ETV Bharat / state

ಬೆಂಗಳೂರು: ಗೆಳೆಯನನ್ನು ಭೇಟಿಯಾಗಲು ದುಬೈನಿಂದ ಬಂದ ಏರ್​ಲೈನ್ಸ್​ ಗಗನಸಖಿ ಅನುಮಾನಾಸ್ಪದ ಸಾವು - ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಏರ್​ಲೈನ್ಸ್​ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ತಡರಾತ್ರಿ ಕೋರಮಂಗಲದ 8ನೇ ಬ್ಲಾಕ್​ ಅಪಾರ್ಟ್ಮೆಂಟ್ ಮೇಲಿನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

bengaluru
ಗಗನಸಖಿ ಸಾವು
author img

By

Published : Mar 11, 2023, 12:21 PM IST

Updated : Mar 11, 2023, 2:00 PM IST

ಗಗನಸಖಿ ಸಾವಿನ ಕುರಿತು ಮಾಹಿತಿ ನೀಡಿದ ಡಿಸಿಪಿ ಸಿಕೆ ಬಾಬಾ

ಬೆಂಗಳೂರು : ಗೆಳೆಯನನ್ನು ಭೇಟಿಯಾಗಲು ದುಬೈನಿಂದ ಬಂದಿದ್ದ ಯುವತಿಯೊಬ್ಬಳು ಅಪಾರ್ಟ್ಮೆಂಟ್ ಮೇಲಿನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಡರಾತ್ರಿ ಕೋರಮಂಗಲದ 8ನೇ ಬ್ಲಾಕ್​ನಲ್ಲಿ ನಡೆದಿದೆ. ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್​ನ ನಾಲ್ಕನೇ ಮಹಡಿಯಿಂದ ಬಿದ್ದು ಅರ್ಚನಾ ಧಿಮಾನ್ (28) ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶ ಮೂಲದ ಅರ್ಚನಾ ಧಿಮಾನ್ ಪ್ರತಿಷ್ಠಿತ ಏರ್​ಲೈನ್ಸ್​ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ಆದೇಶ್​ನನ್ನು ಭೇಟಿಯಾಗಲು ನಿನ್ನೆ ದುಬೈನಿಂದ ಬಂದಿದ್ದರು. ಕೇರಳ ಮೂಲದ ಆದೇಶ್ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ 12 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್​ನ ನಾಲ್ಕನೇ ಮಹಡಿಯಿಂದ ಬಿದ್ದ ಪರಿಣಾಮ ಅರ್ಚನಾ ಸಾವನ್ನಪ್ಪಿದ್ದಾರೆ.

ಕೆಲವು ವರ್ಷಗಳಿಂದ ಅರ್ಚನಾ ಹಾಗೂ ಆದೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಶುಕ್ರವಾರ ಬೆಂಗಳೂರಿಗೆ ಗೆಳೆಯನ್ನ ಭೇಟಿಯಾಗಲು ಬಂದಾಗ ಘಟನೆ ನಡೆದಿದೆ. ತಡರಾತ್ರಿ ಇಬ್ಬರ ನಡುವೆ ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಅಪಾರ್ಟ್ಮೆಂಟ್ ಸೇರಿದಂತೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ಗಂಡನಿಂದ ಕೊಲೆ ಶಂಕೆ

ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮುಖಿ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಕಳೆದ ಫೆಬ್ರವರಿ 7 ರಂದು ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಪತ್ನಿಯನ್ನು ಗಂಡನೇ‌ ಕೊಲೆ‌ ಮಾಡಿರುವ ಅನುಮಾನ ವ್ಯಕ್ತವಾಗಿತ್ತು. ಕೋಲ್ಕತ್ತಾ ಮೂಲದ ಮೊನಿಷ್ ಕತೂಮ್ ಸಾವನ್ನಪ್ಪಿದ ಮಹಿಳೆ. ಅವರ ಪತಿ ಶೇಖ್ ಮಜಿದ್ ತಲೆಮರೆಸಿಕೊಂಡಿದ್ದ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ : ನವ ವಿವಾಹಿತೆ ಅನುಮಾನಾಸ್ಪದ ಸಾವು.. ಗಂಡನ ವಿರುದ್ಧ ಕೊಲೆ ಆರೋಪ

ನವ ವಿವಾಹಿತೆ ಅನುಮಾನಾಸ್ಪದ ಸಾವು: ದೊಡ್ಡಬಳ್ಳಾಪುರ ತಾಲೂಕಿನ ಅಂಚಾರ್ಲಹಳ್ಳಿಯಲ್ಲಿ ಕಳೆದ ಫೆಬ್ರವರಿ 14 ರಂದು ನವ ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಸುಮಾರು 22 ವರ್ಷದ ತನುಶ್ರೀ ಮೃತ ಮಹಿಳೆ. ಈಕೆಯ ಸಾವಿನ ಸುದ್ದಿಯನ್ನು ತವರು ಮನೆಗೆ ತಿಳಿಸದೇ ಗಂಡನ ಮನೆಯವರು ಪರಾರಿಯಾಗಿದ್ದರು.

ಇದನ್ನೂ ಓದಿ : ಬೆಳಗಾವಿಯಲ್ಲಿ ಎಫ್‌ಡಿಎ ಅನುಮಾನಾಸ್ಪದ ಸಾವು.. ಆತ್ಮಹತ್ಯೆ ಶಂಕೆ

ಎಫ್‌ಡಿಎ ಅನುಮಾನಾಸ್ಪದ ಸಾವು: ಕೆಎಎಸ್ ಅಧಿಕಾರಿಯೊಬ್ಬರ ಪತಿಯ ಮೃತದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬೆಳಗಾವಿಯ ಆಜಮ್ ನಗರದಲ್ಲಿ ಕಳೆದ ತಿಂಗಳು ಪತ್ತೆಯಾಗಿತ್ತು. ಎಫ್‌ಡಿಎ ಅಧಿಕಾರಿ ಜಾಫರ್ ಫೀರ್ಜಾದೆ (39) ಎಂಬುವರು ಮೃತಪಟ್ಟಿದ್ದರು. ಜಾಫರ್ ಫೀರ್ಜಾದೆ ಪತ್ನಿಯು ಕೆಎಎಸ್ ಅಧಿಕಾರಿ ಆಗಿದ್ದು, ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಘಟನೆ ನಡೆದಿತ್ತು.

ಇದನ್ನೂ ಓದಿ : 2018ರಲ್ಲಿ ಗುಹೆಯಿಂದ ಪಾರಾಗಿದ್ದ ಫುಟ್ಬಾಲ್ ಆಟಗಾರ ಅನುಮಾನಾಸ್ಪದ ಸಾವು: ಲೈವ್​ನಲ್ಲಿ ಮಗನ ಅಂತ್ಯಕ್ರಿಯೆ ವೀಕ್ಷಿಸಿದ ಪೋಷಕರು

Last Updated : Mar 11, 2023, 2:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.