ETV Bharat / state

ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇವೆ : ಬಸವರಾಜ ಹೊರಟ್ಟಿ - jds Senior member Basavaraja horatti

ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಮೇಲೆ ಅದರ ಮೇಲೆ ಚರ್ಚೆ ಮಾಡಿ ಇತಿಶ್ರೀ ಹಾಡಬೇಕು. ಸಭಾಪತಿಗಳು ತಮ್ಮ ಮನಸ್ಸಿಗೆ ಬಂದಹಾಗೆ ಸದನ ನಡೆಸಬಾರದು. ಹೀಗಾಗಿ ಬಿಜೆಪಿ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿದ್ದೇವೆ. ಕಲಾಪ ಪಟ್ಟಿಯಲ್ಲಿ ಅವಕಾಶ ನೀಡಿಲ್ಲ..

Basavaraja horatti
ಬಸವರಾಜ ಹೊರಟ್ಟಿ
author img

By

Published : Dec 15, 2020, 12:05 PM IST

ಬೆಂಗಳೂರು : ಸದನದಲ್ಲಿ ನಡೆಯುತ್ತಿರುವ ವಿಷಯದಲ್ಲಿ ವಿಷಯಾಧಾರಿತವಾಗಿ ಬೆಂಬಲ ನೀಡಬೇಕಾಗುತ್ತದೆ. ಹಾಗಾಗಿ ಅದರಿಂದ ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇವೆ ಎಂದು ವಿಧಾನಪರಿಷತ್​ನ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದನದ ಹೊರಗಿನ ವಿಚಾರ ಬೇರೆ, ಸದನದ ಒಳಗಿನ ವಿಚಾರ ಬೇರೆ ಎಂದರು. ಜೆಡಿಎಸ್ ವರಿಷ್ಠ ಹೆಚ್‌ ಡಿ ದೇವೇಗೌಡರು ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಒಪ್ಪಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.

ಅವಿಶ್ವಾಸ ನಿರ್ಣಯಕ್ಕೆ ಬೆಂಬಲ : ಸಭಾಪತಿ ಅವರು ಸದನವನ್ನು ಸರಿಯಾಗಿ ನಡೆಸಿಲ್ಲ. ಸಭಾಪತಿಯಾದವರು ಸಂವಿಧಾನದ ರೀತಿ ನೀತಿಯಂತೆ ನಡೆದುಕೊಳ್ಳಬೇಕು. ಬಿಜೆಪಿಯವರು ಕೊಟ್ಟ ಪತ್ರ ಸರಿಯಿಲ್ಲ ಎಂದು ಹೇಳಬಾರದು. ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಮೇಲೆ ಅದರ ಮೇಲೆ ಚರ್ಚೆ ಮಾಡಿ ಇತಿಶ್ರೀ ಹಾಡಬೇಕು. ಸಭಾಪತಿಗಳು ತಮ್ಮ ಮನಸ್ಸಿಗೆ ಬಂದಹಾಗೆ ಸದನ ನಡೆಸಬಾರದು. ಹೀಗಾಗಿ ಬಿಜೆಪಿ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿದ್ದೇವೆ. ಕಲಾಪ ಪಟ್ಟಿಯಲ್ಲಿ ಅವಕಾಶ ನೀಡಿಲ್ಲ ಎಂದರು.

ಓದಿ: ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ.. ನಿನ್ನೆ 22 ಸಾವಿರ ಕೇಸ್​ಗಳು ಪತ್ತೆ

ಇವತ್ತು ಪರಿಷತ್ ಕಲಾಪ ಕರೆದಿದ್ದೇ ತಪ್ಪು. ಸದನದ ನಿಯಮದ ಪ್ರಕಾರ ಕರೆಯುವಂತಿಲ್ಲ. ಸರ್ಕಾರ ಹೇಳಿದಂತೆ ಕಾರ್ಯದರ್ಶಿ ಕೇಳಿದ್ದು ತಪ್ಪು. ಸಂಪುಟದಲ್ಲಿ ಸರ್ಕಾರ ಸಭೆಯನ್ನು ತೀರ್ಮಾನಿಸುತ್ತದೆ. ಸಭೆ ಕರೆದ ಮೇಲೆ ಅದು ಸಭಾಪತಿಗಳಿಗೆ ಸೇರುತ್ತದೆ. ಬಿಎಸಿ ಸಭೆಯಲ್ಲೂ ತೀರ್ಮಾನವಾಗಿದೆ. ಸಭಾಪತಿಗಳು ಕಲಾಪ ಕರೆದಿದ್ದು ತಪ್ಪು ಎಂದು ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.