ETV Bharat / state

ಇಡೀ ಕುಟುಂಬವನ್ನೇ ನೋವಲ್ಲಿ ಮುಳುಗಿಸಿದ ಆ ಹೊಸ ಮೊಬೈಲ್​... ನಿಜಕ್ಕೂ ನಡೆದಿದ್ದೇನು?

ಶ್ರೀನಿವಾಸಪುರ ನಿವಾಸಿ ಗಂಗಾಧರ್ ಎಂಬ ಯುವಕ ಇದೇ ತಿಂಗಳು 16 ರಂದು ಹೊಸಕೋಟೆ ಪಟ್ಟಣದ ಸಂಗೀತ ಶೋ ರೂಂನಲ್ಲಿ15 ಸಾವಿರ ಬೆಲೆ ಬಾಳುವ ವಿವೋ ಮೊಬೈಲ್​​​ನನ್ನು ಖರೀದಿ ಮಾಡಿದ್ದ. ಖರೀದಿ ಮಾಡಿದ 24 ಗಂಟೆಯೊಳಗೆ ಆ  ಮೊಬೈಲ್​​​ ಗಂಗಾಧರ್​​ನ ಕನಸುಗಳನ್ನು ನುಚ್ಚು ನೂರು ಮಾಡಿದೆ.

ಮೊಬೈಲ್ ಬ್ಲಾಸ್ಟ್​​​ನಿಂದ ಆಸ್ಪತ್ರೆ ಸೇರಿದ ಯುವಕ
author img

By

Published : Apr 22, 2019, 4:59 PM IST

ಬೆಂಗಳೂರು: ಆ ಯುವಕ ತನ್ನ ಮೂರು ತಂಗಿಯರಿಗೆ ಮದುವೆ ಮಾಡಿ ಜೊತೆಗೆ ತನ್ನ ವಯಸ್ಸಾದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತವಕದಲ್ಲಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದ, ಆದ್ರೆ ಒಂದು ಮೊಬೈಲ್ ಆತನ ಸಂಪೂರ್ಣ ಜೀವನವನ್ನು ನೋವಿನ ದವಡೆಗೆ ನೂಕಿದೆ.

ಶ್ರೀನಿವಾಸಪುರ ನಿವಾಸಿ ಗಂಗಾಧರ್ ಎಂಬ ಯುವಕ ಇದೇ ತಿಂಗಳು 16 ರಂದು ಹೊಸಕೋಟೆ ಪಟ್ಟಣದ ಸಂಗೀತ ಶೋ ರೂಂನಲ್ಲಿ15 ಸಾವಿರ ಬೆಲೆ ಬಾಳುವ ಮೊಬೈಲ್​​​ಖರೀದಿ ಮಾಡಿದ್ದ. 24 ಗಂಟೆಯೊಳಗೆ ಆ ಮೊಬೈಲ್​​​ ಗಂಗಾಧರ್​​ನ ಕನಸುಗಳನ್ನು ನುಚ್ಚು ನೂರು ಮಾಡಿದೆ. ಮೊಬೈಲ್ ಖರೀದಿ ಮಾಡಿ ಮರು ದಿನ ತನ್ನ ಪಾಡಿಗೆ ತಾನು ಬೈಕ್​ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹೊಸಕೋಟೆಯ ತರಬರಹಳ್ಳಿ ಗೇಟ್ ಬಳಿ ಹೊಸ ಮೊಬೈಲ್ ಬ್ಲಾಸ್ಟ್ ಆಗಿದೆ.

ಮೊಬೈಲ್ ಬ್ಲಾಸ್ಟ್​​​ನಿಂದ ಆಸ್ಪತ್ರೆ ಸೇರಿದ ಯುವಕ

ಸ್ಫೋಟಗೊಂಡ ರಭಸಕ್ಕೆ ಗಂಗಾಧರ್ ಕಾಲು ಮುರಿದು ಹೋಗಿದ್ದು, ಜೊತೆಗೆ ತನ್ನ ಬೈಕ್​​ನಲ್ಲಿ ಡ್ರಾಪ್ ನೀಡಿದ್ದ ಮಹಿಳೆಯೂ ಗಾಯಗೊಂಡಿದ್ದಾರೆ ಎಂದು ಗಂಗಾಧರ್ ತಿಳಿಸಿದ್ದಾರೆ.‌ ಸದ್ಯಕ್ಕೆ ಹೊಸಕೋಟೆ ಟೌನ್​​​ನ ಶ್ರೀನಿವಾಸ ನರ್ಸರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗಾಧರ್ ಸ್ಥಿತಿ ಹೇಳಾ ತೀರದಂತಾಗಿದೆ. ಮೂರು ತಂಗಿಯರಿಗೆ ಮದುವೆ ಮಾಡುವ ದೊಡ್ಡ ಜವಾಬ್ದಾರಿ ಸಹ ಗಂಗಾಧರ್ ಹೆಗಲ ಮೇಲಿತ್ತು. ಇದೀಗ ಕಾಲು ಮುರಿದು ಆಸ್ಪತ್ರೆ ಪಾಲಾಗಿರುವ ಗಂಗಾಧರ್ ಕುಟುಂಬ ಬೀದಿಗೆ ಬಿದ್ದಂತಾಗಿದೆ.

ಇನ್ನುಅವರ ಚಿಕಿತ್ಸಾ ವೆಚ್ಚವನ್ನು ಮೊಬೈಲ್ ಕಂಪನಿಯೇ ಭರಿಸುವುದಾಗಿ ಹೇಳಿದ್ದು, ಮುಂದೆ ಅವರಿಗೆ ಪೇಪರ್ ಅಂಗಡಿ ಇಟ್ಟುಕೊಡುವ ಭರವಸೆ ನೀಡಿದೆ. ಅದಲ್ಲದೇ ಆಪರೇಷನ್​​​ಗೂ ಹಣ ನೀಡುವುದಾಗಿ ಹೇಳಿದೆ ಎಂದು ಗಂಗಾಧರ ಅಣ್ಣ ಶ್ರೀನಿವಾಸ್ ಹೇಳಿದ್ದಾರೆ. ಏನೇ ಆಗಲಿ ಗಂಗಾಧರ್ ಮೊದಲಿನ ವ್ಯಕ್ತಿ ಆಗಲು ಸಾಧ್ಯವಿಲ್ಲ ಅವರ ಕುಟುಂಬಕ್ಕೆ ಇನ್ನಷ್ಟು ಪರಿಹಾರದ ಹಸ್ತ ಬೇಕಾಗಿದೆ.

Intro:Slug : ಮೊಬೈಲ್ ಬ್ಲಾಸ್ಟ್ ನಿಂದ ಆಸ್ಪತ್ರೆ ಸೇರಿದ ಯುವಕ : ಕಂಪನಿಯಿಂದ ಚಿಕಿತ್ಸಾ ವೆಚ್ಚ

ಬೆಂಗಳೂರು: ಆ ಯುವಕ ತನ್ನ ಮೂರು ತಂಗಿಯರಿಗೆ ಮದುವೆ ಮಾಡಿ ಜೊತೆಗೆ ತನ್ನ ವಯಸ್ಸಾದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತವಕದಲ್ಲಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದ ಆದ್ರೆ ಒಂದು ಮೊಬೈಲ್ ತನ್ನ ಸಂಪೂರ್ಣ ಜೀವನವನ್ನು ನೋವಿನ ದವಡೆಗೆ ನುಕಿದೆ.

ಶ್ರೀನಿವಾಸಪುರ ನಿವಾಸಿ ಗಂಗಾಧರ್ ಎಂಬ ಯುವಕ ಇದೇ ತಿಂಗಳು 16 ರಂದು ಹೊಸಕೋಟೆ ಪಟ್ಟಣದ ಸಂಗೀತ ಶೋ ರೂಂನಲ್ಲಿ 15 ಸಾವಿರ ಬೆಲೆ ಬಾಳುವ ವಿವೋ ಮೊಬೈಲ್ನ್ನು ಖರೀದಿ ಮಾಡಿದ್ದೇನೆ... ಖರೀದಿ ಮಾಡಿದ 24 ಗಂಟೆಯೊಳಗೆ ಗಂಗಾಧರ್ ನಾ ಕನಸುಗಳನ್ನು ನುಚ್ಚು ನೂರು ಮಾಡಿದೆ... ಮೊಬೈಲ್ ಖರೀದಿ ಮಾಡಿ ಮರು ದಿನ ತನ್ನ ಪಾಡಿಗೆ ತಾನು ಬೈಕ್ ಹೋಗುತ್ತಿದ್ದ ಸಂದರ್ಭದಲ್ಲಿ ಹೊಸಕೋಟೆಯ ತರಬರಹಳ್ಳಿ ಗೇಟ್ ಬಳಿ ಖರೀದಿ ಮಾಡಿದ್ದ ಹೊಸ ವಿವೋ ಮೊಬೈಲ್ ಬ್ಲಾಸ್ಟ್ ಆಗಿದೆ.. ಬ್ಲಾಸ್ಟ್ ಆದ ರಭಸಕ್ಕೆ ಗಂಗಾಧರ್ ಕಾಲು ಮುರಿದು ಹೋಗಿದೆ.. ಜೊತೆಗೆ ತನ್ನ ಬೈಕ್ನಲ್ಲಿ ಡ್ರಾಪ್ ನೀಡಿದ್ದ ಮಹಿಳೆಯ ಗಾಯಗೊಂಡಿದ್ದರು ಎಂದು ಗಂಗಾಧರ್ ತಿಳಿಸಿದರು.‌

ಬೈಟ್ : ಗಂಗಾಧರ್, ಗಾಯಗೊಂಡ ಯುವಕ

ಸದ್ಯಕ್ಕೆ ಹೊಸಕೋಟೆ ಟೌನ್ ನ ಶ್ರೀನಿವಾಸ ನರ್ಸರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗಾಧರ್ ಸ್ಥಿತಿ ಹೇಳಾ ಗೆ ತೀರದಂತಾಗಿದೆ.. ಮೂರು ತಂಗಿಯರಿಗೆ ಮದುವೆ ಮಾಡುವ ದೊಡ್ಡ ಜವಾಬ್ದಾರಿ ಸಹ ಗಂಗಾಧರ್ ಹೆಗಲ ಮೇಲಿತ್ತು.. ಇದೀಗ ಕಾಲು ಮುರಿದು ಆಸ್ಪತ್ರೆ ಪಾಲಾಗಿರುವ ಗಂಗಾಧರ್ ಕುಟುಂಬ ಬೀದಿಗೆ ಬಿದ್ದಂತಾಗಿದೆ.. ಅವ ಚಿಕಿತ್ಸಾ ವೆಚ್ಚವನ್ನು ಮೊಬೈಲ್ ಕಂಪನಿ ಭರಿಸುತ್ತಿದೆ.. ನಮ್ಮ ಜೊತೆ ಇದ್ದು ಅವರನ್ನು ನೋಡಿಕೊಳ್ಳುತ್ತಿದೆ.. ಮುಂದೆ ಅವರಿಗೆ ಪೇಪರ್ ಅಂಗಡಿ ಇಟ್ಟುಕೊಳ್ಳುವ ಭರವಸೆ ನೀಡಿದೆ.. ಅದಲ್ಲದೇ ಆಪರೇಷನ್ ಗೂ ಹಣ ನೀಡುವುದಾಗಿ ಹೇಳಿದೆ ಎಂದು ಗಂಗಾಧರ ಅಣ್ಣ ಶ್ರೀನಿವಾಸ್ ಹೇಳಿದರು..

ಬೈಟ್ : ಶ್ರೀನಿವಾಸ್, ಗಂಗಾಧರ್ ಅಣ್ಣ

ಸದ್ಯಕ್ಕೆ ಮೊಬೈಲ್ ಕಂಪನಿ ಗಂಗಾಧರ್ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದೆ.. ಏನೇ ಆಗಲಿ ಗಂಗಾಧರ್ ಮೊದಲಿನ ವ್ಯಕ್ತಿ ಆಗಲು ಸಾಧ್ಯವಿಲ್ಲ ಅವರ ಕುಟುಂಬಕ್ಕೆ ಇನ್ನಷ್ಟು ಪರಿಹಾರದ ಹಸ್ತ ಬೇಕಾಗಿದೆBody:NoConclusion:No

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.