ETV Bharat / state

ಬೆಂಗಳೂರು: ಅನ್ ಲಾಕ್ ಆದರೂ ಬಿಎಂಟಿಸಿ ಬಸ್​​ಗಳು ಖಾಲಿ ಖಾಲಿ - Bangalore Lock Down News

ಬಸ್​ಗಳ ಓಡಾಟವಿದ್ದರೂ ಬಸ್ ನಿಲ್ದಾಣದಲ್ಲಿ ಜನರೇ ಇಲ್ಲ. ನಗರದ ಮೆಜೆಸ್ಟಿಕ್ ಬಿಎಂಟಿಸಿ ಹಾಗೂ ಕೆಎಸ್ಆರ್​ಟಿಸಿ ಬಸ್ ನಿಲ್ದಾಣಗಳು ಜನರಿಲ್ಲದೆ ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ.

ಬಿಎಂಟಿಸಿ ಬಸ್​​ಗಳು ಖಾಲಿ ಖಾಲಿ
ಬಿಎಂಟಿಸಿ ಬಸ್​​ಗಳು ಖಾಲಿ ಖಾಲಿ
author img

By

Published : Jul 22, 2020, 1:16 PM IST

ಬೆಂಗಳೂರು: ನಗರದಲ್ಲಿ ಕೊರೊನಾ ಅಬ್ಬರಕ್ಕೆ ಬ್ರೇಕ್ ಹಾಕಲು ಒಂದು ವಾರ ಕಾಲ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು.‌ ಇದೀಗ ಬೆಂಗಳೂರು ಅನ್ ಲಾಕ್ ಆಗಿದ್ದು ಎಂದಿನಂತೆ ಸಾರಿಗೆ ಸೇವೆ ಲಭ್ಯವಿದೆ.

ಬಿಎಂಟಿಸಿ ಬಸ್​​ಗಳು ಖಾಲಿ ಖಾಲಿ

ಬಸ್​ಗಳ ಓಡಾಟವಿದ್ದರೂ ಬಸ್ ನಿಲ್ದಾಣದಲ್ಲಿ ಜನರೇ ಇಲ್ಲ. ಬಸ್ ಬಂದರೂ ನಗರದಲ್ಲಿ ಬಸ್ ಹತ್ತುವರೇ ಇಲ್ಲದಂತಾಗಿದೆ. ನಗರದ ಮೆಜೆಸ್ಟಿಕ್ ಬಿಎಂಟಿಸಿ ಹಾಗೂ ಕೆಎಸ್ಆರ್​ಟಿಸಿ ಬಸ್ ನಿಲ್ದಾಣಗಳು ಜನರಿಲ್ಲದೆ ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ.

ಬೆಳಗ್ಗೆ 6 ರಿಂದ ಬಿಎಂಟಿಸಿ ಸೇವೆ ಆರಂಭವಾಗಿದ್ದು, ರಾತ್ರಿ 8 ರ ವರೆಗೆ ಇಂದಿನಿಂದ 1500 ಬಸ್​ಗಳು ವಿವಿಧ ಭಾಗಗಳಿಗೆ ಸಂಚರಿಸಲಿವೆ. ಇತ್ತ ಒಂದು ವಾರದಿಂದ ಬೆಂಗಳೂರಿನಿಂದ ಕೆ ಎಸ್ ಆರ್ ಟಿಸಿ ಬಸ್​​ ಸೇವೆ ಸ್ಥಗಿತವಾಗಿತ್ತು. ಇದೀಗ ರಾಜ್ಯದ ವಿವಿಧ ಭಾಗಗಳಿಗೆ ಬಸ್​ಗಳ ಸಂಚಾರ ಆರಂಭವಾಗಿದೆ.

ನಮ್ಮ ಮೆಟ್ರೋ ಸೇವೆಗೆ ನಿರ್ಬಂಧ ಮುಂದುವರೆದಿದ್ದು, ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಹಳಿಗೆ ಇಳಿಯದೇ ಸಂಪೂರ್ಣ ಸಂಚಾರ ಸ್ತಬ್ಧವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.