ್ಕಿಸಿ!

author img

By

Published : Mar 27, 2020, 8:53 PM IST

ಕಾಂಗೊ ಎಕ್ಸ್‌ಪ್ರೆಸ್‌ ರೈಲು ಮುಖಾಂತರ ಮಾರ್ಚ್ 11 ರಂದು ದೆಹಲಿಯಿಂದ ಪ್ರಯಾಣ ಬೆಳೆಸಿ ಮಾರ್ಚ್ 14ರ ರಾತ್ರಿ 12.30ಗಂಟೆಗೆ ಬೆಂಗಳೂರಿನ ಯಶವಂತಪುರಕ್ಕೆ ಬಂದಿರುತ್ತಾರೆ. ಬೆಳಗಿನಜಾವ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಂತರ ಯಶವಂತಪುರದಿಂದ ಶಿರಾ ತಾಲೂಕು ತುಮಕೂರು ಜಿಲ್ಲೆಗೆ ತೆರಳಿರುತ್ತಾರೆ. ಈ ದಿನ ಮತ್ತು ಈ ಪ್ರಯಾಣ ಮೂಲಗಳ ಮುಖಾಂತರ ಯಾವುದೇ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದೇ ಆದಲ್ಲಿ ತುರ್ತಾಗಿ ಇಲಾಖೆಯ ಉಚಿತ ಆರೋಗ್ಯ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

ಆರೋಗ್ಯ ಇಲಾಖೆ ಸೂಚನೆ
ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಮಾರ್ಚ್ 11 ರಂದು ಕಾಂಗೋ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ, ಮಾರ್ಚ್ 14 ರಂದು ಬೆಳಗ್ಗೆ 8 ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಾಯುವಜ್ರ ಬಸ್ ಹಾಗೂ 10 ಗಂಟೆಗೆ ಬೆಂಗಳೂರಿನಿಂದ ದಾವಣಗೆರೆಗೆ‌ ರಾಜಹಂಸ ಬಸ್ ನಲ್ಲಿ ಪ್ರಯಾಣಿಸಿದ್ದವರಿಗೆ ಆರೋಗ್ಯ ಇಲಾಖೆ ಮುಖ್ಯ ಸೂಚನೆಯೊಂದನ್ನು ನೀಡಿ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಹೇಳಿದೆ.

1. ರೋಗಿ-60 ಕಾಂಗೊ ಎಕ್ಸ್‌ಪ್ರೆಸ್‌ ರೈಲು ಮುಖಾಂತರ ಮಾರ್ಚ್ 11 ರಂದು ದೆಹಲಿಯಿಂದ ಪ್ರಯಾಣ ಬೆಳೆಸಿ ಮಾರ್ಚ್ 14ರ ರಾತ್ರಿ 12.30ಗಂಟೆಗೆ ಬೆಂಗಳೂರಿನ ಯಶವಂತಪುರಕ್ಕೆ ಬಂದಿರುತ್ತಾರೆ. ಬೆಳಗಿನ ಜಾವ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಂತರ ಯಶವಂತಪುರದಿಂದ ಶಿರಾ ತಾಲೂಕು ತುಮಕೂರು ಜಿಲ್ಲೆಗೆ ತೆರಳಿರುತ್ತಾರೆ. ಈ ದಿನ ಮತ್ತು ಈ ಪ್ರಯಾಣ ಮೂಲಗಳ ಮುಖಾಂತರ ಯಾವುದೇ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದೇ ಆದಲ್ಲಿ ತುರ್ತಾಗಿ ಇಲಾಖೆಯ ಉಚಿತ ಆರೋಗ್ಯ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

traveled by these plane, train or bus
ಮಾರ್ಚ್ 11 ಹಾಗೂ 17 ರಂದು ರೈಲು, ಬಸ್​ನಲ್ಲಿ ಪ್ರಯಾಣಿಸಿದ ಸೋಂಕಿತರ ಕುರಿತಾದ ಮಾಹಿತಿ

2. ರೋಗಿ-63 ಮಾರ್ಚ್ 17 ರಂದು ಇ.ವೈ-32 ವಿಮಾನದ ಮುಖಾಂತರ ಅಬುದಾಬಿಗೆ ತಲುಪಿ, ಮಾರ್ಚ್ 18 ರಂದು ಆಬುದಾಬಿಯಿಂದ ಇ.ವೈ-216 ವಿಮಾನದ ಮೂಲಕ ಬೆಂಗಳೂರಿಗೆ ಬೆಳಗ್ಗೆ ಆಗಮಿಸಿದ್ದಾರೆ. ಅಂದು ಬೆಳಗ್ಗೆ 8 ಗಂಟೆಗೆ ವಾಯುವಜ್ರ ಬಸ್​ನ ಮೂಲಕ ಬೆಂಗಳೂರು ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ಬಂದಿಳಿದಿದ್ದು, ಅದೇ ದಿನ ಸುಮಾರು 10 ಗಂಟೆಗೆ ಮೆಜೆಸ್ಟಿಕ್ ನಿಂದ ರಾಜಹಂಸ ಬಸ್ ಮೂಲಕ ದಾವಣಗೆರೆಯನ್ನು ತಲುಪಿರುತ್ತಾರೆ. ಅದೇ ವಿಮಾನ ಮತ್ತು ಬಸ್‌ನಲ್ಲಿ ಪ್ರಯಾಣ ಮಾಡಿರಬಹುದಾದ ಪ್ರಯಾಣಿಕರು ಸಹಾಯವಾಣಿ 104, 080-46848600, 66692000 ಸಂಪರ್ಕಿಸಿ ಎಂದು ಸೂಚಿಸಲಾಗಿದೆ.

ಇನ್ನು, ಕೊರೊನಾ ಶಂಕೆ ಹಿನ್ನಲೆಯಲ್ಲಿ ಇಂದು ಹೊಸದಾಗಿ‌ 633 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಿದ್ದು, ಈವರೆಗೆ ಅವಲೋಕನೆಗೆ ಒಳಪಟ್ಟವರ ಸಂಖ್ಯೆ 14,115ಕ್ಕೆ ತಲುಪಿದೆ. ಆಸ್ಪತ್ರೆಗಳಲ್ಲಿ ಐಸೋಲೇಷನ್ ನಲ್ಲಿ ಇಂದು‌ 12 ಜನರನ್ನು ಇರಿಸಿದ್ದು, ಇಲ್ಲಿಯವರೆಗೆ 166 ಜನರನ್ನು ಐಸೋಲೇಷನ್​ನಲ್ಲಿ ಇರಿಸಿದಂತಾಗಿದೆ. ಇಂದು 237 ಜನರ ಮಾದರಿ ಸಂಗ್ರಹಿಸಿದ್ದು‌ ಈವರೆಗೆ 2,838 ಮಾದರಿ ಸಂಗ್ರಹ ಮಾಡಿದಂತಾಗಿದೆ. ಇಂದು 150 ವರದಿಗಳು ಕೊರೊನಾ ನೆಗಟಿವ್ ಬಂದಿದ್ದು, ಈವರೆಗೆ 2,563 ವರದಿ ನೆಗೆಟಿವ್ ಬಂದಿದೆ. ಇಂದು 9 ವರದಿ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 64ಕ್ಕೆ ತಲುಪಿದೆ.

ಯಾವ ಆಸ್ಪತ್ರೆಯಲ್ಲಿ ಎಷ್ಟು ಶಂಕಿತರು:

ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 6, ಬೆಂಗಳೂರಿನ ಇತರೆ ಆಸ್ಪತ್ರೆಗಳಲ್ಲಿ 33, ದಕ್ಷಿಣ ಕನ್ನಡದಲ್ಲಿ 30, ಬಳ್ಳಾರಿ 3, ಕಲಬುರಗಿ 19, ಕೊಡಗು 1, ಉಡುಪಿಯಲ್ಲಿ 10, ಬೀದರ್ 1, ಗದಗ 11, ಉತ್ತರ ಕನ್ನಡ 15, ಧಾರವಾಡ 2, ಹಾಸನ 3, ಚಾಮರಾಜನಗರ 0, ಚಿತ್ರದುರ್ಗ 4, ದಾವಣಗೆರೆ 5, ಮೈಸೂರು 7, ರಾಯಚೂರು 0, ಶಿವಮೊಗ್ಗ 4, ಮಂಡ್ಯ 1, ತುಮಕೂರು 8, ಚಿಕ್ಕಮಗಳೂರು 0, ಚಿಕ್ಕಬಳ್ಳಾಪುರ 3 ಸೇರಿ ಒಟ್ಟು 166 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು 23 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. 12 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.

ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು‌ 1,28,110 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ.‌ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಗೆ ಸಹಕಾರ ನೀಡಿ ಎಂದು ಮನವಿ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.