ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮತ್ತೆ ಶುರುವಾಗಿದೆ.
ಕಾಡುಗೊಂಡನಹಳ್ಳಿಯಲ್ಲಿ ಲಾಂಗು-ಮಚ್ಚು ಹಿಡಿದು ಆಟೋದಲ್ಲಿ ಬಂದ ಗ್ಯಾಂಗ್ ಅಡ್ಡಾದಿಡ್ಡಿ ಓಡಿಸಿ ಮೊದಲು ವೃದ್ಧರಿಬ್ಬರ ಮೇಲೆ ಐವರು ಪುಂಡರು ದಾಳಿ ಮಾಡಿದ್ದಾರೆ. ಇದನ್ನು ನೋಡಿದ ಅಲ್ಲಿನ ಸ್ಥಳೀಯ ಯುವಕನೊಬ್ಬ ಪ್ರಶ್ನೆ ಮಾಡಿದ್ದಾನೆ. ಪ್ರಶ್ನೆ ಮಾಡಿದ ತಕ್ಷಣ ಯುವಕನ ತಲೆಗೆ ಕಿರಾತಕರ ಗ್ಯಾಂಗ್ ಮಾರಾಣಾಂತಿಕ ಹಲ್ಲೆ ನಡೆಸಿ, ಬಳಿಕ ಅಲ್ಲೇ ಇದ್ದ ಆಟೋ, ಬೈಕ್ ಸವಾರರಿಗೆ ಬೆದರಿಸಿದ್ದಾರೆ.
ಇಬ್ಬರು ಪುಂಡರನ್ನು ಹಿಡಿದು ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದಾರೆ. ಆಟೋದಲ್ಲಿ ಲಾಂಗ್ ಹಿಡಿದು ಸಂಚಾರ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಸದ್ಯ ಕಾಡುಗೊಂಡನಹಳ್ಳಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.