ETV Bharat / state

ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ ಏಳನೇ ವೇತನ ಆಯೋಗದ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪವಿಲ್ಲ : ಜೆಡಿಎಸ್‌ ಶಾಸಕ ಎಂ ಟಿ ಕೃಷ್ಣಪ್ಪ - ಸರ್ಕಾರಿ ಮೆಡಿಕಲ್‍ ಕಾಲೇಜು

ಬಜೆಟ್​ನಲ್ಲಿ ನೀರಾವರಿ, ವಿದ್ಯುತ್​ಗೆ ಹೆಚ್ಚು ಒತ್ತು ಕೊಟ್ಟಿಲ್ಲ. ಬರೀ ಐದು ಗ್ಯಾರಂಟಿಗಳ ಬಜೆಟ್ ಇದಾಗಿದೆ ಎಂದು ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ ಅವರು ತಿಳಿಸಿದ್ದಾರೆ.

ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ
ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ
author img

By

Published : Jul 18, 2023, 4:30 PM IST

ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ ಏಳನೇ ವೇತನ ಆಯೋಗದ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದು ಜೆಡಿಎಸ್‍ ಶಾಸಕ ಎಂ ಟಿ ಕೃಷ್ಣಪ್ಪ ವಿಧಾನಸಭೆಯಲ್ಲಿ ಟೀಕಿಸಿದರು. ಬಜೆಟ್ ಮೇಲಿನ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾಸೋದ್ಯಮವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬಹುದು. ಆದರೆ, ಆರೋಗ್ಯ ಸೇವೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲು ಹೇಗೆ ಸಾಧ್ಯ?. ಸರ್ಕಾರಕ್ಕೆ ಶಕ್ತಿ ಇಲ್ಲವೆ? ಸರ್ಕಾರ ಆರೋಗ್ಯ ಇಲಾಖೆಗೆ ಹೆಚ್ಚು ಸೌಲಭ್ಯ ಕೊಡಬೇಕು. ಖಾಸಗಿ ಸಹಭಾಗಿತ್ವಕ್ಕೆ ಹೋಗಬಾರದು ಎಂದು ಒತ್ತಾಯಿಸಿದರು.

ಬಜೆಟ್​ನಲ್ಲಿ ನೀರಾವರಿ, ವಿದ್ಯುತ್​ಗೆ ಹೆಚ್ಚು ಒತ್ತು ಕೊಟ್ಟಿಲ್ಲ. ಬರೀ ಐದು ಗ್ಯಾರಂಟಿಗಳ ಬಜೆಟ್‍ ಆಗಿದೆ. ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಬೇಕು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಚಿಂತನೆ ಮಾಡಬೇಕು. ಹೇಮಾವತಿ ಕಾಲುವೆ ಮುಚ್ಚಿ ಹೋಗುತ್ತಿದೆ. ಪ್ರತಿ ವರ್ಷ ಹೊಸ ಕಾಲುವೆ ಮಾಡಿದರೂ ಮುಚ್ಚಿ ಹೋಗುತ್ತವೆ. ರೈತರು ಬದುಕಬೇಕೋ ಅಥವಾ ಗುತ್ತಿದಾರರು ಬದುಕಬೇಕೋ? ಎಂದು ಪ್ರಶ್ನಿಸಿದರು.

ಅಬಕಾರಿ ತೆರಿಗೆ ಶೇ. 20ರಷ್ಟು ಹೆಚ್ಚಳ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುತ್ತಾರೆ. ಸಂಜೆ ಆಯಾಸ ಪರಿಹಾರಕ್ಕೆ ಮದ್ಯ ಸೇವಿಸುತ್ತಾರೆ. ತೆರಿಗೆ ಹೆಚ್ಚಳ ಮಾಡಿದರೆ ಅವರು ಏನು ಮಾಡಬೇಕು ಎಂದರು.

ಆಗ ಸಚಿವ ಡಾ ಶರಣಪ್ರಕಾಶ್‍ ಪಾಟೀಲ್‍ ಮಧ್ಯೆ ಪ್ರವೇಶ ಮಾಡಿ, ಕುಡಿಯುವುದನ್ನು ಕಡ್ಡಾಯ ಮಾಡಿಲ್ಲ ಎಂದರು. ಮದ್ಯದ ಮೇಲೆ 20% ತೆರಿಗೆ ಹೆಚ್ಚಳ ವಿಚಾರಕ್ಕೆ ವ್ಯಂಗ್ಯವಾಡಿದ ಕೃಷ್ಣಪ್ಪ ಅವರು, ಮದ್ಯದ ಮೇಲೆ 20% ತೆರಿಗೆ ಹೆಚ್ಚಿಸಿದ್ದಾರೆ. ಸ್ಲ್ಯಾಬ್ ಅಂತ ಹೇಳಿ ಹೆಚ್ಚಳ ಮಾಡಲಾಗಿದೆ. ಸ್ಲ್ಯಾಬ್ ಅಂದ್ರೇನು ಯಾರಿಗಾದರೂ ಗೊತ್ತಾ..? ತೆರಿಗೆ ಹೆಚ್ಚಿಸಿರುವುದು ಪೆಗ್‌ ಗಾ? ಕ್ವಾಟರ್ ಗಾ..? ಬಾಟಲ್ ಗಾ..? ಅಂತ ಗೊತ್ತಾಗಲಿಲ್ಲ. ನಾನೂ ಬಜೆಟ್ ಓದಿದೆ, ಲಿಕ್ಕರ್ ಶಾಪ್ ಇಟ್ಟಿರೋರು ಸ್ಲ್ಯಾಬ್ ಅಂದ್ರೇನು ಹೇಳಿ ಎಂದರು.

ಮಾತು ಮುಂದುವರೆಸಿದ ಕೃಷ್ಣಪ್ಪ ಅವರು ಕುಡಿಯುವ ನೀರಿಗಾಗಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಬೇಕು. ತುಮಕೂರು ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್‍ ಕಾಲೇಜು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ

ಹಾವೇರಿ ಜಿಲ್ಲೆ ಒಂದರಲ್ಲಿಯೇ 18 ಜನ ಸತ್ತಿದ್ದಾರೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬಜೆಟ್ ಮೇಲಿನ ಚರ್ಚೆ ವೇಳೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಕೇಸ್​ಗಳ ಬಗ್ಗೆ ಪ್ರಸ್ತಾಪ ಮಾಡಿದರು. ಹಾವೇರಿ ಜಿಲ್ಲೆ ಒಂದರಲ್ಲಿಯೇ 18 ಜನ ಸತ್ತಿದ್ದಾರೆ. ಇದಕ್ಕೆ ಸ್ಪೆಷಲ್ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಮಾಡಿದರು. ಆಗ ಪುಟ್ಟಣ್ಣಯ್ಯ ಹೇಳಿಕೆಗೆ ಹಿರೇಕೆರೂರು ಶಾಸಕ ಯು ಬಿ ಬಣಕಾರ್ ಆಕ್ಷೇಪ ವ್ಯಕ್ತಪಡಿಸಿ, ರೈತರ ಸಾವಿನ ಬಗ್ಗೆ ಕ್ಷೇತ್ರವಾರು ಹೇಳಿ. ಹಾವೇರಿ ಜಿಲ್ಲೆಯದ್ದು ಅಷ್ಟೇ ಯಾಕೆ ಹೇಳುತ್ತಿರಾ ಎಂದರು. ಆಗ ಅವರು ವಿಚಾರ ಹೇಳಲು ಬಿಡಿ ಎಂದು ಹೇಳಿದ ಸ್ಪೀಕರ್, ದರ್ಶನ್ ಪುಟ್ಟಣ್ಣಯ್ಯಗೆ ಮಾತು ಮುಂದುವರೆಸುವಂತೆ ಸೂಚಿಸಿದರು.

ಸರ್ವರ್ ಡೌನ್ ಇಲ್ಲದಂತೆ ನೋಡಿಕೊಳ್ಳಬೇಕು. ದೇಶದ ಸಿಲಿಕಾನ್ ಸಿಟಿಯಲ್ಲಿ ನಿಂತು ಮಾತನಾಡುತ್ತಿದ್ದೇವೆ. ಆದರೆ ಹಳ್ಳಿಗಳಲ್ಲಿ ಸರ್ವರ್ ಸಮಸ್ಯೆ ಇದೆ.‌ ನಿಮ್ಮ ಯೋಜನೆಗಳನ್ನು ಯಾವ ರೀತಿ ತಲುಪಿಸುತ್ತೀರಿ. ಸ್ಮಾರ್ಟ್ ಸಿಟಿ ಅಂತ ಹೇಳ್ತೀರಾ. ಸ್ಮಾರ್ಟ್ ವಿಲೇಜ್ ಯಾಕೆ ಮಾಡಲ್ಲ. ಗ್ರಾಮಗಳ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: ರೈತರು ಸಂಕಷ್ಟಕ್ಕೆ ಸಿಲುಕಿರುವ ಕುರಿತ ಚರ್ಚೆಗೆ ಅವಕಾಶ ನೀಡಿ.. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.