ಬೆಂಗಳೂರು: ಎರಡನೇ ಹಂತದ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು,ಇಷ್ಟು ದಿನಗಳ ಕಾಲ ಮುಚ್ಚಲಾಗಿದ್ದ ಆರ್.ವಿ ರಸ್ತೆ ಮೆಟ್ರೋ ನಿಲ್ದಾಣದ ನೈಋತ್ಯ ದ್ವಾರ ಈಗ ಪ್ರಯಾಣಿಕರಿಗೆ ತೆರೆದಿದ್ದು, ಇದರ ಬೆನ್ನಲ್ಲೇ ಪಶ್ಚಿಮ ಭಾಗದ ದ್ವಾರ ಮುಚ್ಚಲು ಮೆಟ್ರೋ ಮುಂದಾಗಿದೆ.
ಎರಡನೇ ಹಂತದ ಕಾಮಗಾರಿಯಲ್ಲಿ ಸದ್ಯ ಸಂಚರಿಸುತ್ತಿರುವ ಯಲಚೇನಹಳ್ಳಿಯಿಂದ ನಾಗಸಂದ್ರ ಮಾರ್ಗವಾಗಿ ಸಂಚರಿಸುತ್ತಿರುವ ಹಸಿರು ಮಾರ್ಗದ ಟ್ರ್ಯಾಕಿನ ಪಕ್ಕದಲ್ಲಿ ಬೊಮ್ಮಸಂದ್ರ ಮತ್ತು ನಾಗಸಂದ್ರ ಮಾರ್ಗವಾಗಿ ನೂತನ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಅದರ ಸಲುವಾಗಿ ಇಂದಿನಿಂದ ಆರ್.ವಿ ರಸ್ತೆ ಮೆಟ್ರೊ ನಿಲ್ದಾಣದ ಪಶ್ಚಿಮ ದ್ವಾರ ಮುಚ್ಚಲಾಗುತ್ತಿದೆ.

ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗದಂತೆ, ಕಾಮಗಾರಿ ನಿರ್ವಹಿಸಲು ಬಿ.ಎಂ.ಆರ್.ಸಿ.ಎಲ್ ನಿರ್ಧರಿಸಿದ್ದಲ್ಲದೆ ಸುತ್ತಮುತ್ತ ಇರುವ ಮರಗಳಿಗೆ ಹೆಚ್ಚು ಹಾನಿ ಮಾಡದೆ ಮಾರ್ಗ ನಿರ್ಮಾಣ ಪೂರ್ಣಮಾಡಲು ಮುಂದಾಗಿದೆ.
ಇಂದಿನಿಂದ ಆರ್.ವಿ ರಸ್ತೆಯ ಮೆಟ್ರೋ ನಿಲ್ದಾಣದ ಪಶ್ಚಿಮ ಭಾಗದ ದ್ವಾರ ಮುಚ್ಚಲಿದ್ದು, ಸಾರ್ವಜನಿಕರು ಪೂರ್ವ ಭಾಗದ ದ್ವಾರ ಬಳಸುವಂತೆ ಬಿ.ಎಂ.ಆರ್.ಸಿ.ಎಲ್ ಮನವಿ ಮಾಡಿದೆ.