ಬೆಂಗಳೂರು: ಎಸ್ಡಿಪಿಐ ಸಂಘಟನೆ ಬ್ಯಾನ್ ಮಾಡುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ತೀರ್ಮಾನ ಕೈಗೊಂಡಿದ್ದಾರೆ.
ಎಸ್ಡಿಪಿಐ ಸಂಘಟನೆ ಬಹಳ ಆ್ಯಕ್ಟೀವ್ ಆಗಿದ್ದು, ಸಂಘಟನೆಯನ್ನು ಬ್ಯಾನ್ ಮಾಡುವ ಕುರಿತಾಗಿ ಗೃಹ ಸಚಿವ ಬೊಮ್ಮಯಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲು ನಿರ್ಧಾರ ಮಾಡಿದ್ದಾರೆ. ಸಿಲಿಕಾನ್ ಸಿಟಿ ಸೇರಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಹಿಂದೂ ಮುಖಂಡರ ಹತ್ಯೆಯಲ್ಲಿ ಎಸ್ಡಿಪಿಐ ಸಂಘಟನೆ ಭಾಗಿಯಾಗಿರೋದು ಆರೋಪವಿದ್ದು, ಇದರ ಕುರಿತು ಗಂಭೀರವಾಗಿ ಯೋಚನೆ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ ಆರೋಪಿಗಳು ಪ್ರಮುಖವಾಗಿ ಎಸ್ಡಿಪಿಐ ಕಾರ್ತಕರ್ತರಾಗಿದ್ದಾರೆ. ಇವರನ್ನ ವಿಚಾರಣೆ ನಡೆಸಿದಾಗ ಇವರ ವೈಯಕ್ತಿಕ ಖರ್ಚಿಗೆ ಹತ್ತು ಸಾವಿರ ಹಣವನ್ನ ಎಸ್ಡಿಪಿಐ ಮುಖಂಡರು ನೀಡ್ತಿದ್ದ ವಿಚಾರ ಕೂಡ ಬಯಲಾಗಿದೆ.
ಮತ್ತೊಂದೆಡೆ ಈ ಬೆಳವಣಿಗೆ ಮಧ್ಯೆ ಜನವರಿ 26ರಂದು ಗಣರಾಜ್ಯೋತ್ಸವ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳು ನಡಿಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.