ಬೆಂಗಳೂರು: ಕಳೆದ ವರ್ಷದಿಂದ ಇಡೀ ಜಗತ್ತಿಗೆ ವಕ್ಕರಿಸಿದ ಕೊರೊನಾದಿಂದ ಹಲವಾರು ರೀತಿಯಲ್ಲಿ ನಷ್ಟಗಳನ್ನ ಜನರು ಅನುಭವಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಅನೇಕ ಜನರು ಕೆಲಸ ಕಳೆದುಕೊಂಡಿದ್ದರು. ಕೆಲಸ ಕಳೆದುಕೊಂಡ ವಿದ್ಯಾವಂತರು ಕೂಡ ಅಡ್ದ ದಾರಿ ಹಿಡಿದು ಕಂಬಿ ಹಿಂದೆ ಸರಿಯುತ್ತಿದ್ದಾರೆ.
ಇಲ್ಲೊಬ್ಬ ಯುವಕ ಎಂಬಿಎ ಪಧವೀದರನಾದರೂ ಕೆಲಸವಿಲ್ಲದ ಕಾರಣ ಸರಗಳ್ಳತನಕ್ಕೆ ಇಳಿದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಶೇಖ್ ಗೌಸ್ ಬಾಷಾ ಬಂಧಿತ ಆರೋಪಿ. ಇತ ಖಾಸಗಿ ಕಂಪನಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ, ಆದರೆ, ಲಾಕ್ಡೌನ್ ಎಫೆಕ್ಟ್ನಿಂದ ಕೆಲಸ ಕಳೆದುಕೊಂಡಿದ್ದ.
35,000 ಸಾಲ ಮಾಡಿದ್ದ ಈ ಸಾಲ ತಿರಿಸಲು ಈ ಆಸಾಮಿ ಸರಗಳ್ಳತನಕ್ಕೆ ಇಳಿದಿದ್ದ. ಜಯನಗರದ ಪೂರ್ಣಿಮಾ ಕನ್ವೆನ್ಷನ್ ಹಾಲ್‌ನಿಂದ ಬರ್ತಿದ್ದ ಮಹಿಳೆಯ ಸರ ಎಗರಿಸಿದ್ದ. ಈ ಕಳ್ಳತನದಲ್ಲಿ ಜಯನಗರ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ವಿಚಾರಣೆ ವೇಳೆ ತಾನು MBA ಓದಿದ್ದು, ಸಾಲಗಾರರ ಕಿರುಕುಳ ಹೆಚ್ಚಾಗಿ ಸರಗಳ್ಳತನಕ್ಕೆ ಮುಂದಾಗಿದ್ದೇನೆ ಎಂದು ಪೊಲೀಸರ ಎದುರು ತನ್ನ ಅಳಲು ತೋಡಿಕೊಂಡಿದ್ದಾನೆ.