ಬೆಂಗಳೂರು : ಕೆ.ಆರ್.ಪುರಂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ಗೆ ಸಚಿವ ಬೈರತಿ ಬಸವರಾಜ್ ಹಾಗೂ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಬೈರತಿ ಬಸವರಾಜ್, ಮೊದಲು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಂದ್ರುಗೆ ಲಸಿಕೆ ನೀಡಲಾಗಿದೆ. ಎರಡನೆಯದಾಗಿ ಕೆ.ಆರ್.ಪುರಂನಲ್ಲಿ ಡಾಕ್ಟರ್ ಅಶೋಕ್ ರೆಡ್ಡಿ ವ್ಯಾಕ್ಸಿನ್ ಪಡೆದಿದ್ದಾರೆ ಎಂದರು.
ಲಸಿಕೆಯ ಸುರಕ್ಷಿತವಾಗಿದ್ದು, ಈ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಈ ವ್ಯಾಕ್ಸಿನ್ ಕೊರೊನಾ ಮುಕ್ತ ದೇಶ ಮಾಡಲು ಸಹಕಾರಿಯಾಗಿದೆ. ಒಂದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿ ಮತ್ತು ಪರಿಶ್ರಮದಿಂದ ಈ ಲಸಿಕೆ ಬಂದಿದ್ದು, ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.