ETV Bharat / state

ಬೀಗ ಹಾಕಿರುವ ಮನೆಗಳೇ ಇವರಿಗೆ ಟಾರ್ಗೆಟ್​! - ಬೆಂಗಳೂರಿನಲ್ಲಿ ಮೂವರು ಕಳ್ಳರು ಅರೆಸ್ಟ್​ - theft

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಬಾಗಿಲನ್ನು ಹೊಡೆದು ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದಿದ್ದ ಆರೋಪಿಗಳನ್ನು ಕಾಟನ್​ ಪೇಟೆ ಪೊಲೀಸರು ಬಂಧಿಸಿದ್ದಾರೆ.

theft accused arrest
ಆರೋಪಿಗಳ ಬಂಧನ
author img

By

Published : Nov 27, 2020, 12:40 PM IST

Updated : Nov 27, 2020, 1:16 PM IST

ಬೆಂಗಳೂರು: ಅಮ್ಮ ಮತ್ತು ಮಗಳು ಹೊಲಿಗೆ ಯಂತ್ರ ರಿಪೇರಿ ಮಾಡಿಸಿಕೊಂಡು ಬರಲು ಮನೆಗೆ ಬೀಗ ಹಾಕಿ ಅಕ್ಕಿಪೇಟೆಗೆ ಹೋಗಿ ಬರುವಷ್ಟರಲ್ಲಿ ಮನೆ ಬಾಗಿಲು ಹೊಡೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳರನ್ನು ಬಂಧಿಸುವಲ್ಲಿ ಕಾಟನ್ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನರಪತ್ ಸಿಂಗ್, ಕಪೂರ್ ಸಿಂಗ್, ಪ್ರದೀಪ್ ವ್ಯಾಸ್ ಬಂಧಿತರು. ಈ ಆರೋಪಿಗಳನ್ನು ಬಂಧಿಸಲು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್​ ಪಾಟೀಲ್​ ವಿಶೇಷ ತಂಡ ಮಾಡಿ ಬಂಧಿಸಿದ್ದಾರೆ.

ಆರೋಪಿಗಳನ್ನ ವಿಚಾರಣೆ ಮಾಡಿದಾಗ ಇವರು ನಗರದ ಹಲವೆಡೆ ಬಾಗಿಲು ಹಾಕಿದ ಮನೆಗಳನ್ನೇ ಟಾರ್ಗೆಟ್​ ಮಾಡಿಕೊಂಡು ಹಣ ಲೂಟಿ ಮಾಡಿರುವ ವಿಚಾರ ಬಾಯ್ಬಿಟ್ಟಿದ್ದಾರೆ. ಸದ್ಯ ಆರೋಪಿಗಳಿಂದ 187ಗ್ರಾಂ ಚಿನ್ನಾಭರಣ ,7 ಕೆ.ಜಿ 117ಗ್ರಾಂ ಬೆಳ್ಳಿ ಆಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೀಗ ಹಾಕಿರುವ ಮನೆಗಳೇ ಇವರಿಗೆ ಟಾರ್ಗೆಟ್​! - ಬೆಂಗಳೂರಿನಲ್ಲಿ ಮೂವರು ಕಳ್ಳರು ಅರೆಸ್ಟ್​

ಬೆಂಗಳೂರು: ಅಮ್ಮ ಮತ್ತು ಮಗಳು ಹೊಲಿಗೆ ಯಂತ್ರ ರಿಪೇರಿ ಮಾಡಿಸಿಕೊಂಡು ಬರಲು ಮನೆಗೆ ಬೀಗ ಹಾಕಿ ಅಕ್ಕಿಪೇಟೆಗೆ ಹೋಗಿ ಬರುವಷ್ಟರಲ್ಲಿ ಮನೆ ಬಾಗಿಲು ಹೊಡೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳರನ್ನು ಬಂಧಿಸುವಲ್ಲಿ ಕಾಟನ್ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನರಪತ್ ಸಿಂಗ್, ಕಪೂರ್ ಸಿಂಗ್, ಪ್ರದೀಪ್ ವ್ಯಾಸ್ ಬಂಧಿತರು. ಈ ಆರೋಪಿಗಳನ್ನು ಬಂಧಿಸಲು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್​ ಪಾಟೀಲ್​ ವಿಶೇಷ ತಂಡ ಮಾಡಿ ಬಂಧಿಸಿದ್ದಾರೆ.

ಆರೋಪಿಗಳನ್ನ ವಿಚಾರಣೆ ಮಾಡಿದಾಗ ಇವರು ನಗರದ ಹಲವೆಡೆ ಬಾಗಿಲು ಹಾಕಿದ ಮನೆಗಳನ್ನೇ ಟಾರ್ಗೆಟ್​ ಮಾಡಿಕೊಂಡು ಹಣ ಲೂಟಿ ಮಾಡಿರುವ ವಿಚಾರ ಬಾಯ್ಬಿಟ್ಟಿದ್ದಾರೆ. ಸದ್ಯ ಆರೋಪಿಗಳಿಂದ 187ಗ್ರಾಂ ಚಿನ್ನಾಭರಣ ,7 ಕೆ.ಜಿ 117ಗ್ರಾಂ ಬೆಳ್ಳಿ ಆಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Last Updated : Nov 27, 2020, 1:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.