ಬೆಂಗಳೂರು: ವಿವಿಧ ದುರುಪಯೋಗಳ ಆರೋಪದಡಿ ಓಲಾ ಕಂಪನಿಯ ಲೈಸೆನ್ಸ್‌ನ್ನ ಸರ್ಕಾರ ಮೊನೆಯಷ್ಟೇ ಬ್ಯಾನ್ ಮಾಡಿತ್ತು. ಇದ್ರಿಂದ ಯಾರಿಗೆ ಎಷ್ಟು ಲಾಭ ಆಯ್ತೋ ಗೊತ್ತಿಲ್ಲ. ಆದ್ರೆ ಕ್ಯಾಬ್ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಬಾರೀ ಹೊಡೆತ ಬಿದ್ದಿತ್ತು, ಹೀಗಾಗಿ ಸರ್ಕಾರ ನಿಷೇಧದ ಆದೇಶವನ್ನ ಹಿಂಪಡೆದಿದೆ.
ಕಳೆದ 2 ದಿನಗಳ ಹಿಂದೆ ಓಲಾ ಕ್ಯಾಬ್ ಸಂಚಾರವನ್ನು ಆರು ತಿಂಗಳ ಅವಧಿಗೆ ನಿಷೇಧಿಸಿ, ಸೇವೆ ಪರವಾನಗಿ ರದ್ದುಗೊಳಿಸಿ ಸಾರಿಗೆ ಇಲಾಖೆ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಈ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿ, ಎಂದಿನಂತೆ ಓಲಾ ಕ್ಯಾಬ್ ಸಂಚರಿಸಲಿದೆ ಅಂತ ತಿಳಿಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯು ಮಾರ್ಚ್ 18ರಂದು ಓಲಾ ಕಂಪನಿಗೆ ನೋಟಿಸ್ ಜಾರಿ ಮಾಡಿತ್ತು. ಓಲಾ ಕಂಪನಿಯು ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿ ಅಗ್ರಿಗೇಟರ್ ರೂಲ್ಸ್ 2016ರನ್ನು ಉಲ್ಲಂಘಿಸಿದ ಆರೋಪ ಹೊತ್ತಿದೆ. ಆದ್ರೆ ಓಲಾ ನಿಷೇಧ ಮಾಡಿದ್ದಕ್ಕೆ ಸಾರ್ವಜನಿಕರಿಗೆ ತೊಂದರೆ ಆಗ್ತಿದೆ. ಹೀಗಾಗಿ ನಿಷೇಧವನ್ನ ಹಿಂಪಡೆಯಲಾಗಿದೆ ಅಂತ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದಾರೆ.
ಬಿಳಿ ನಾಮಫಲಕದ ವಾಹನಗಳನ್ನು ಬಾಡಿಗೆ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ಓಲಾ ಸಂಸ್ಥೆ ಈ ನಿಯಮವನ್ನು ಕಡೆಗಣಿಸಿ ಬಿಳಿ ನಾಮಫಲಕದ ವಾಹನಗಳನ್ನು ಕೂಡ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿತ್ತು ಎಂದು ತಿಳಿಸಿದೆ. ಅಗ್ರಿಗೇಟರ್ ನಿಯಮದ 11(1)ಸೇಕ್ಷನ್ ಪ್ರಕಾರ 6 ತಿಂಗಳ ಕಾಲ ಓಲಾ ಸೇವೆಯನ್ನು ಸ್ಥಗಿತಗೊಳಿಸಿ, ಫೆಬ್ರವರಿ 15ರಂದು ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಕಂಪನಿ ಲೈಸೆನ್ಸ್ ಜುಲೈ ವರಿಗೆ ವಿಸ್ತರಣೆಗೆ ಸರ್ಕಾರ ತೀರ್ಮಾನ
ನಿಯಮಾವಳಿ ಉಲ್ಲಂಘನೆ ಹಿನ್ನೆಲೆ ಲೈಸೆನ್ಸ್ 6 ತಿಂಗಳು ಅಮಾನತು ಮಾಡಲಾಗಿತ್ತು. ಪ್ರಯಾಣಿಕರಿಗೆ ತೊಂದರೆ ಆಗುವ ಕಾರಣ ಮತ್ತೆ ಲೈಸೆನ್ಸ್ ನೀಡೋದಕ್ಕೆ ಮುಂದಾದ ಸರ್ಕಾರ,ಈ ಸಂಬಂಧ ಸಾರಿಗೆ ಸಚಿವ ತಮ್ಮಣ್ಣ ಇಲಾಖೆ ಆಯುಕ್ತ ಇಕ್ಕೇರಿಗೆ ಸೂಚನೆ ಜುಲೈ ವರಿಗೆ ಲೈಸೆನ್ಸ್ ವಿಸ್ತಾರಣೆ ಮಾಡುವಂತೆ ಸೂಚನೆ ಷರತ್ತುಗಳನ್ನು ವಿಧಿಸಿ ಲೈಸೆನ್ಸ್ ನೀಡುವಂತೆ ಸೂಚನೆ