ETV Bharat / state

ಡ್ರಗ್ಸ್​ ಪೆಡ್ಲರ್ ವಿನಯ್​ನಿಂದ ಬಯಲಾಗುತ್ತಾ ಮತ್ತಷ್ಟು ನಟಿಯರ ಬಣ್ಣ ? - ಡ್ರಗ್ ಪೆಡ್ಲರ್ ವಿನಯ್​ನಿಂದ್ ಮತ್ತೊಷ್ಟು ನಟಿಯರಿಗೆ ಸಂಕಷ್ಟ

ವಿನಯ್ ಸ್ಯಾಂಡಲ್​ವುಡ್ ಡ್ರಗ್ಸ್​ ಆರೋಪ ಪ್ರಕರಣದಲ್ಲಿ ಪೆಡ್ಲರ್ ಆಗಿದ್ದು, ಹಲವಾರು ಮಂದಿಗೆ ಮಾದಕ ವಸ್ತು ಪೂರೈಸಿದ್ದ ಎನ್ನಲಾಗ್ತಿದೆ. ನಟಿಮಣಿಯರ ಹೇಳಿಕೆ ಆಧರಿಸಿ ಸಿಸಿಬಿ ತಂಡ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಖೆಡ್ಡಾಕ್ಕೆ ‌ಕೆಡವಿದೆ. ಈತನಿಂದ ಇನ್ನಷ್ಟು ಜನರ ಬಣ್ಣ ಬಯಲಾಗುವ ಸಾಧ್ಯತೆಯಿದೆ.

The Sandalwood Drugs Case
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ
author img

By

Published : Dec 22, 2020, 10:26 AM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಡೀಲ್ ಆರೋಪ ಪ್ರಕರಣದಲ್ಲಿ ಆರೋಪಿ ವಿನಯ್ ಬಂಧನ ಬೆನ್ನಲ್ಲೇ ಕೆಲ ನಟಿಯರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಡ್ರಗ್ಸ್​ ಡೀಲ್ ಪ್ರಕರಣದಲ್ಲಿ ಎ12 ಆಗಿರುವ ವಿನಯ್ ಜೊತೆ ಸ್ಯಾಂಡಲ್​ವುಡ್​ನ ಕೆಲ ನಟಿಯರು ಸಂಪರ್ಕ ಹೊಂದಿರುವ ಮಾಹಿತಿ ಸದ್ಯ ಆರೋಪಿ ಮೊಬೈಲ್ ರಿಟ್ರೈವ್ ಮಾಡುವಾಗ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ.

ಅಷ್ಟು ಮಾತ್ರವಲ್ಲದೆ ಖ್ಯಾತ ನಟಿಯರು ವಿನಯ್ ಜೊತೆ ಬಹಳ ಆತ್ಮೀಯತೆಯಿಂದ ಇದ್ದಿದ್ದು, ಅಮೆರಿಕದ ಡಿಸ್ನಿ ಲ್ಯಾಂಡ್, ಟುಮಾರೊ ಲ್ಯಾಂಡ್ ಗೆ ವಿನಯ್ ಜೊತೆ ಹೋಗಿರೊ ಗುಮಾನಿ ಸಿಸಿಬಿಗೆ ಇದೆ. ಹಾಗೆ ಹಲವಾರು ಡ್ರಗ್ಸ್​ ಪಾರ್ಟಿಗಳಲ್ಲಿ ವಿನಯ್ ಜೊತೆ ಖ್ಯಾತ ನಟಿ ಹೋಗಿದ್ದರ ಬಗ್ಗೆ ಮಾಹಿತಿ ಸಿಕ್ಕಿದ್ದು, ವಿನಯ್ ನೀಡಿದ ಮಾಹಿತಿ ಆಧಾರದ ಮೇಲೆ ನಟಿಗೆ ನೋಟಿಸ್ ನೀಡಲು ಸಿಸಿಬಿ ಸಿದ್ಧತೆ ನಡೆಸಿದೆ ಎನ್ನಲಾಗ್ತಿದೆ. ಒಂದು ವೇಳೆ ಮಾಹಿತಿ ಖಚಿತ ಆದ್ರೆ ಮತ್ತೆ ಸ್ಯಾಂಡಲ್​ವುಡ್​ನ ಕೆಲ ನಟಿಮಣಿಯರು ಸಿಸಿಬಿ ‌ಬಲೆಗೆ ಬೀಳುವ ಸಾಧ್ಯತೆಯಿದೆ.

ವಿನಯ್ ಹಲವಾರು ಮಂದಿಗೆ ಡ್ರಗ್ಸ್​​ ಪೂರೈಸಿದ್ದ ಎನ್ನಲಾಗ್ತಿದೆ. ಬಂಧಿತ ನಟಿಮಣಿಯರ ಹೇಳಿಕೆ ಆಧಾರದ ಮೇರೆಗೆ ಸಿಸಿಬಿ ತಂಡ ಈತನನ್ನು ಖೆಡ್ಡಾಕ್ಕೆ ‌ಕೆಡವಿದೆ.

ಓದಿ : ಅಪರಿಚಿತ ವಾಹನ ಡಿಕ್ಕಿ : ಗುಬ್ಬಿಯಲ್ಲಿ ಇಬ್ಬರು ಬೈಕ್ ಸವಾರರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.