ETV Bharat / state

ಬ್ಯಾಂಕ್​ನಿಂದ ಹಣ ತರುವಾಗ ಎಚ್ಚರ: ಹಿಂದೆಯೇ ಬಂದು ಧನ ದೋಚಿದ ಖದೀಮ

ವ್ಯಕ್ತಿಯೋರ್ವ ಬ್ಯಾಂಕ್​ನಿಂದ 2 ಲಕ್ಷ 85 ಸಾವಿರ ರೂ. ಹಣ ಡ್ರಾ ಮಾಡಿಕೊಂಡು ಬಂದಿರುವುದನ್ನು ಗಮನಿಸಿದ ಖದೀಮನೋರ್ವ ಹಣ ದೋಚಿ ಪರಾರಿಯಾಗಿದ್ದಾನೆ.

Theft in Bangalore
ಬ್ಯಾಂಕ್​ನಿಂದ ಹಣ ತರುವಾಗ ಎಚ್ಚರ....ಹಿಂದೆಯೇ ಬಂದು ಹಣ ದೋಚಿದ ಖದೀಮ
author img

By

Published : Mar 14, 2020, 5:06 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖದೀಮರ ಗ್ಯಾಂಗ್ ಬ್ಯಾಂಕ್​ನಿಂದ ಹಣ ಡ್ರಾ ಮಾಡುವವರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ದೋಚಿದ ಅನೇಕ ಪ್ರಕರಣಗಳು ನಡೆದಿದ್ದು, ಸದ್ಯ ಇಂತಹದ್ದೇ ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ.

Theft in Bangalore
ಎಫ್ ಐ ಆರ್ ಪ್ರತಿ

ನಾಗರಭಾವಿಯ ನಿವಾಸಿ ಮಹೇಶ್ ಎಂಬಾತ ಫೆಡರಲ್ ಬ್ಯಾಂಕ್​ನಲ್ಲಿ ‌2 ಲಕ್ಷದ 85 ಸಾವಿರ ರೂ. ಹಣ ಡ್ರಾ ಮಾಡಿಕೊಂಡು ತನ್ನ ವಾಹನದ ಡಿಕ್ಕಿಯಲ್ಲಿ ಇಟ್ಟಿದ್ದಾರೆ. ನಂತರ ಲಾಕ್ ಮಾಡಿ‌ ಪಕ್ಕದಲ್ಲಿದ್ದ ಸಬ್ ರಿಜಿಸ್ಟರ್ ಆಫೀಸ್​ಗೆ ಹೋಗಿದ್ದಾರೆ. ಇದನ್ನೇ ಎನ್ಕ್ಯಾಶ್ ಮಾಡಿಕೊಂಡ ಖದೀಮ ನಕಲಿ ಕೀ ಬಳಸಿ ಹಣ ದೋಚಿದ್ದಾನೆ.

ಇನ್ನು ಮಹೇಶ್ ಕೆಲಸ ಮುಗಿಸಿ ಬಂದು ನೋಡಿದಾಗ ಹಣ ಕಳೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.