ಬೆಂಗಳೂರು: ಸಿಎಂ ಆಗಿಆಯ್ಕೆಯಾದ ನಂತರ ಕೇಂದ್ರ ಕಚೇರಿ ಜಗನ್ನಾಥ ಭವನಕ್ಕೆ ಬಂದ ಬೊಮ್ಮಾಯಿ, ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಕೆಲಸ ಮಾಡುತ್ತೇನೆ. ಯಡಿಯೂರಪ್ಪ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇನೆ. ಮುಂದಿನ ದಿನಗಳಲ್ಲಿ ವರಿಷ್ಠರ ಜತೆ ಚರ್ಚಿಸಿ ಸಂಪುಟ ರಚನೆ ಮಾಡ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಜಯೇಂದ್ರ ವಿರುದ್ದದ ಪ್ರಕರಣಗಳನ್ನ ತನಿಖೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿಯೋಜಿತ ಸಿಎಂ ಬೊಮ್ಮಾಯಿ ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ. ಆದರೆ ಈ ಸಂದರ್ಭದಲ್ಲಿ ವಿನಾಕಾರಣ ಇವೆಲ್ಲಾ ವಿಚಾರಗಳ ಪ್ರಸ್ತಾಪ ಬೇಡ ಎಂದರು.
ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ಮೋದಿಯವರು, ಗೃಹ ಸಚಿವ ಅಮಿತ್ ಶಾ ಅವರೇ ಗುರುತಿಸಿ ಜವಾಬ್ದಾರಿ ಕೊಟ್ಡಿದಾರೆ. ಬೆಲ್ಲದ್ ಅವರು ರೇಸ್ನಲ್ಲಿ ಇದ್ರೋ ಇಲ್ಲವೋ ಗೊತ್ತಿಲ್ಲ ಎಂದು ಕೇಶವಾಕೃಪಾಗೆ ಹೊರಟ ನಿಯೋಜಿತ ಸಿಎಂ ಬೊಮ್ಮಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ನಾನು ಪೈಪೋಟಿಯಲ್ಲಿ ನಂಬಲ್ಲ, ವರಿಷ್ಠರು ನನ್ನ ಆಯ್ಕೆ ಮಾಡಿದ್ದಾರೆ, ಮುಂದುವರೆಯುತ್ತೇನೆ ನನ್ನ ಮೇಲಿನ ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತೇನೆ ಎಂದರು.
ಇದನ್ನು ಓದಿ:ಬಿಎಸ್ವೈ ಮಾನಸ ಪುತ್ರನಿಗೆ 'ಸಿಎಂ' ಪಟ್ಟ: ಬಿಜೆಪಿ ಹೈಕಮಾಂಡ್‌ನಿಂದ ಡ್ಯಾಮೇಜ್ ಕಂಟ್ರೋಲ್ ತಂತ್ರ