ಬೆಂಗಳೂರು: ಒಂದೆಡೆ ಸಿಲಿಕಾನ್ ಸಿಟಿ ಜನತೆ ಗಜಾನನನನ್ನು ಬರಮಾಡಿಕೊಂಡ ಸಂತಸದಲ್ಲಿದ್ರೆ, ಇನ್ನೊಂದೆಡೆ ಕಳ್ಳರು ದೇವಾಲಯಕ್ಕೆ ನುಗ್ಗಿ ತಮ್ಮ ಕೈ ಚಳಕ ತೊರಿಸಿರುವ ಘಟನೆ ನಗರದ ಅಮೃತಹಳ್ಳಿಯ ಶ್ರೀರಾಮಪುರ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ನಡೆದಿದೆ.
ಹೌದು, ಕಳೆದ ರಾತ್ರಿ ದೇವಾಲಯದ ಬೀಗ ಮುರಿದಿರುವ ಖದೀಮರು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಂತ್ರ ವಿದ್ಯುತ್ ಬಲ್ಬ್, ಲೈಟ್ಗಳನ್ನು ಪುಡಿ ಮಾಡಿ ದೇವಾಲಯದ ಹುಂಡಿ ಒಡೆದು ಚಿನ್ನ ಮತ್ತು ಬೆಳ್ಳಿ ಆಭರಣಗಳ ಕಳ್ಳತನ ಮಾಡಿದಷ್ಟೇ ಅಲ್ಲದೇ ದೇವಾಲಯದ ಒಳಗಿನ ಸಿಸಿ ಕ್ಯಾಮರಾದ ಡಿವಿಆರ್ ಸಮೇತ ಎಸ್ಕೇಪ್ ಆಗಿದ್ದಾರೆ.
ಇನ್ನು ಈ ಕುರಿತಂತೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.