ETV Bharat / state

ದೇಣಿಗೆ ಕೊಟ್ಟವರು-ಕೊಡದವರ ಮನೆಗಳಿಗೂ‌ ಮಾರ್ಕ್ ಮಾಡಿಲ್ಲ: ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ್ - ಹೆಚ್​ಡಿಕೆ ವಿರುದ್ದ ಕಿಡಿಕಾರಿದ ಅಶ್ವತ್ಥ್​ ನಾರಯಣ್​

ದೇಣಿಗೆ ಕೊಟ್ಟ ಮನೆಗಳಿಗೂ ಮಾರ್ಕ್ ಮಾಡಿಲ್ಲ. ದೇಣಿಗೆ ಕೊಡದವರ ಮನೆಗಳಿಗೂ ಮಾರ್ಕ್ ಮಾಡಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿಯವರು ಮನಸ್ಥಿತಿ‌ ಕಳ್ಕೊಂಡ ರೀತಿಯಲ್ಲಿ ಹೇಳಿಕೆ ಕೊಡ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ‌ನಾರಾಯಣ್ ತಿಳಿಸಿದ್ದಾರೆ.

there-is-no-one-home-marked-yet-for-rama-mandhir-donation
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ‌ನಾರಾಯಣ್
author img

By

Published : Feb 16, 2021, 5:30 PM IST

Updated : Feb 16, 2021, 6:03 PM IST

ಬೆಂಗಳೂರು : ರಾಮಮಂದಿರಕ್ಕೆ ದೇಣಿಗೆ ಕೊಟ್ಟ ಮನೆಗಳಿಗಾಗಲಿ, ಕೊಡದಿರದ ಮನೆಗಳಿಗಾಗಲಿ ಯಾವುದೇ ಗುರುತು ಮಾಡಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ‌ನಾರಾಯಣ್ ಸ್ಪಷ್ಟಪಡಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಮಮಂದಿರಕ್ಕಾಗಿ ದೇಶಾದ್ಯಂತ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಜನ ದೇಣಿಗೆ ಕೊಡುತ್ತಿದ್ದಾರೆ. ದೇಣಿಗೆ ಕೊಟ್ಟ ಮನೆಗಳಿಗೂ ಮಾರ್ಕ್ ಮಾಡಿಲ್ಲ. ದೇಣಿಗೆ ಕೊಡದವರ ಮನೆಗಳಿಗೂ ಮಾರ್ಕ್ ಮಾಡಿಲ್ಲ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ‌ನಾರಾಯಣ್ ಮಾತನಾಡಿದ್ದಾರೆ

ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿಯವರು ಮನಸ್ಥಿತಿ‌ ಕಳ್ಕೊಂಡ ರೀತಿ ಹೇಳಿಕೆ ಕೊಡ್ತಿದ್ದಾರೆ. ಕುಮಾರಸ್ವಾಮಿ ವಿವಾದ ಸೃಷ್ಟಿಸಲು ಈ ರೀತಿಯ ಹೇಳಿಕೆ ಕೊಟ್ಟಿರಬೇಕು ಎಂದು ಕಿಡಿಕಾರಿದರು.

ಧರ್ಮಬೇಧ ಮರೆತು ರಾಮಮಂದಿರ ನಿರ್ಮಾಣಕ್ಕೆ ಜನರು ದೇಣಿಗೆ ನೀಡ್ತಿದ್ದಾರೆ. ಸ್ವತಃ ಜನರೇ ಶ್ರೀರಾಮ ಮಂದಿರ ಅಕೌಂಟ್​ಗೆ ದೇಣಿಗೆ ಕೊಡ್ತಿದ್ದಾರೆ. ಕುಮಾರಸ್ವಾಮಿ ಕ್ಷೇತ್ರ ರಾಮನಗರಕ್ಕೆ ದೇಣಿಗೆ ಸಂಗ್ರಹಕ್ಕೆ ನಾನೂ ಹೋಗಿದ್ದೆ. ಹಣ ಸಂಗ್ರಹ ಮಾಡುವ ವೇಳೆ ಅವರಿಗೆ ರಸೀದಿ ಕೂಡ ಕೊಟ್ಟಿದ್ದೇವೆ. ಈ ಸಂದರ್ಭದಲ್ಲಿ ನಾವ್ಯಾರೂ ಮನೆಗಳಿಗೆ ಮಾರ್ಕ್ ಮಾಡಿಲ್ಲ. ಬಹುಶಃ ಕುಮಾರಸ್ವಾಮಿಯವರೇ ಇದನ್ನು ಮಾಡಿಸಿ, ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಹೆಚ್​ಡಿಕೆ ನಾಜಿ ಸಂತತಿ, ಹಿಟ್ಲರ್ ನೆನೆಸಿಕೊಂಡಿದ್ದಾರೆ. ಇದನ್ನ ನೋಡಿದರೆ ಹೆಚ್​ಡಿಕೆ ಮನಸ್ಸಿನಲ್ಲಿ ತಳಮಳ ಸೃಷ್ಟಿಯಾಗಿದೆ ಎಂಬುದು ಖಾತ್ರಿಯಾಗುತ್ತದೆ. ಹಾಸನದಲ್ಲಿ ದೇವೇಗೌಡರ ಕುಟುಂಬ ಗೂಂಡಾ ಸಂಸ್ಕೃತಿಯ ರಾಜಕಾರಣ ಶುರು ಮಾಡಿತ್ತು. ಹಾಸನದ ಜಾಪಲಾಪುರದಲ್ಲಿ ಬೆಂಕಿ ಇಟ್ಟವರು ದೇವೇಗೌಡರ ಕುಟುಂಬದವರು. ಕುಮಾರಸ್ವಾಮಿ ಆಂತರಿಕ ಕ್ಷೋಭೆ ಉಂಟು ಮಾಡಲು ಈ ಹೇಳಿಕೆ ಕೊಟ್ಟಿದ್ದಾರೆ. ಮೊದಲು ತಮ್ಮ ಮನಸ್ಥಿತಿ ಸರಿ ಮಾಡಿಕೊಳ್ಳಲಿ ಎಂದರು.

ಹಾಸನದ ರಾಜಕಾರಣ ಕುಮಾರಸ್ವಾಮಿಯವರು ನೆನಪು ಮಾಡ್ಕೋಬೇಕು. ಕಾಂಗ್ರೆಸ್, ಜೆಡಿಎಸ್ ನವರು ಒಬ್ಬರಿಗೊಬ್ರು ಹೆಣ್ಣು, ಗಂಡು ತರೋದಕ್ಕೆ ಆಗೋದಿಲ್ಲ. ಈ ರೀತಿಯ ರಾಜಕಾರಣ ಹಾಸನ ಜಿಲ್ಲೆಯಲ್ಲಿದೆ. ಇಂತಹ ಗೂಂಡಾ ರಾಜಕಾರಣ, ಸರ್ವಾಧಿಕಾರಿ ಧೋರಣೆ ಮಾಡಿರೋದು ದೇವೇಗೌಡರಿಂದ. ಕುಮಾರಸ್ವಾಮಿ ಹೇಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ.

ಅಲ್ಪಸಂಖ್ಯಾತರ ಓಲೈಕೆ ಮಾಡೋದನ್ನು ಹೆಚ್​ಡಿಕೆ, ಕಾಂಗ್ರೆಸ್ ಬಿಡಲಿ. ಸಮಾಜದಲ್ಲಿ ಅಶಾಂತಿ ನಿರ್ಮಿಸುವ ಕೆಲಸ ಹೆಚ್​ಡಿಕೆ ಮಾಡೋದು ಬೇಡ. ಈಗಾಗಲೇ ಜನ ಜೆಡಿಎಸ್, ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದ್ದಾರೆ ಎಂದು ಕಿಡಿ ಕಾರಿದರು.

ಓದಿ: ಡೀಸೆಲ್ ದರ ಏರಿಕೆ ಖಂಡಿಸಿ ಬೋರ್​ವೆಲ್​ ಲಾರಿ ಮಾಲೀಕರ ಮುಷ್ಕರ

ದಿಶಾ ರವಿ ಬಂಧನಕ್ಕೆ ವಿರೋಧ ಸರಿಯಲ್ಲ, ಈಕೆಯ ಪರ ನಾನು ಗೌರಿಯಂತಹ ಕೆಲವು ಸಂಘಟನೆಗಳು ನಿಂತಿವೆ. ಈ ಸಂಘಟನೆಗಳು ಇನ್ನೈದು ವರ್ಷ ಬೀದಿಯಲ್ಲೇ ಕೂತ್ಕೋಬೇಕು. ಇವು ದೇಶದ್ರೋಹಿ ಸಂಘಟನೆಗಳು. ದೇಶದ್ರೋಹ ಕೆಲಸ‌ ಮಾಡುವವರಿಗೆ ಬೀದಿಗಳೇ ಗ್ಯಾರಂಟಿಯಾಗಲಿದೆ. ಅವರಿಗೆ ಬೀದಿಗಳೇ ಖಾಯಂ ಸ್ಥಾನವಾಗಲಿದೆ ಎಂದ ಅವರು, ಹೆಚ್​ಡಿಕೆ ಮತ್ತು ಡಿಕೆಶಿ ಗಾಂಭೀರ್ಯತೆಯ ಹೇಳಿಕೆ ನೀಡಬೇಕು ಎಂಬ ಎಚ್ಚರಿಕೆ ಕೊಡುತ್ತಿರುವಾಗಿ ತಿಳಿಸಿದರು.

Last Updated : Feb 16, 2021, 6:03 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.