ETV Bharat / state

ಅನುದಾನದ ಕೊರತೆ: 2021-22 ರಲ್ಲಿ ಹೊಸ ರಸ್ತೆಗಳ ನಿರ್ಮಾಣದಲ್ಲಿ ಶೂನ್ಯ ಪ್ರಗತಿ ಸಾಧಿಸಿದ ರಾಜ್ಯ - ಹೊಸ ರಸ್ತೆ‌ ಯೋಜನೆ ಕೈಗೊಳ್ಳದ ಸರ್ಕಾರ

2021-22 ಸಾಲಿನಲ್ಲಿ ರಾಜ್ಯ ಸರ್ಕಾರ ಏಕೈಕ ಹೊಸ ರಸ್ತೆ ಯೋಜನೆಯನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಸಂಪನ್ಮೂಲ ಕ್ರೋಢೀಕರಣ ಬರಿದಾದ ಕಾರಣ ಕೇವಲ ಚಾಲ್ತಿಯಲ್ಲಿರುವ ಕಾಮಗಾರಿಗಳಿಗಷ್ಟೇ ಸೀಮಿತವಾಯಿತು.

road
road
author img

By

Published : Apr 10, 2022, 7:05 AM IST

ಬೆಂಗಳೂರು: ಲಾಕ್‌ಡೌನ್​ನಿಂದಾಗಿ ರಾಜ್ಯದ ಆದಾಯ ಬಹುತೇಕ ಮಂಡಿಯೂರಿರುವುದು ಗೊತ್ತಿರುವ ವಿಚಾರ. ಆರ್ಥಿಕ ಸಂಕಷ್ಟದ ಬರೆ 2021-22ರಲ್ಲಿ ಸರ್ಕಾರವನ್ನು ತೀವ್ರವಾಗಿ ಕಾಡಿದೆ. ಪ್ರಮುಖ ಮೂಲ ಸೌಕರ್ಯವಾದ ಹೊಸ ರಸ್ತೆ ಯೋಜನೆಗಳನ್ನೇ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೋವಿಡ್-19 ವೈರಸ್​ ಲಾಕ್​ಡೌನ್ ರಾಜ್ಯದ ಬೊಕ್ಕಸದ ಮೇಲೆ ಭಾರಿ ಗದಾ ಪ್ರಹಾರವನ್ನೇ ಮಾಡಿದೆ. ಸಂಪನ್ಮೂಲ ಕ್ರೋಢೀಕರಣವೇ ಬರಿದಾದ ಕಾರಣ ರಾಜ್ಯದ ಆದಾಯ ಮೂಲವೇ ಬಣಗುಡುವಂತಾಗಿತ್ತು. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದಂತಾಯಿತು.

ಬಜೆಟ್ ಅನುಷ್ಠಾನಕ್ಕೆ ಅನುದಾನದ ಕೊರತೆ ಎದುರಾಗಿತ್ತು.‌ ಅದರಲ್ಲೂ 2021-22ರಲ್ಲಿ ಆರ್ಥಿಕ ಚೇತರಿಕೆ ಕಂಡರೂ ಬೊಕ್ಕಸ ಮಾತ್ರ ಬಹುತೇಕ ಸೊರಗಿ ಹೋಗಿತ್ತು. ಅದೇ ಹಿನ್ನೆಲೆ 2021-22ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದ ಪರಿಸ್ಥಿತಿ ಎದುರಾಯಿತು.‌ ಆದಾಯ ಕೊರತೆಯ ತೀವ್ರತೆ ಎಷ್ಟರ ಮಟ್ಟಿಗೆ ಇತ್ತು ಅಂದರೆ 2021-22 ಸಾಲಿನಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ.

roads
ರಸ್ತೆ ಯೋಜನೆ ಕುರಿತು ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ

ಹೊಸ ರಸ್ತೆ‌ ಯೋಜನೆ ಕೈಗೊಳ್ಳದ ಸರ್ಕಾರ: 2021-22 ಸಾಲಿನಲ್ಲಿ ರಾಜ್ಯ ಸರ್ಕಾರ ಏಕೈಕ ಹೊಸ ರಸ್ತೆ ಯೋಜನೆಯನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಆದಾಯ ಕೊರತೆಯ ಭಾರ ಎಷ್ಟಿತ್ತೆಂದರೆ ಸರ್ಕಾರಕ್ಕೆ ಹೊಸ ರಸ್ತೆಗಳನ್ನು ಸೇರ್ಪಡೆಗೊಳಿಸಲು ಸಾಧ್ಯವಾಗಲೇ ಇಲ್ಲ. ಕೇವಲ ಚಾಲ್ತಿಯಲ್ಲಿರುವ ಕಾಮಗಾರಿಗಳಿಗಷ್ಟೇ ಸೀಮಿತವಾಯಿತು.

ಲೋಕೋಪಯೋಗಿ ಇಲಾಖೆ ನೀಡಿದ ಮಾಹಿತಿ ಪ್ರಕಾರ, 2021-22 ಆರ್ಥಿಕ ವರ್ಷದಲ್ಲಿ ಕರ್ನಾಟಕ ಹೊಸ ರಸ್ತೆಗಳ ನಿರ್ಮಾಣದಲ್ಲಿ ಶೂನ್ಯ ಪ್ರಗತಿ ಸಾಧಿಸಿದೆ. ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಾಧ್ಯವಾಗಿಲ್ಲ. 2021 ಮಾರ್ಚ್ ಅಂತ್ಯಕ್ಕೆ ರಾಜ್ಯದ ರಾಷ್ಟ್ರೀಯ ಹೆದ್ದಾರಿ 7,458 ಕಿ.ಮೀ.‌ ಹೊಂದಿತ್ತು. 2022 ಮಾರ್ಚ್ ಅಂತ್ಯದವರೆಗೆ ಯಾವುದೇ ಹೊಸ ರಾಷ್ಟ್ರೀಯ ಹೆದ್ದಾರಿ ಸೇರ್ಪಡೆಯಾಗಿಲ್ಲ.

ಇತ್ತ ರಾಜ್ಯ ಹೆದ್ದಾರಿಯ ನಿರ್ಮಾಣದಲ್ಲೂ ಶೂನ್ಯ ಪ್ರಗತಿ ಸಾಧಿಸಿದೆ. ಹೊಸ ರಾಜ್ಯ ಹೆದ್ದಾರಿ 2020-21ರಲ್ಲಿ 27,811 ಕಿ.ಮೀ. ಹೊಂದಿತ್ತು. 2021-22ರಲ್ಲಿ ಹೊಸ ರಾಜ್ಯ ಹೆದ್ದಾರಿಯೂ ಸೆರ್ಪಡೆಯಾಗಿಲ್ಲ. ಪ್ರಮುಖ ಜಿಲ್ಲಾ ರಸ್ತೆಗಳದ್ದೂ ಅದೇ ಗತಿ. 2020-21 ಅಂತ್ಯಕ್ಕೆ 56,130 ಕಿ.ಮೀ. ಹೊಂದಿದ್ದ ಪ್ರಮುಖ ಜಿಲ್ಲಾ ರಸ್ತೆಗಳಿಗೆ 2021-22 ಸಾಲಿನಲ್ಲೂ ಯಾವುದೇ ಹೊಸ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. 2021-22 ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಂದಾಜು 16 ಕೋಟಿ ರೂ.ನಿರ್ವಹಣೆಗಾಗಿ ವೆಚ್ಚ ಮಾಡಲಾಗಿದೆ.

ರಾಜ್ಯ ಹೆದ್ದಾರಿಗೆ 430 ಕೋಟಿ ರೂ.ನಿರ್ವಹಣಾ ವೆಚ್ಚವಾಗಿದ್ದರೆ, ಪ್ರಮುಖ ಜಿಲ್ಲಾ ರಸ್ತೆಗಳ ನಿರ್ವಹಣಾ ವೆಚ್ಚದ ಮೊತ್ತ 265 ಕೋಟಿ ರೂ. ಆಗಿದೆ. ಇತ್ತ ರಾಜ್ಯ ಹೆದ್ದಾರಿಗಳಲ್ಲಿ 2021-22ರಲ್ಲಿ ಕೇವಲ 21 ಹೊಸ ಸೇತುವೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಪ್ರಮುಖ ಜಿಲ್ಲಾ ರಸ್ತೆಗಳಲ್ಲಿ 164 ಹೊಸ ಸೇತುವೆಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಂಕಿ-ಅಂಶ ನೀಡಿದೆ.

2020-21ರ ರಸ್ತೆ ನಿರ್ಮಾಣದ ಸ್ಥಿತಿಗತಿ: 2020-21ರಲ್ಲಿ ಕೋವಿಡ್ ಮಹಾಮಾರಿ ಹಿನ್ನೆಲೆ ಸುದೀರ್ಘ ಲಾಕ್​ಡೌನ್ ಇದ್ದರೂ, ರಾಜ್ಯ ಹೊಸ ರಸ್ತೆ ನಿರ್ಮಾಣದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿತ್ತು. 2020-21ರಲ್ಲಿ 5,160 ಕಿ.ಮೀ. ಹೊಸ ರಾಜ್ಯ ಹೆದ್ದಾರಿಯನ್ನು ಸೇರ್ಪಡೆಗೊಳಿಸಲಾಗಿತ್ತು. ಅದೇ ರೀತಿ 7,769 ಕಿ.ಮೀ. ಪ್ರಮುಖ ಜಿಲ್ಲಾ ರಸ್ತೆಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಆದರೆ, 2021-22 ಆರ್ಥಿಕ ವರ್ಷದಲ್ಲಿ ರಾಜ್ಯ ಒಂದೇ ಒಂದು ಹೊಸ ರಸ್ತೆಗಳನ್ನು ಸೇರ್ಪಡೆಗೊಳಿಸಿಲ್ಲ.

2020-22 ಸಾಲಿನಲ್ಲಿ ರಾಜ್ಯ ಹೆದ್ದಾರಿ ನಿರ್ವಹಣೆಗೆ ಅಂದಾಜು 225 ಕೋಟಿ ರೂಪಾಯಿ ಆಗಿದ್ದರೆ, ಪ್ರಮುಖ ಜಿಲ್ಲಾ ರಸ್ತೆಗಳ ನಿರ್ವಹಣೆಗಾಗಿ ಅಂದಾಜು 284 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

ಇದನ್ನೂ ಓದಿ; ಆಂಗ್ಲರ ಇಂಗ್ಲಿಷ್ ಬೇಕು, ಹಿಂದಿ ಬೇಡ ಅಂದ್ರೆ ಹೇಗೆ?.. ಅಮಿತ್ ಶಾ ಹೇಳಿರೋದ್ರಲ್ಲಿ ತಪ್ಪೇನಿಲ್ಲ.. ಸಚಿವ ಪ್ರಲ್ಹಾದ್ ಜೋಷಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.