ETV Bharat / state

ಕೇಂದ್ರದಿಂದ ಆಕ್ಸಿಜನ್ ಲಭ್ಯವಾಗುವ ವಿಶ್ವಾಸವಿದೆ: ಸಚಿವ ಜಗದೀಶ್ ಶೆಟ್ಟರ್ - ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

80 ಮೆಟ್ರಿಕ್ ಟನ್ ಆಕ್ಸಿಜನ್ ಅ​ನ್ನು ಅರಬ್ ದೇಶದಿಂದ ತರಿಸುತ್ತಿದ್ದಾರೆ. ಅದರಲ್ಲಿ ನಮ್ಮ ರಾಜ್ಯಕ್ಕೂ ಕೂಡ ಸಿಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

minister-jagdish-shettar
ಸಚಿವ ಜಗದೀಶ್ ಶೆಟ್ಟರ್
author img

By

Published : May 5, 2021, 6:51 PM IST

ಬೆಂಗಳೂರು: ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಮ್ಮಲ್ಲೇ ಬಳಕೆ ಆಗುವಂತೆ ಆಗಬೇಕು. ಈ ಬಗ್ಗೆ ಕೇಂದ್ರ ಸಚಿವ ಪಿಯೂಷ್​ ಗೋಯಲ್​​ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಆಕ್ಸಿಜನ್ ಸರಬರಾಜು ಬಗ್ಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಆಕ್ಸಿಜನ್ ನಮಗೆ ನೀಡಬೇಕೆಂದು ಮನವಿ ಮಾಡಲಾಗಿದ್ದು, ಸಂಜೆಯೊಳಗೆ ತಿಳಿಸುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ ಎಂದು ತಿಳಿಸಿದರು.

ಆಕ್ಸಿಜನ್ ಸರಬರಾಜು ಬಗ್ಗೆ ಇಂದು ಸಭೆ ನಡೆಸಲಾಗಿದೆ. ಸಭೆಯಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳು ಭಾಗಿಯಾಗಿದ್ರು. ಅವರಿಗೆ ಹಲವು ಸೂಚನೆ ನೀಡಲಾಗಿದೆ ಎಂದರು. ಆಕ್ಸಿಜನ್ ಅನ್ನು ಬೇರೆ ರಾಜ್ಯಗಳಿಗೆ ಕಳಿಸಬಾರದು, ನಮಗೆ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ನಮಗೆ ಸಿಗುವ ವಿಶ್ವಾಸ ಇದೆ ಎಂದರು.

ಸಚಿವ ಜಗದೀಶ್ ಶೆಟ್ಟರ್

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಬೇಕಿದೆ, ಅದನ್ನು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ನಮ್ಮಲ್ಲಿ ತಯಾರಾಗುವ ಆಕ್ಸಿಜನ್ ನಮಗೆ ಉಳಿದರೆ ನಮ್ಮಲ್ಲಿ ಸಹಾಯವಾಗಲಿದೆ. ಜಿಂದಾಲ್ ಸಂಸ್ಥೆ ಪ್ರೊಡಕ್ಷನ್ ಹೆಚ್ಚು ಮಾಡಿದ್ದಾರೆ. ಸದ್ಯ 800-1000 ಟನ್ ಪ್ರೊಡಕ್ಷನ್ಸ್ ಮಾಡ್ತಿದ್ದಾರೆ. ಜಿಂದಾಲ್ ಜೊತೆ ಮಾತನಾಡಿದ್ದೇನೆ. ಕಬ್ಬಿಣ ಉತ್ಪಾದನೆ ಸ್ಥಗಿತಗೊಳಿಸಿ ಪೂರೈಸಲು ಮನವಿ ಮಾಡಿದ್ದೇನೆ ಎಂದರು.

ಆಕ್ಸಿಜನ್ ಟ್ರಾನ್ಸ್‌ಪೋರ್ಟ್‌ ಸಮಸ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಟ್ಯಾಂಕರ್‌ಗಳ ಮೂಲಕ ಕಳಿಸುವ ಕೆಲಸ ಮಾಡುತ್ತಿದ್ದೇವೆ. ಈಗ ವಾರ್ ಟೈಮ್. ಪ್ರತಿ ದಿನ ಕೆಲಸ ಮಾಡಿ ಸಮಸ್ಯೆ ಸರಿಪಡಿಸಬೇಕು. ನಾಲ್ಕು ದಿನ ಅಂತ ಹೇಳಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಟೈಮ್ ಬಾಂಡ್ ನೀಡದೇ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಅರಬ್ ದೇಶದಿಂದ ಆಕ್ಸಿಜನ್ ಆಮದು: 80 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಅರಬ್ ದೇಶದಿಂದ ತರಿಸುತ್ತಿದ್ದಾರೆ. ಅದರಲ್ಲಿ ನಮ್ಮ ರಾಜ್ಯಕ್ಕೂ ಕೂಡ ಸಿಗಲಿದೆ. ಬೇರೆ ಬೇರೆ ರಾಜ್ಯಗಳಿಂದ ಬರಬೇಕಿರುವ ಆಕ್ಸಿಜನ್ ವಿಚಾರ ಸಂಬಂಧ ಅಲ್ಲಿಂದ ಇಲ್ಲಿಗೆ ತರಲು ಟ್ರಾನ್ಸ್‌ಪೋರ್ಟ್‌ ಚಾರ್ಜ್ ಹೆಚ್ಚಳವಾಗಲಿದೆ. ಹೊಸೂರು ಸೇರಿದಂತೆ ಹಲವು ಭಾಗದಿಂದ ತರಿಸಲಾಗುವುದು. ಮುಂದಿನ ದಿನಗಳಲ್ಲಿ 1,500 ಟನ್ ಆಕ್ಸಿಜನ್ ಲಭ್ಯವಾಗಲಿದೆ ಎಂದು ತಿಳಿಸಿದರು.

ನಮ್ಮಲ್ಲಿ ಆಕ್ಸಿಜನ್ ಪ್ಲಾಂಟ್​ನವರು ಕೊಡಲು ಮುಂದೆ ಬಂದರೆ ನಾವು ಬಳಸಿಕೊಳ್ಳಲು ರೆಡಿ. ಸದ್ಯ ಯಾರೇ ಬರಲಿ ನಾವು ಬಳಸಿಕೊಳ್ಳುತ್ತೇವೆ. ಹಿಂದೆ ಯಾಕೆ ಪ್ರಸ್ತಾವನೆ ಬೇಡ ಅಂದಿದ್ದರೋ ಗೊತ್ತಿಲ್ಲ. ಇದರ ಬಗ್ಗೆ ನಾವು ಮಾಹಿತಿ ಪಡೆಯುತ್ತೇವೆ ಎಂದು ಹೇಳಿದರು.

ಓದಿ: ರೆಮ್ಡಿಸಿವಿರ್ ಚುಚ್ಚುಮದ್ದು ಕೋವಿಡ್​ಗೆ ಜೀವರಕ್ಷಕನಾ?: ಇಲ್ಲಿದೆ ಡಾ. ಅಂಜನಪ್ಪ ಸಲಹೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.