ETV Bharat / state

ರಾಜ್ಯದ ಆರ್ಥಿಕತೆ ದಿವಾಳಿಯತ್ತ ಹೋಗ್ತಿದೆ, ಸರ್ಕಾರದಿಂದ ಸೂಕ್ತ ಉತ್ತರ ಸಿಕ್ಕಿಲ್ಲ: ಸಿದ್ದರಾಮಯ್ಯ - state is going towards the economic bankruptcy

ಈ ಬಾರಿ ಸಂಪೂರ್ಣವಾಗಿ ಬಜೆಟ್ ಮೇಲೆ ಚರ್ಚೆ ಆಗಿಲ್ಲ. 24 ಪುಟಗಳನ್ನು ಮಾತ್ರ ಓದಿದ್ದಾರೆ. ನಾವು ಎತ್ತಿರುವ ಪ್ರಶ್ನೆಗೆ ಅವರು ಸರಿಯಾದ ಉತ್ತರ ನೀಡಿಲ್ಲ. ರಾಜ್ಯ ಬೇರೆ ಆರ್ಥಿಕ ದಿವಾಳಿಯತ್ತ ಹೋಗ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Opposition leader Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Mar 24, 2021, 7:44 PM IST

ಬೆಂಗಳೂರು: ರಾಜ್ಯ ಆರ್ಥಿಕ ಪರಿಸ್ಥಿತಿ ದಿವಾಳಿಯತ್ತ ಹೋಗ್ತಿದೆ, ಅದಕ್ಕೆ ಸರ್ಕಾರದಿಂದ ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ ಅವರು, ಇನ್ನೂ ಕೂಡ ಸಂಪೂರ್ಣ ಬಜೆಟ್ ಮೇಲೆ ಚರ್ಚೆ ಆಗಿಲ್ಲ. 24 ಪುಟಗಳನ್ನು ಓದಿದ್ದಾರೆ. ಅದು ಹೇಗ್ ಇತ್ತು ಅಂದ್ರೆ ಸಂತೆನಲ್ಲಿ ಮಾನ ಹೋಗುವ ವ್ಯಕ್ತಿ ಇರುತ್ತಾರಲ್ಲ , ಆಗ ಸೊಪ್ಪು ಸೆದೆಯಿಂದ ಮಾನ ಮುಚ್ಚಿಕೊಂಡ ಹಾಗೆ ಇದೆ. ನಾವು ಎತ್ತಿರುವ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ ಎಂದು ಟೀಕಿಸಿದರು.

ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ

ಈ ವರ್ಷ ರೆವಿನ್ಯೂ ಡಿಫಿಸಿಟ್ (ವಿತ್ತೀಯ ಕೊರತೆ) 19,485 ಕೋಟಿ ಹೆಚ್ಚಾಗುತ್ತೆ. 143 ಕೋಟಿ ರೆವಿನ್ಯೂ ಸರ್ಪಲ್ಸ್ ಹೆಚ್ಚಾಗುತ್ತೆ ಎಂದಿದ್ರು. 20 ಸಾವಿರ ಕೋಟಿ ರೆವಿನ್ಯೂ ಡಿಫಿಸಿಟ್ ಈ ವರ್ಷ ಆಗುತ್ತೆ. ಮುಂದಿನ ವರ್ಷ 20 ಸಾವಿರ ಕೋಟಿಗಿಂತ ಹೆಚ್ಚಾಗುತ್ತೆ ಎಂದರು. ಅವರೇ ಹೇಳಿರುವ ಪ್ರಕಾರ, ರೆವಿನ್ಯೂ ಡಿಫಿಸಿಟ್ ಪ್ರತಿ ವರ್ಷ ಹೆಚ್ಚಾಗುತ್ತಾ ಹೋಗುತ್ತೆ. ಆದಾಯಕ್ಕಿಂತ ಖರ್ಚು ಹೆಚ್ಚಾದ್ರೆ ರೆವಿನ್ಯೂ ಡಿಫಿಸಿಟ್ ಎನ್ನುತ್ತಾರೆ.

ರೆವಿನ್ಯೂ ಡಿಫಿಸಿಟ್ ಸಾಲ ಮಾಡಿ ಅದನ್ನ ತುಂಬಿಸಬೇಕು. ಈ ವರ್ಷ 70 ಸಾವಿರ ಕೋಟಿ ಸಾಲ ತಗೊಂಡಿದ್ದಾರೆ. ಅದರಲ್ಲಿ 20 ಸಾವಿರ ಕೋಟಿ ಎಲ್ಲಿ ಹೋಯ್ತು. ರಾಜ್ಯ ದಿವಾಳಿ ಆಗಲ್ವಾ? ಅವರು ಹೇಳಿರುವುದು ಬರ್ಕೊಬೇಡಿ, ನಾನು ಹೇಳಿರುವುದು ಸತ್ಯ. ನಾವು ಮೀಡಿಯಮ್ ಫಿಸಿಕಲ್ ನೋಡಿಕೊಂಡು ಹೇಳುತ್ತಿರುವುದು. ರಾಜ್ಯ ಇವರ ಕೈನಲ್ಲಿ ಇದ್ರೆ ಆರ್ಥಿಕವಾಗಿ ಸರಿ ಮಾಡುವುದಕ್ಕೆ ಆಗುತ್ತಾ? 13 ಬಜೆಟ್​ನಲ್ಲಿ ನಾನು ಫಿಸಿಕಲ್ ಡಿಫಿಸಿಟ್ ಅನ್ನು ನಿರ್ವಹಣೆ ಮಾಡಿದ್ದೆ. ಕಮಿಟೆಡ್ ಎಕ್ಸ್​ಪೆಂಡಿಚರ್ ಯಾಕೆ ಹೆಚ್ಚಾಯ್ತು ಅನ್ನುವುದಕ್ಕೆ ಎಲೆಕ್ಟ್ರಿಸಿಟಿ ಸಬ್ಸಿಡಿ, ಇನ್​ಪುಟ್ ನೀಡುವುದು, ಕ್ಷೀರಧಾರೆಯಿಂದ ಆಗೋಯ್ತು ಅಂತಾನೆ. ನಾನು ಇದ್ದಾಗ ಹೇಗ್ ಮಾಡ್ದೆ ಹಾಗಾದ್ರೆ. ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು 24 ಸಾವಿರ ಕೋಟಿ ಬರಬೇಕಿತ್ತು. ಅದರಲ್ಲಿ 4000 ಕೋಟಿ ಬಂದಿಲ್ಲ. ಯಾವತ್ತಾದ್ರು ಚೀಫ್ ಮಿನಿಸ್ಟರ್ ನಮಗೆ ಬೇಕಾದ ಪಾಲು ಕೊಡಿ ಎಂದು ಗಟ್ಟಿಯಾಗಿ ಕೇಳಿದ್ದಾರಾ? ರಾಜ್ಯದಲ್ಲಿ ಬಿಜೆಪಿಯಿಂದ ಆಯ್ಕೆಯಾದ 25 ಎಂ ಪಿಗಳು ಕೇಳಿದ್ದಾರಾ? 5300 ಕೋಟಿ ಕೊರೊನಾಗೆ ಖರ್ಚು ಮಾಡಿರುವುದು. ಎಲ್ಲದಕ್ಕೂ ಕೊರೊನಾ ತೋರಿಸುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಓದಿ:ಸುಧಾಕರ್ ಹೇಳಿಕೆಗೆ ಪ್ರತಿಪಕ್ಷ, ಆಡಳಿತ ಪಕ್ಷ ಸದಸ್ಯರ ವಿರೋಧ; ವಿಧಾನಸಭೆ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

ಹಾಸ್ಟೆಲ್ ಕಟ್ಟುವುದಕ್ಕೆ, ರಸ್ತೆಗೆ ಯಾವುದಕ್ಕೂ ಹಣ ಇಲ್ಲ ಇವರ ಬಳಿ. ಇವರಿಗೆ ಧಮ್ ಇಲ್ಲ, ಹೇಡಿ ಸರ್ಕಾರ ಇದು. 2.5 ಲಕ್ಷ ಕೋಟಿ ಕರ್ನಾಟಕದಿಂದ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಹೋಗ್ತಿದೆ. ಆದರೆ ನಮಗೆ 34,198 ಕೋಟಿ ಮಾತ್ರ ವಾಪಸ್ ಕೊಟ್ಟಿದ್ದು. ಬರೀ ಪೆಟ್ರೋಲ್ ಮೇಲೆಯೇ 32.98 ರೂ. ಎಕ್ಸೈಸ್ ಡ್ಯೂಟಿ ಅಂತ ಲೀಟರ್​ಗೆ ವಸೂಲಿ ಮಾಡ್ತಾರೆ. ಹೆಚ್ಚುವರಿ ಎಕ್ಸೈಸ್ ಡ್ಯೂಟಿ ಕಡಿಮೆ ಮಾಡಿ ಅಂದ್ರೆ ಮಾಡಲ್ಲ. ಕಡಿಮೆ ಮಾಡಿದ್ರೆ ಗ್ರಾಹಕರಿಗೆ ಅನುಕೂಲ ಆಗುತ್ತೆ, ಇವರ ಗಂಟೇನು ಹೋಗೋದು. ಕೇಂದ್ರ ಸರ್ಕಾರದಿಂದ ನಮ್ಮ ಅನುದಾನ ಕಡಿತವಾಗಿವೆ ಸಿದ್ದರಾಮಯ್ಯ ಹೇಳಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.