ಬೆಂಗಳೂರು: ಕೊರೊನಾ ನಿಯಂತ್ರಿಸಲು ಇಲಾಖೆಯು ಪ್ಲಾಸ್ಮಾ ಮೊರೆ ಹೋಗಿತ್ತು. ಆದರೆ, ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಸದ್ಯಕ್ಕಿಲ್ಲ. ಯಾಕೆಂದರೆ, ಯಾವುದೇ ರೋಗಿಗಳ ಪ್ಲಾಸ್ಮಾ ಮ್ಯಾಚ್ ಆಗದ ಹಿನ್ನೆಲೆ ಚಿಕಿತ್ಸೆ ಇನ್ನೂ ಆರಂಭವಾಗಿಲ್ಲ.
ಈಗಾಗಲೇ ಇಬ್ಬರು ಕೊರೊನಾ ಗುಣಮುಖರಿಂದ ಪ್ಲಾಸ್ಮಾ ಪಡೆಯಲಾಗಿದೆ. ಆದರೆ , ಐಸಿಯುನಲ್ಲಿರುವ ಯಾವ ರೋಗಿಗಳಿಗೂ ಈ ಪ್ಲಾಸ್ಮಾ ಮ್ಯಾಚ್ ಆಗುತ್ತಿಲ್ಲ. ನಿನ್ನೆ ಕೂಡಾ ಒಬ್ಬ ಸೋಂಕಿತ ಮುಂದೆ ಬಂದಿದ್ದು, ಅದು ಕೂಡ ವ್ಯರ್ಥವಾಗಿದೆ. ಹೀಗಾಗಿ,ಪ್ಲಾಸ್ಮಾ ಚಿಕಿತ್ಸೆಗೆ ಅನುಮತಿ ದೊರೆತು 15 ದಿನ ಕಳೆದರೂ ಆರಂಭ ಮಾಡಲು ಸಾಧ್ಯವಾಗುತ್ತಿಲ್ಲ.
ರೋಗಿ ಲಭ್ಯವಾಗಿ , ಗ್ರೂಪ್ ಹೊಂದಾಣಿಗೆ ಆಗುವವರೆಗೂ ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಬ್ರೇಕ್ ಬೀಳಲಿದೆ. ಇನ್ನು ಐಸಿಎಂಆರ್ ಆರೋಗ್ಯ ಸಂಶೋಧನಾ ಸಚಿವಾಲಯವು ಕೋವಿಡ್19 ಗಾಗಿ ಪ್ಲಾಸ್ಮಾ ಚಿಕಿತ್ಸೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಕಿಮ್ಸ್- ಹುಬ್ಬಳ್ಳಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನ ಅನುಮೋದಿಸಿದೆ. ಅಲ್ಲಿ ಪ್ರಯೋಗವಾದರೂ ಬೆಂಗಳೂರಿನಿಂದಲೇ ಸಂಪೂರ್ಣ ನಿಯಂತ್ರಣದಲ್ಲಿಇರಲಿದೆ.