ETV Bharat / state

ದೇಶದ ಆರ್ಥಿಕ ಸ್ಥಿತಿ ಕುಸಿತ ಮರೆಮಾಚಲು ತನಿಖಾ ಸಂಸ್ಥೆ ದುರ್ಬಳಕೆ: ಉಗ್ರಪ್ಪ ಕಿಡಿ

ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಇದನ್ನು ಮರೆಮಾಚಲು ಪ್ರತಿಪಕ್ಷದ ನಾಯಕರನ್ನು ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರಿ ವಿಷಯ ಪರಿವರ್ತಿಸುವ ಕಾರ್ಯ ಕೇಂದ್ರದಿಂದ ಆಗುತ್ತಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.

ಮಾಜಿ ಸಂಸದ ಉಗ್ರಪ್ಪ
author img

By

Published : Sep 3, 2019, 4:36 PM IST

Updated : Sep 3, 2019, 4:44 PM IST

ಬೆಂಗಳೂರು: ದೇಶದ ಆರ್ಥಿಕ ಸ್ಥಿತಿ ತೀವ್ರ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಇದನ್ನು ಮರೆಮಾಚಲು ಪ್ರತಿಪಕ್ಷದ ನಾಯಕರನ್ನು ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರಿ ವಿಷಯ ಪರಿವರ್ತಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ದೂರಿದ್ದಾರೆ.

ದೇಶದ ಆರ್ಥಿಕ ಸ್ಥಿತಿ ಕುಸಿತ ಮರೆಮಾಚಲು ತನಿಖಾ ಸಂಸ್ಥೆಯ ಬಳಕೆ: ಉಗ್ರಪ್ಪ ಆಕ್ರೋಶ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದ ಜಿಡಿಪಿ ಶೇ. 5 ಕ್ಕೆ ಕುಸಿದಿದೆ. 1975 ರಿಂದ ಇಂತಹ ಪರಿಸ್ಥಿತಿಯನ್ನು ನೋಡಿಲ್ಲ. ಡಾಲರ್ ಎದುರು ರೂಪಾಯಿ ತೀವ್ರ ಕುಸಿತ ಕಂಡಿದೆ. ಚಿನ್ನ, ಬೆಳ್ಳಿ ಬೆಲೆ ದಾಖಲೆಯ ಏರಿಕೆ ಕಂಡಿದೆ. ಸ್ಟೀಲ್ ಇಂಡಸ್ಟ್ರೀಸ್ ಉತ್ಪಾದನೆ ಕುಂಠಿತವಾಗುತ್ತಿದೆ. ಅಟೋಮೊಬೈಲ್ ಉತ್ಪಾದನೆ ಕಡಿಮೆಯಾಗಿದೆ. ಸರಕುಗಳ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆಯಾಗಿದೆ. ಟೆಕ್ಸ್ ಟೈಲ್ಸ್, ಸಿಮೆಂಟ್, ಬಿಸ್ಕೆಟ್ ಉತ್ಪಾದನೆಯೂ ಕುಂಠಿತವಾಗಿದ್ದು, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ಈ ಸಂದರ್ಭ ಜನರಿಗೆ ಆರ್ಥಿಕ ಹೊರೆ ಇಳಿಸುವ ಕಾರ್ಯ ಮಾಡದೇ ಐಟಿ, ಇಡಿ ಮುಂದಿಟ್ಟು ನಮ್ಮ ನಾಯಕರ ಬಾಯಿ ಮುಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ. ಜನಹಿತ ಆಧರಿಸಿ ನಾವು ಸದನದ ಒಳಗೆ ಹಾಗೂ ಹೊರಗೆ ತೀವ್ರ ಹೋರಾಟಕ್ಕೆ ನಿರ್ಧರಿಸಿದ್ದೇವೆ ಎಂದರು. ಯಾವುದೇ ಉದ್ಯೋಗ ಹೊಸದಾಗಿ ಸೃಷ್ಟಿಯಾಗುತ್ತಿಲ್ಲ. ದೇಶದಲ್ಲಿ ಅರಾಜಕತೆ ಉಂಟಾಗುತ್ತಿದೆ. ಇದಕ್ಕೆಲ್ಲ ಬಿಜೆಪಿಯ ತಪ್ಪು ನಿರ್ಣಯಗಳೇ ಕಾರಣ ಎಂದು ಉಗ್ರಪ್ಪ ಕಿಡಿಕಾರಿದರು.

ಇನ್ನು, ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಈಗಾಗಲೇ ಒಂದೂವರೆ ತಿಂಗಳಾದ್ರೂ ನೆರವು ಬಿಡುಗಡೆಯಾಗಿಲ್ಲ. ತೀವ್ರ ಆರ್ಥಿಕ ಹೊಡೆತದ ಪರಿಣಾಮ ಬಿಡುಗಡೆ ಮಾಡಿಲ್ಲ. ಕೂಡಲೇ ಸರ್ವ ಪಕ್ಷ ನಿಯೋಗದ ಸಭೆ ಕರೆಯಬೇಕು. ಜಿಡಿಪಿ ಕುಸಿತದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಇಬ್ಬರು ಡಿಸಿಎಂಗಳ ಹೇಳಿಕೆಗೆ ತಿರುಗೇಟು ನೀಡಿದ ಉಗ್ರಪ್ಪ, ಹಿಂದೆ ನಿಮ್ಮ ಹಾಲಿ ಸಿಎಂ ಜೈಲಿಗೆ ಹೋಗಿದ್ರಲ್ಲಾ ಅವರು ಉಪ್ಪು ತಿಂದಿದ್ರಾ ? ಅಥವಾ ಸಕ್ಕರೆ ತಿಂದು ಜೈಲಿಗೆ ಹೋಗಿದ್ರಾ ? ಲಕ್ಷ್ಮಣ್​ ಸವದಿ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ ? ಸಕ್ಕರೆ ತಿಂದಿದ್ರಾ ? ಉಪ್ಪು ತಿಂದಿದ್ರಾ ? ಯಡಿಯೂರಪ್ಪ ಚೆಕ್ ರೂಪದಲ್ಲಿ ಹಣ ಪಡೆದಿದ್ದಕ್ಕೆ ಜೈಲಿಗೆ ಹೋಗಿದ್ರು. ಶಾಸಕರು ಸದನದಲ್ಲಿ ಬ್ಲೂ ಫಿಲ್ಮ್​ ನೋಡಿದ್ದಕ್ಕೆ ರಾಜೀನಾಮೆ ಕೊಟ್ಟಿದ್ರು ಎಂದು ಉಗ್ರಪ್ಪ ಟೀಕಿಸಿದರು.

5 ಕೋಟಿ ಹಣ ಇಟ್ಟುಹೋಗಿದ್ದರು ಅಂತ ಶಾಸಕ ಶ್ರೀನಿವಾಸ್ ಗೌಡ ಸದನಲ್ಲಿಯೇ ಆರೋಪ ಮಾಡಿದ್ದರು. ಈ ಬಗ್ಗೆ ಐಟಿಯವರು ಸ್ವಯಂಪ್ರೇರಿತ ದೂರು(ಸುಮೊಟೊ) ಏಕೆ ದಾಖಲಿಸಲಿಲ್ಲ. ಯಡಿಯೂರಪ್ಪ ಫೋನಿನಲ್ಲಿ ಮಾತನಾಡಿದರ ತನಿಖೆಯೆಲ್ಲಿ? ಸದನದಲ್ಲಿಯೇ ಆರೋಪ ಮಾಡಿರುವುದು ಸಾರ್ವಜನಿಕ ದಾಖಲೆ. ಇದರ ಬಗ್ಗೆ ಯಾಕೆ ಇಡಿ, ಐಟಿ ಕೇಸ್ ದಾಖಲಿಸಲಿಲ್ಲ ಎಂದು ಐಟಿ, ಇಡಿ ಅಧಿಕಾರಿಗಳ ವಿರುದ್ಧವೂ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಾವು ಸೇಡಿನ ರಾಜಕಾರಣ ಮಾಡಿದವರಲ್ಲ. ಹಿಂದೆಯೂ ಮಾಡಲಿಲ್ಲ, ಮುಂದೆಯೂ ಮಾಡಲ್ಲ. ತನಿಖಾ ಸಂಸ್ಥೆಗಳನ್ನ ಸ್ವತಂತ್ರವಾಗಿ ಕೆಲಸ ಮಾಡಲು ಬಿಟ್ಟಿದ್ದೆವು. ನಾವು ರಾಜಕೀಯವಾಗಿ ಎಂದೂ ಬಳಸಿಕೊಳ್ಳಲಿಲ್ಲ. ಅಧಿಕಾರದಲ್ಲಿದ್ದಾಗ ಯಾರನ್ನೂ ಜೈಲಿಗೆ ಹಾಕಲಿಲ್ಲ. ಆಡಿಯೋ ಪ್ರಕರಣದಲ್ಲಿ ಬಿಎಸ್​ವೈ ಅವರನ್ನು ಜೈಲಿಗೆ ಹಾಕಿದ್ದರೆ ಏನಾಗುತ್ತಿತ್ತು. ಮಾಧ್ಯಮಗಳು ದ್ವೇಷರಾಜಕಾರಣ ಅಂತ ಹಾಕ್ತಿದ್ರಿ. ಇಂದು ಮೋದಿ, ಅಮಿತ್ ಶಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಕೇಂದ್ರದ ವಿರುದ್ಧ ಉಗ್ರಪ್ಪ ವಾಗ್ದಾಳಿ ನಡೆಸಿದರು.

Intro:newsBody:ದೇಶದ ಆರ್ಥಿಕ ಸ್ಥಿತಿ ಕುಸಿತ ಮರೆಮಾಚಲು ತನಿಖಾ ಸಂಸ್ಥೆ ಮೂಲಕ ಪ್ರತಿಪಕ್ಷದ ನಾಯಕರ ವಿರುದ್ಧ ಕಾರ್ಯಾಚರಣೆ: ಉಗ್ರಪ್ಪ

ಬೆಂಗಳೂರು: ದೇಶದ ಆರ್ಥಿಕ ಸ್ಥಿತಿ ತೀವ್ರ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಇದನ್ನು ಮರೆ ಮಾಚಲು ಪ್ರತಿಪಕ್ಷದ ನಾಯಕರನ್ನು ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರಿ ವಿಷಯ ಪರಿವರ್ತಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಜಿಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೇಶದ ಜಿಡಿಪಿ ಶೇ. 5 ಕ್ಕೆ ಕುಸಿದಿದೆ. 1975 ರಿಂದ ಇಂತ ಪರಿಸ್ಥಿತಿಯನ್ನ ನೋಡಿಲ್ಲ. ಡಾಲರ್ ಎದುರು ರೂಪಾಯಿ ತೀರ್ವ ಕುಸಿತ ಕಂಡಿದೆ. ಚಿನ್ನ, ಬೆಳ್ಳಿ ಬೆಲೆ ದಾಖಲೆಯಲ್ಲಿ ಏರಿಕೆಯಾಗಿದೆ. ಸ್ಟೀಲ್ ಇಂಡಸ್ಟ್ರೀಸ್ ಉತ್ಪಾದನೆ ಕುಂಠಿತವಾಗುತ್ತಿದೆ. ಅಟೋಮೊಬೈಲ್ ಉತ್ಪಾದನೆ ಕಡಿಮೆಯಾಗಿದೆ. ಸರಕುಗಳ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆಯಾಗಿದೆ. ಟೆಕ್ಸ್ ಟೈಲ್ಸ್, ಸಿಮೆಂಟ್, ಬಿಸ್ಕಿಟ್ ಉತ್ಪಾದನೆ ಕುಂಠಿತವಾಗಿದೆ. ಉದ್ಯೋಗಿಗಳು ಕೆಲಸ ಕಳೆದುಕೊಳ್ತಿದ್ದಾರೆ. ಈ ಸಂದರ್ಭ ಜನರಿಗೆ ಆರ್ಥಿಕ ಹೊರೆ ಹೊರೆ ಇಳಿಸುವ ಕಾರ್ಯ ಮಾಡದೇ ಐಟಿ, ಇಡಿ ಮುಂದಿಟ್ಟು ನಮ್ಮ ನಾಯಕರ ಬಾಯಿ ಮುಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ. ಜನಹಿತ ಆಧರಿಸಿ ನಾವು ಸದನದ ಒಳಗೆ ಹಾಗೂಹೊರಗೆ ತೀವ್ರ ಹೋರಾಟಕ್ಕೆ ನಿರ್ಧರಿಸಿದ್ದೇವೆ ಎಂದರು.
ಯಾವುದೇ ಉದ್ಯೋಗ ಹೊಸದಾಗಿ ಸೃಷ್ಠಿಯಾಗುತ್ತಿಲ್ಲ. ದೇಶದಲ್ಲಿ ಅರಾಜಕತೆ ಉಂಟಾಗುತ್ತಿದೆ. ಇದಕ್ಕೆಲ್ಲ ಕಾರಣ ಬಿಜೆಪಿ ತಪ್ಪು ನಿರ್ಣಯಗಳೇ ಕಾರಣ.
ಹಾನಿಯಾಗಿದೆ
ರಾಜ್ಯದಲ್ಲಿ ಬೀಕರ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಈಗಾಗಲೇ ಒಂದೂವರೆ ತಿಂಗಳಾದ್ರೂ ನೆರವು ಬಿಡುಗಡೆಯಾಗಿಲ್ಲ. ತೀವ್ರ ಆರ್ಥಿಕ ಹೊಡೆತದ ಪರಿಣಾಮ ಬಿಡುಗಡೆ ಮಾಡಿಲ್ಲ. ಕೂಡಲೇ ಸರ್ವ ಪಕ್ಷ ನಿಯೋಗದ ಸಭೆ ಕರೆಯಬೇಕು. ಜಿಡಿಪಿ ದರ ಕುಸಿತದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಬೇಕು ಎಂದರು.
ಉಪ್ಪು- ನೀರು
ನಿನ್ನೆ ಇಬ್ಬರು ಡಿಸಿಎಂಗಳು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಅಂತಾ ಹೇಳಿದ್ದಾರೆ. ಹಿಂದೆ ನಿಮ್ಮ ಹಾಲಿ ಸಿಎಂ ಜೈಲಿಗೆ ಹೋಗಿದ್ರಲ್ಲಾ ಅವರು ಉಪ್ಪು ತಿಂದಿದ್ರಾ ? ಅಥವಾ ಸಕ್ಕರೆ ತಿಂದು ಜೈಲಿಗೆ ಹೋಗಿದ್ರಾ ? ಲಕ್ಷ್ಮಣ ಸವದಿ ಹಿಂದೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ ? ಸಕ್ಕರೆ ತಿಂದಿದ್ರಾ ? ಉಪ್ಪು ತಿಂದಿದ್ರಾ ? ಯಡಿಯೂರಪ್ಪ ಚೆಕ್ ರೂಪದಲ್ಲಿ ಹಣ ಪಡೆದಿದ್ದಕ್ಕೆ ಜೈಲಿಗೆ ಹೋದಿದ್ರ. ಸದನದಲ್ಲಿ ಬ್ಲೂ ಫಿಲಂ ನೋಡಿದ್ದಕ್ಕೆ ರಾಜೀನಾಮೆ ಕೊಟ್ಟಿದ್ರು ಎಂದರು.
ಶ್ರೀನಿವಾಸ್ ಗೌಡ ಸದನಲ್ಲಿಯೇ ಆರೋಪ
5 ಕೋಟಿ ಹಣ ಇಟ್ಟುಹೋಗಿದ್ದರು ಅಂತ ಶಾಸಕ ಶ್ರೀನಿವಾಸ್ ಗೌಡ ಸದನಲ್ಲಿಯೇ ಆರೋಪ ಮಾಡಿದ್ದರು.ಬಇದರ ಬಗ್ಗೆ ಐಟಿಯವರು ಸುಮೊಟೊ ಏಕೆ ದಾಖಲಿಸಲಿಲ್ಲ. ಯಡಿಯೂರಪ್ಪ ಫೋನಿನಲ್ಲಿ ಮಾತನಾಡಿದರ ತನಿಖೆಯೆಲ್ಲಿ? ಸದನದಲ್ಲಿಯೇ ಆರೋಪ ಮಾಡಿರುವುದು ಸಾರ್ವಜನಿಕ ದಾಖಲೆ. ಇದರ ಬಗ್ಗೆ ಯಾಕೆ ಇಡಿ, ಐಟಿ ಕೇಸ್ ದಾಖಲಿಸಲಿಲ್ಲ ಎಂದು ಐಟಿ, ಇಡಿ ಅಧಿಕಾರಿಗಳ ವಿರುದ್ಧವೂ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸೇಡಿನ ರಾಜಕೀಯ ಮಾಡಿಲ್ಲ
ನಾವು ಸೇಡಿನ ರಾಜಕಾರಣ ಮಾಡಿದವರಲ್ಲ. ಹಿಂದೆಯೂ ಮಾಡಲಿಲ್ಲ, ಮುಂದೆಯೂ ಮಾಡಲ್ಲ. ತನಿಖಾ ಸಂಸ್ಥೆಗಳನ್ನ ಫ್ರೀಯಾಗಿ ಬಿಟ್ಟಿದ್ದೆವು. ನಾವು ರಾಜಕೀಯವಾಗಿ ಎಂದೂ ಬಳಸಿಕೊಳ್ಳಲಿಲ್ಲ. ಅಧಿಕಾರದಲ್ಲಿದ್ದೇ ಅಂತ ಯಾರನ್ನೂ ಜೈಲಿಗೆ ಹಾಕಲಿಲ್ಲ. ಆಡಿಯೋ ಪ್ರಕರಣದಲ್ಲಿ ಜೈಲಿಗೆ ಹಾಕಿದ್ದರೆ ಏನಾಗುತ್ತಿತ್ತು. ಮಾಧ್ಯಮಗಳು ದ್ವೇಷರಾಜಕಾರಣ ಅಂತ ಹಾಕ್ತಿದ್ರಿ. ಇಂದು ಮೋದಿ, ಅಮಿತ್ ಷಾ ದ್ವೇಶದ ರಾಜಕಾರಣ ಮಾಡುತ್ತಿದ್ದಾರೆ. ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದರು.Conclusion:news
Last Updated : Sep 3, 2019, 4:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.