ಬೆಂಗಳೂರು: ರಮೇಶ್ ಜಾರಕಿಹೊಳಿ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಸಿಎಂ ಹಾಗು ಗೃಹಸಚಿವ ಬೊಮ್ಮಾಯಿ ಆರೋಪಿಯ ಪರ ನಿಂತಿದ್ದಾರೆ ಎಂದು ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ನಿರ್ಭಯಾ ಕೇಸ್ನ ನಿಯಮ ಇಲ್ಲಿ ಪಾಲನೆಯಾಗಿಲ್ಲ. ಅನೇಕ ಬೆದರಿಕೆ ಕರೆಗಳು ನಮಗೆ ಬರುತ್ತಿವೆ. ಯುವತಿ ಮತ್ತು ಆರೋಪಿ ಒಂದೇ ಜಾತಿಯವರು. ನೀವು ಮಧ್ಯಪ್ರವೇಶ ಮಾಡಬೇಡಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ಹೈಕೋರ್ಟ್ನಲ್ಲಿ ಪೋಷಕರು ಅರ್ಜಿ ಸಲ್ಲಿಸಿದ್ದಾರೆ, ಯುವತಿ ಮೇಜರ್ ಆಗಿದ್ದಾಳೆ, ಆಕೆಯ ನಿರ್ಧಾರಗಳು ಸ್ವತಂತ್ರವಾಗಿರುತ್ತೆ. ನಮಗೂ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇದೆ. ಯುವತಿ ಒತ್ತಡದಿಂದ ಹೇಳಿಕೆ ನೀಡಿದ್ದಾಳೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಒತ್ತಡದಲ್ಲಿರುವವರು ಯಾರು ಎಂಬುದನ್ನು ಪೋಷಕರೇ ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ ಎಂದರು.
ಇಲ್ಲಿ ಯುವತಿ ಹೇಳಿದ ಹೇಳಿಕೆ ಮುಖ್ಯವಾಗುವುದೇ ಹೊರತು, ಅವರ ಪೋಷಕರದ್ದಲ್ಲ. ಯುವತಿ ಹಾಗೂ ಅವರ ವಕೀಲರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ. ನ್ಯಾಯಾಲಯ ನಿಷ್ಪಕ್ಷಪಾತವಾಗಿದೆ, ನಾವು ನ್ಯಾಯಾಲಯದ ಅಂಗಳಕ್ಕೆ ಹೋಗುತ್ತೇವೆ ಎಂದು ಹೇಳಿದರು.