ETV Bharat / state

ತುರ್ತು ಪರಿಸ್ಥಿತಿ ಕರಾಳ ದಿನ, ಕಾಂಗ್ರೆಸ್​ನಲ್ಲಿ ಇಂದು ಆಂತರಿಕ ಪ್ರಜಾಪ್ರಭುತ್ವ ಇಲ್ಲ.. ಮಾಜಿ ಸಚಿವ ಸಿ ಟಿ ರವಿ - ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ

ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಕರಾಳ ದಿನ ತೆರೆದಿಟ್ಟರು. ಇದರಿಂದ ಸಂಕಷ್ಟಕ್ಕೆ ಒಳಗಾದ ಸಾವಿರಾರು ಜನ ಇನ್ಯಾವತ್ತೂ ಈ ಘಟನೆ ಮರುಕಳಿಸದಂತೆ ಎಚ್ಚರಿಕೆಯಿಂದ ಇರುವಂತೆ ಅವರು ಆಗಾಗ ನೆನಪಿಸಿಕೊಳ್ತಾರೆ. ತನ್ನ ಹಿತಾಸಕ್ತಿಗೆ ತಕ್ಕಂತೆ ನಡೆಯಬೇಕು ಅನ್ನೋ ಮನೋಭಾವನೆಯಿಂದ ತುರ್ತು ಪರಿಸ್ಥಿತಿ ವಿಧಿಸಿದ್ದರು..

ಸಿ.ಟಿ.ರವಿ
ಸಿ.ಟಿ.ರವಿ
author img

By

Published : Jun 25, 2021, 7:59 PM IST

ಬೆಂಗಳೂರು : ಇಂದು ಬಿಜೆಪಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಿಸಲಾಯ್ತು. ಈ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಕಾಂಗ್ರೆಸ್​ನಲ್ಲಿ ಇಂದಿಗೂ ಪ್ರಜಾಪ್ರಭುತ್ವವಿಲ್ಲ ಎಂದರು.

‘ಸ್ವಾರ್ಥಕ್ಕಾಗಿ ತುರ್ತು ಪರಿಸ್ಥಿತಿ’

ನಗರದ ಫ್ರೀಡಂ ಪಾರ್ಕ್​​ನಲ್ಲಿ ಮಾತನಾಡಿದ ಇವರು, ವ್ಯಕ್ತಿಗತ ಸ್ವಾರ್ಥಕ್ಕೆ ನ್ಯಾಯಾಂಗದ ತೂಗುಗತ್ತಿಯಿಂದ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಲಾಗಿತ್ತು. ತನ್ನನ್ನು ವಿರೋಧಿಸುವ ಎಲ್ಲಾ ನಾಯಕರನ್ನು ಜೈಲಿಗೆ ತಳ್ಳಿದ್ರು. ಮಹಿಳೆಯರು ಮಕ್ಕಳು ಅಂತಾನೂ ನೋಡದೇ ಜೈಲಿಗೆ ಕಳುಹಿಸಿ ಚಿತ್ರಹಿಂಸೆ ಮಾಡಿದ್ರು ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಆರೋಪಿಸಿದ್ದಾರೆ.

ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಕರಾಳ ದಿನ ತೆರೆದಿಟ್ಟರು. ಇದರಿಂದ ಸಂಕಷ್ಟಕ್ಕೆ ಒಳಗಾದ ಸಾವಿರಾರು ಜನ ಇನ್ಯಾವತ್ತೂ ಈ ಘಟನೆ ಮರುಕಳಿಸದಂತೆ ಎಚ್ಚರಿಕೆಯಿಂದ ಇರುವಂತೆ ಅವರು ಆಗಾಗ ನೆನಪಿಸಿಕೊಳ್ತಾರೆ. ತನ್ನ ಹಿತಾಸಕ್ತಿಗೆ ತಕ್ಕಂತೆ ನಡೆಯಬೇಕು ಅನ್ನೋ ಮನೋಭಾವನೆಯಿಂದ ತುರ್ತು ಪರಿಸ್ಥಿತಿ ವಿಧಿಸಿದ್ದರು ಎಂದು ದೂರಿದರು.

ರಮೇಶ್ ರಾಜೀನಾಮೆ, ಸಿಪಿವೈ ಎಕ್ಸಾಂ ವಿಚಾರ

ನಮ್ಮ ರಾಜ್ಯದ ಉಸ್ತುವಾರಿ ಸಚಿವ ಅರುಣ್ ಸಿಂಗ್​ ಪ್ರತಿಯೊಂದು ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಈ ಬಗ್ಗೆ ನಾನೇನು ಮಾತನಾಡಲ್ಲ. ರಮೇಶ್ ಒಂದು ವೇಳೆ ರಾಜೀನಾಮೆ ನೀಡಿದರೆ, ಸ್ವೀಕರಿಸುವುದಕ್ಕೆ ನಾನೇನು ಸಭಾಧ್ಯಕ್ಷನಲ್ಲ ಎಂಬ ಜಾಣ ಉತ್ತರ ನೀಡಿದರು. ಸಿ ಪಿ ಯೋಗೇಶ್ವರ್ ಎಕ್ಸಾಂ ಬರೆದಿದ್ದೇನೆ, ರಿಸಲ್ಟ್​ಗಾಗಿ ಕಾಯುತ್ತಿದ್ದೇವೆ ಅನ್ನೋ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ, ರಾಂಗ್ ಅಡ್ರೆಸ್​ಗೆ ಕೇಳ್ತಿದ್ದೀರಾ ಅಂತ ಪ್ರತಿಕ್ರಿಯೆ ನೀಡಲು ಸಿ ಟಿ ರವಿ ನಿರಾಕರಿಸಿದ್ದಾರೆ.

‘ತುರ್ತು ಪರಿಸ್ಥಿತಿಯನ್ನು ಯಾರೂ ಮರೆಯಬಾರದು’

ನಂತರ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನ ಗಾಳಿಗೆ ತೂರಲಾಗಿತ್ತು. ಯಾರು ಈ ತುರ್ತು ಸ್ಥಿತಿ ಮರೆಯಬಾರದು. ರಾಷ್ಟ್ರಪತಿಯೊಬ್ಬರಿಗೆ ರಾತ್ರಿ ಮಲಗಿದ್ದವರನ್ನ ಎಬ್ಬಿಸಿ ತುರ್ತು ಪರಿಸ್ಥಿತಿಗೆ ಸಹಿ ಹಾಕಿಸಿದ್ರು. ಯುವ ಜನತೆ ಈ ಕರಾಳ ದಿನ ನೆನಪು ಮಾಡಿಕೊಳ್ಳಬೇಕು ಅಂತ ಸುರೇಶ್ ಕುಮಾರ್ ಹೇಳಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.