ETV Bharat / state

ಬೆಂಗಳೂರಿನಲ್ಲಿ ಮಂಗಳಮುಖಿ ಅನುಮಾನಾಸ್ಪದ ರೀತಿಯಲ್ಲಿ ಸಾವು

author img

By

Published : Mar 1, 2020, 2:14 PM IST

ಮಂಗಳಮುಖಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

third gender Marsmukhi suspicious death in Bengaluru
ಬೆಂಗಳೂರಿನಲ್ಲಿ ಮಂಗಳಮುಖಿ ಅನುಮಾನಸ್ಪದ ಸಾವು

ಬೆಂಗಳೂರು: ಮಂಗಳಮುಖಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಗೌತಮ್ ಅಲಿಯಾಸ್ ರಮ್ಯ ಮೃತ ಮಂಗಳ ಮುಖಿಯಾಗಿದ್ದು, ಕೆ.ಪಿ. ಅಗ್ರಹಾರದ ಟೆಂಟ್ ರೋಡ್ ಬಳಿಯ ಮನೆಯೊಂದರಲ್ಲಿ ಹದಿನೈದು ವರ್ಷಗಳಿಂದ ವಾಸವಾಗಿದ್ದರು. ಪುರುಷರಾಗಿದ್ದ ಅವರು, ಕಳೆದ 8 ತಿಂಗಳ ಹಿಂದೆ ಮಂಗಳಮುಖಿಯಾಗಿ ಪರಿವರ್ತನೆಯಾಗಿ ಒಂಟಿಯಾಗಿ ನೆಲೆಸಿದ್ದರು ಎಂಬ ವಿಚಾರ ಗೊತ್ತಾಗಿದೆ.

ಅಕ್ಕಪಕ್ಕದವರ ಜೊತೆ ಯಾವುದೇ ಸಂಪರ್ಕ ಇಲ್ಲದ ಕಾರಣ, ಯಾರೂ ಅವರ ಜೊತೆ ಮಾತಾಡ್ತಿರಲಿಲ್ಲ. ಆದರೆ ಅವರ ಮನೆಯಲ್ಲಿ ಕೆಟ್ಟ ವಾಸನೆ ಬರೋಕೆ ಶುರುವಾದ ಕಾರಣ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ‌ಮನೆಯ ಬಳಿ ಬಂದು ಪೊಲೀಸರು ‌ಪರಿಶೀಲನೆ ಮಾಡಿದಾಗ, ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದು ಗೊತ್ತಾಗಿದೆ. ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದ್ದು ಮರಣೋತ್ತರ ಪರೀಕ್ಷೆಗೆ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಮಂಗಳಮುಖಿ ಅನುಮಾನಾಸ್ಪದ ಸಾವು

ಇನ್ನು ಮಂಜು ಎಂಬ ವ್ಯಕ್ತಿಯನ್ನು ರಮ್ಯ ಪ್ರೀತಿಸುತ್ತಿದ್ದರು ಎನ್ನಲಾಗುತ್ತಿದ್ದು, ಹಣಕ್ಕಾಗಿ ಕೊಲೆ ಮಾಡಲಾಗಿದೆಯಾ ಅಥವಾ ಯಾವುದಾದರು ದ್ವೇಷಕ್ಕೆ ಕೊಲೆ ಮಾಡಲಾಗಿದೆಯಾ ಎಂದು ಎರಡು ಆಯಾಮಗಳಲ್ಲಿ ಕೆ.ಪಿ ಅಗ್ರಹಾರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.